ಕನ್ನಡಪ್ರಭ ವಾರ್ತೆ ಕಲಾದಗಿ
ಗುರುಲಿಂಗೇಶ್ವರ ಪ್ರೌಢ ಶಾಲೆ ಮೈದಾನದಲ್ಲಿ ಮಧ್ಯಾಹ್ನ ೪ ಗಂಟೆಗೆ ಸಂಘದ ಧ್ವಜಾರೋಹಣ ನೆರವೇರಿಸಿ ಸಂಘದ ಪ್ರಾರ್ಥನೆ ಬಳಿಕ ಗುರುಲಿಂಗೇಶ್ವರ ಪ್ರೌಢಶಾಲೆ ಮೈದಾನದಿಂದ ಹೊರಟ ಪಥಸಂಚಲನ ಬಸ್ ನಿಲ್ದಾಣ, ರಂಗ ಮಂದಿರ, ಅಂಬೇಡ್ಕರ್ ಸರ್ಕಲ್ , ಸರ್ಕಾರಿ ಹೆಣ್ಣು ಮಕ್ಕಳ ಶಾಲೆ , ಗಡ್ಡಿ ಓಣಿ , ಹೊಸೂರ ಚೌಕ್. ಕೊಬ್ಬರಿ ಕ್ರಾಸ್ ಪಂಚಾಯತಿ ಕಾರ್ಯಾಲಯ, ಕಾಯಿಪಲ್ಲೆ ಮಾರುಕಟ್ಟೆ, ಸವ್ವಾ ಕಟ್ಟಿ, ಮರಾಠ ಓಣಿ, ಟೆಲಿಫೋನ್ ಆಫೀಸ್, ಬಸವೇಶ್ವರ ಸರ್ಕಲ್, ಬಸ್‌ಸ್ಟ್ಯಾಂಡ್ ಮಾರ್ಗವಾಗಿ ಗುರುಲಿಂಗೇಶ್ವರ ಮೈದಾನಕ್ಕೆ ತಲುಪಿ ಸಮಾರಂಭವಾಗಿ ಮಾರ್ಪಾಡಾಯಿತು. 300ಕ್ಕೂ ಅಧಿಕ ಸ್ವಯಂ ಸೇವಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.ಪಥಸಂಚಲನ ಸಾಗುವ ಮಾರ್ಗದಲ್ಲಿ ಕೇಸರಿ ಬಾವುಟ, ಮಹಿಳೆಯರು ರಂಗೋಲಿ ಬಿಡಿಸಿ ಅಲಂಕಾರಗೊಂಡಿದ್ದವು. ಪಥಸಂಚಲನ ನೋಡಲು ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಜನ ಆಗಮಿಸಿದ್ದರು. ಪಥ ಸಂಚಲನ ಮೇಲೆ ಪುಷ್ಪವೃಷ್ಟಿಗೈರು ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸಿದರು.ಪಥಸಂಚಲದ ಮಾರ್ಗದುದ್ದಕ್ಕೂ ಸಾರ್ವಜನಿಕರು ಹರಹರ ಮಹಾದೇವ, ವೀರ ಶಿವಾಜಿ ಅಂಭಾ ಭವಾನಿ, ಅವಾಜ್ದೊ ಹಮ್ ಏಕ್ ಹೈ, ಭಾರತ್ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಮೊಳಗಿಸಿದರು. ಅಲ್ಲಲ್ಲಿ ಪುಠಾಣಿ ಮಕ್ಕಳು ರಾಷ್ಟ್ರೀಯ ಪುರುಷರ ವೇಷಭೂಷಣ ತೊಟ್ಟು ಪಥಸಂಚಲನಕ್ಕೆ ಸ್ವಾಗತ ಕೋರಿದರು.
ಗಣವೇಷಧಾರಿ ಸ್ವಯಂ ಸೇವಕರ ಘೋಷ್ ಪ್ರದರ್ಶನ, ದಂಡ ಪ್ರದರ್ಶನ, ದಂಡ ವ್ಯಾಯಾಮ, ಉಪವಿಷ್ಠ ವ್ಯಾಯಾಮ, ಸೂರ್ಯನಮಸ್ಕಾರ ಪ್ರದರ್ಶಗಳು ಸಾರ್ವಜನಿಕರ ಗಮನ ಸೆಳೆದವು.ಪಥಸಂಚನಕ್ಕೆ ಪೋಲಿಸ್ ಇಲಾಖೆ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.