ಕೀಲಾರ ಗ್ರಾಮದ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಕೆ.ಎಂ.ರಾಜು ಆಯ್ಕೆ

KannadaprabhaNewsNetwork | Published : May 23, 2025 12:24 AM
ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಂ.ರಾಜು ಹಾಗೂ ಉಪಾಧ್ಯಕ್ಷರಾಗಿ ಕೆ.ಸಿ.ಧರ್ಮೇಂದ್ರ ಅವಿರೋಧವಾಗಿ ಆಯ್ಕೆ. ಮುಖಂಡರಿಂದ ಸಂಭ್ರಮಾಚರಣೆ.
Follow Us

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೀಲಾರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಂ.ರಾಜು ಹಾಗೂ ಉಪಾಧ್ಯಕ್ಷರಾಗಿ ಕೆ.ಸಿ.ಧರ್ಮೇಂದ್ರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಕೆ.ಎಂ.ರಾಜು ಹಾಗೂ ಕೆ.ಸಿ.ಧರ್ಮೇಂದ್ರ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಘೋಷಿಸಿದರು.

ಇದೇ ವೇಳೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು. ನಿರ್ದೇಶಕರುಗಳಾದ ಗೌರೀಶ್, ವೀರೇಶ್, ನಿತ್ಯಾನಂದ, ಮಲ್ಲೇಶ್ ಕೆ.ಬಿ.ಚಿಕ್ಕಚನ್ನಯ್ಯ, ಗ್ರಾಪಂ ಅಧ್ಯಕ್ಷ ಶಿವಾನಂದ, ಮುಖಂಡರಾದ ಶಂಕರ್, ರಘು ಸೇರಿದಂತೆ ಹಲವರು ಇದ್ದರು.

ಡಿ.ಕೆ.ಪ್ರಭಾಕರ್ ಆಯ್ಕೆ

ಮದ್ದೂರು: ಪಟ್ಟಣದ ಸಂಸ್ಕೃತಿ ಅಲೈಯನ್ಸ್ ಕ್ಲಬ್ ನ 2025 -26ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಡಿ.ಕೆ.ಪ್ರಭಾಕರ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಸಂಜೆ ಮಳವಳ್ಳಿ ರಸ್ತೆಯ ಎಂ.ಎಂ.ಪಾರ್ಟಿ ಹಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ನೂತನ ಅಧ್ಯಕ್ಷ ಡಿ.ಕೆ. ಪ್ರಭಾಕರ್ ಮತ್ತು ಅವರ ತಂಡ ಪದಗ್ರಹಣ ಮಾಡಲಿದೆ ಎಂದು ಅಲೈಯನ್ಸ್ ಜಿಲ್ಲಾ ರಾಜ್ಯಪಾಲ ಎಚ್. ಮಾದೇಗೌಡ ತಿಳಿಸಿದ್ದಾರೆ.

29ರೊಳಗೆ ಶಾಲೆಗೆ ದಾಖಲಾಗಲು ಸೂಚನೆ

ಮಳವಳ್ಳಿ: ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿಯ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ)ದ 2025-28ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಮೇ 29ರೊಳಗೆ ಶಾಲೆಗೆ ದಾಖಲಾಗುವಂತೆ ತಿಳಿಸಲಾಗಿದೆ. ಈಗಾಗಲೇ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾಮಾನ್ಯ ಗುಂಪು-70, ಎಸ್.ಸಿ-56, ಎಸ್.ಟಿ-24, ಸಿ-1-64, 2ಎ-53, 2ಬಿ-46, 3ಎ-69, ಎಬಿ-59 ಅಂಕಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಮೇ 29ರೊಳಗೆ ಶಾಲೆಗೆ ದಾಖಲಾತಿ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9945460001 ಸಂಪರ್ಕಿಸಬಹುದು ಎಂದು ಮುಖ್ಯಶಿಕ್ಷಕ ಶಿವರಾಜು ತಿಳಿಸಿದ್ದಾರೆ.ಇಂದು ವಿದ್ಯುತ್ ವ್ಯತ್ಯಯ

ಮದ್ದೂರು: ತಾಲೂಕಿನ ಬೆಸಗರಹಳ್ಳಿ 66/11 ವಿತರಣಾ ಕೇಂದ್ರದಲ್ಲಿ ಒಂದನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮೇ 23ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿತರಣಾ ಕೇಂದ್ರ ವ್ಯಾಪ್ತಿಯ ಬೆಸಗರಹಳ್ಳಿ, ಕೋಣಸಾಲೆ, ನಿಲುವಾಗಿಲು, ಕೀಳಘಟ್ಟ, ಸೊಳ್ಳೆಪುರ, ಕೊತ್ತನಹಳ್ಳಿ, ಮುಳ್ಳಹಳ್ಳಿ, ಮರಳಿಗ, ಮಾರಸಿಂಗನಹಳ್ಳಿ, ಹೊಸಕೆರೆ, ಬೆಳತೂರು ಹಾಗೂ ಚಾಪುರ ದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಚೆಸ್ಕಾಂನ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಜನಸಂಪರ್ಕ ಸಭೆ

ಮಳವಳ್ಳಿ: ನಗರ ಮತ್ತು ಗ್ರಾಮೀಣ ಸೆಸ್ಕ್ ಉಪವಿಭಾಗಗಳ ಕಚೇರಿ ಆವರಣದಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಟಿ. ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ಮೇ 23ರಂದು ಜನಸಂಪರ್ಕ ಸಭೆ ನಡೆಯಲಿದೆ. ಬೆಳಗ್ಗೆ 11ಗಂಟೆಯಿಂದ 12 ಗಂಟೆಯವರೆಗೆ ನಗರ ಹಾಗೂ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಗ್ರಾಹಕರು ತಮ್ಮ ದೂರುಗಳನ್ನು ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.