ಕನ್ನಡಪ್ರಭದ ಬ್ರಹ್ಮಾನಂದ, ಸುವರ್ಣ ನ್ಯೂಸ್‌ ಅಡಿವೆಪ್ಪ ಸೇರಿ 13 ಮಾಧ್ಯಮ ಪ್ರತಿನಿಧಿಗಳಿಗೆ ರಾಜ್ಯೋತ್ಸವ ಗೌರವ

KannadaprabhaNewsNetwork |  
Published : Nov 01, 2026, 04:15 AM IST
Award

ಸಾರಾಂಶ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ವೃತ್ತಿಪರ ಬದ್ಧತೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಕನ್ನಡಪ್ರಭ ದಿನಪತ್ರಿಕೆಯ ಬೆಳಗಾವಿ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಸೇರಿದಂತೆ ಬೆಳಗಾವಿ ಜಿಲ್ಲೆಯ 13 ಮಾಧ್ಯಮ ಪ್ರತಿನಿಧಿಗಳು 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಗೌರವ ಸನ್ಮಾನಕ್ಕೆ ಆಯ್ಕೆ

ಬೆಳಗಾವಿ : ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹಾಗೂ ವೃತ್ತಿಪರ ಬದ್ಧತೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಕನ್ನಡಪ್ರಭ ದಿನಪತ್ರಿಕೆಯ ಬೆಳಗಾವಿ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಸೇರಿದಂತೆ ಬೆಳಗಾವಿ ಜಿಲ್ಲೆಯ 13 ಮಾಧ್ಯಮ ಪ್ರತಿನಿಧಿಗಳು 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಗೌರವ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.

ಮುದ್ರಣ, ವಿದ್ಯುನ್ಮಾನ, ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು, ತಾಲೂಕು ವರದಿಗಾರರು ಮತ್ತು ಪತ್ರಿಕಾ ವಿತರಕರ ಸೇವೆ ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ನ.1 ರಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಗಣ್ಯರು ಆಯ್ಕೆಯಾದ ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಲಿದ್ದಾರೆ.

ಸನ್ಮಾನಿತರ ವಿವರ:

ಮುದ್ರಣ ಮಾಧ್ಯಮ ವಿಭಾಗದಲ್ಲಿ ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ ಬಹದ್ದೂರ ದೇಸಾಯಿ, ಕನ್ನಡಪ್ರಭ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ, ಪ್ರಜಾವಾಣಿಯ ಜಿಲ್ಲಾ ವರದಿಗಾರ ಇಮಾಮಹುಸೇನ್ ಗೂಡುನವರ ಹಾಗೂ ಲೋಕದರ್ಶನ ಪತ್ರಿಕೆಯ ಛಾಯಾಗ್ರಾಹಕ ವಿಶ್ವನಾಥ ದೇಸಾಯಿ ಆಯ್ಕೆಯಾಗಿದ್ದಾರೆ.

ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಆರ್.ಕನ್ನಡದ ಜಿಲ್ಲಾ ವರದಿಗಾರ ಮೈಲಾರಿ ಪಟಾತ್, ನ್ಯೂಸ್ 18 ಚಿಕ್ಕೋಡಿಯ ವರದಿಗಾರ ಲೋಹಿತ್ ಶಿರೋಳ, ಸುವರ್ಣ ನ್ಯೂಸ್ ಕ್ಯಾಮರಾಮನ್ ಅಡಿವೆಪ್ಪ ಪಾಟೀಲ ಹಾಗೂ ಟಿವಿ 9 ಕ್ಯಾಮರಾಮನ್ ಸದಾಶಿವ ಜಾಧವ ಅವರಿಗೆ ಗೌರವ ಲಭಿಸಿದೆ.

ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ವಿಭಾಗದ

ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ವಿಭಾಗದಲ್ಲಿ ಲೋಕದರ್ಶನ ಸಂಪಾದಕ ಶರತಚಂದ್ರ ದೇಸಾಯಿ ಹಾಗೂ ಕನ್ನಡಮ್ಮ ಸಂಪಾದಕ ರಾಜಕುಮಾರ್ ಟೋಪಣ್ಣವರ ಆಯ್ಕೆಯಾಗಿದ್ದಾರೆ.

ತಾಲೂಕು ವರದಿಗಾರರ ವಿಭಾಗದಲ್ಲಿ ವಿಜಯವಾಣಿ ಅಥಣಿ ವರದಿಗಾರ ರಾಜು ಗಾಲಿ ಹಾಗೂ ಕನ್ನಡಪ್ರಭ ಯಮಕನಮರಡಿ ವರದಿಗಾರ ಎ.ಎಂ.ಕರ್ನಾಚಿ, ಪತ್ರಿಕಾ ವಿತರಕರ ವಿಭಾಗದಲ್ಲಿ ಯಮಕನಮರಡಿಯ ಭೀಮಪ್ಪ ಕೋತೆಕರ ಸನ್ಮಾನಕ್ಕೆ ಭಾಜನರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ