ದಸರಾ ಸಂದರ್ಭದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಸಿಗಲಿ

KannadaprabhaNewsNetwork |  
Published : Aug 13, 2024, 12:48 AM IST
21 | Kannada Prabha

ಸಾರಾಂಶ

ಮೈಸೂರಿನಲ್ಲಿ ಸ್ಥಳೀಯ ಕಲಾವಿದರನ್ನ ಪ್ರೋತ್ಸಾಹಿಸಲು ದಸರಾ ವಸ್ತು ಪ್ರದರ್ಶನದಲ್ಲಿ ಸಾಂಸ್ಕೃತಿಕ ಚಟುವಟಿಕೆಯನ್ನು ವರ್ಷಪೂರ್ತಿ ನಿರಂತರವಾಗಿ ಆಯೋಜಿಸಬೇಕಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿನ ಕರ್ನಾಟಕ 50ರ ಸಂಭ್ರಮ ಸಾಂಸ್ಕೃತಿಕ ವೇದಿಕೆಯಲ್ಲಿ ದಾಸವಾಣಿ ಸಂಗೀತ ಕಾರ್ಯಕ್ರಮಕ್ಕೆ ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಚಾಲನೆ ನೀಡಿದರು.

ಚಾಮುಂಡಿಪುರಂ ಬಡಾವಣೆಯ ಶ್ರೀನಿಧಿ ಭಜನಾ ಮಂಡಳಿ ವತಿಯಿಂದ ದಾಸವಾಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ಮೈಸೂರಿನಲ್ಲಿ ಸ್ಥಳೀಯ ಕಲಾವಿದರನ್ನ ಪ್ರೋತ್ಸಾಹಿಸಲು ದಸರಾ ವಸ್ತು ಪ್ರದರ್ಶನದಲ್ಲಿ ಸಾಂಸ್ಕೃತಿಕ ಚಟುವಟಿಕೆಯನ್ನು ವರ್ಷಪೂರ್ತಿ ನಿರಂತರವಾಗಿ ಆಯೋಜಿಸಬೇಕಿದೆ ಎಂದರು.

ದಸರಾ ವಸ್ತುಪ್ರದರ್ಶನಕ್ಕೆ ಕಲಾಕ್ಷೇತ್ರದಲ್ಲಿ ತನ್ನದೆಯಾದ ಹಿನ್ನೆಲೆ ಇದೆ. ಮೈಸೂರು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ ಅವರ ಸುಗಮ ಸಂಗೀತ, ವರನಟ ಡಾ. ರಾಜಕುಮಾರ್, ಪಿಬಿಎಸ್, ಎಸ್.ಪಿಬಿ ಅವರ ಚಿತ್ರಗೀತೆಗಳ ಕಾರ್ಯಕ್ರಮ, ಮಾಸ್ಟರ್ ಹಿರಣಯ್ಯ ಅವರ ನಾಟಕ, ಚಾಮರಾಜನಗರ ನಂಜನಗೂಡು ಕಲಾವಿದರ ಜಾನಪದ ಕಲಾವಿದರ ಪ್ರದರ್ಶನ, ಭರತನಾಟ್ಯ, ನೃತ್ಯರೂಪಕ, ಗಝಲ್, ಹೀಗೆ ಹಲವು ಕಲಾಪ್ರಕಾರಗಳು, ಜನಮಾನಸದಲ್ಲಿ ಬೇರೂರಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತ್ಯಾಗರಾಜರು ಭಕ್ತ ಕನಕದಾಸರು, ಪರಂದರದಾಸರ ದಾಸವಾಣಿ ಪ್ರದರ್ಶನಕ್ಕೆ ಸಾವಿರಾರು ಮಹಿಳಾ ಕಲಾವಿದರನ್ನು ಸಂಘಟಿಸಬಹುದು ಎಂದರು.

ಹಾಗಾಗಿ ದಾಸವಾಣಿ ಸಮಾವೇಶಗಳನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಲು ಮುಂದಗಾಲಿ ಎಂದರು.

ಕರ್ನಾಟಕ ಸಂಭ್ರಮದ ಕೃಷ್ಣ, ನಿರೂಪಕ ಅಜಯ್ ಶಾಸ್ತ್ರಿ, ಗುರುರಾಜ್, ಶ್ರೀನಿಧಿ ಭಜನಾ ಮಂಡಳಿ ಅಧ್ಯಕ್ಷೆ ಪ್ರಭಾ, ಸುಜಾತಾ, ಸುಧಾ, ಅಂಬಿಕಾ, ಅರ್ಪಿತಾ, ಸುಧಾ ಬಾಲಕೃಷ್ಣ, ರೂಪಾ, ನೇತ್ರಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹನೂರು ಕ್ರೀಡಾಂಗಣ ಅಭಿವೃದ್ಧಿಗೆ ಶುಕ್ರದೆಸೆ
ಕೊಪ್ಪ ಒಕ್ಕಲಿಗರ ಸಂಘಕ್ಕೆ ಸಹದೇವ್ ಬಾಲಕೃಷ್ಣ ಅಧ್ಯಕ್ಷರಾಗಿ ಪುನರಾಯ್ಕೆ