ಮಧುಗಿರಿ ಶಾಸಕ, ಹಿರಿಯ ಸಹಕಾರಿ ಕೆ.ಎನ್. ರಾಜಣ್ಣನವರ 76 ನೇ ಜನ್ಮದಿನವನ್ನು ಸೋಮವಾರ ಕೆ.ಎನ್.ಆರ್.ಅಭಿಮಾನಿ ಬಳಗದವರು ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು ಮಧುಗಿರಿ ಶಾಸಕ, ಹಿರಿಯ ಸಹಕಾರಿ ಕೆ.ಎನ್. ರಾಜಣ್ಣನವರ 76 ನೇ ಜನ್ಮದಿನವನ್ನು ಸೋಮವಾರ ಕೆ.ಎನ್.ಆರ್.ಅಭಿಮಾನಿ ಬಳಗದವರು ಸಂಭ್ರಮದಿಂದ ಆಚರಿಸಿದರು.ನಗರದ ಗುಂಚಿ ವೃತ್ತದ ಟಿಎಪಿಸಿಎಂಎಸ್ ಕಟ್ಟಡ ಬಳಿ ನಡೆದ ಸಮಾರಂಭದಲ್ಲಿ ಕೆ.ಎನ್. ರಾಜಣ್ಣನವರ ಪುತ್ರಿ ಆರ್.ರಶ್ಮಿ ಗಿರೀಶ್ ಅವರು ಅನ್ನಸಂತರ್ಪಣೆಗೆ ಚಾಲನೆ ನೀಡಿದರು .ನಂತರ ಪೌರಕಾರ್ಮಿಕರೊಂದಿಗೆ ಬೃಹತ್ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರ ಸೇವೆಯನ್ನು ಗೌರವಿಸಲಾಯಿತು.ಈ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು. ಈ ಬಾರಿಯ ಬಾಬು ಜಗಜೀವನರಾಮ್ ಪ್ರಶಸ್ತಿ ಪುರಸ್ಕೃತರಾದ ನಗರಸಭೆ ಮಾಜಿ ಸದಸ್ಯ ನರಸಿಯಪ್ಪ ಅವರನ್ನು ಈ ವೇಳೆ ಗೌರವಿಸಿ ಅಭಿನಂದಿಸಲಾಯಿತು.
ಈ ವೇಳೆ ಹಿರಿಯ ರಂಗ ನಿರ್ದೇಶಕ ಡಾ. ಲಕ್ಷ್ಮಣದಾಸ್, ಡಾ.ಎಸ್.ನಾಗಣ್ಣ, ಕೆ.ಎನ್.ಆರ್‌ಅಭಿಮಾನಿ ಬಳಗದ ಮುಖಂಡರಾದ ನಗರಸಭೆ ಮಾಜಿಅಧ್ಯಕ್ಷ ಟಿ.ಪಿ.ಮಂಜುನಾಥ್, ವಕೀಲ ಪಿ.ಆರ್.ನಾರಾಯಣಗೌಡ, ಲಕ್ಷ್ಮೀನಾರಾಯಣ, ಟಿಎಪಿಸಿಎಂಎಸ್ ನಿರ್ದೇಶಕರಾದ ಕುಂಕುಮನಹಳ್ಳಿ ನವರತ್ನಕುಮಾರ್, ಜಿಯಾವುಲ್ಲಾ, ಕಾರ್ಯದರ್ಶಿ ರವಿಕುಮಾರ್, ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದಅಧ್ಯಕ್ಷ ಟಿ.ಎಚ್. ಶಿವಾನಂದ್, ನಿಸಾರ್‌ಅಹ್ಮದ್, ಕುಂದೂರು ಮುರಳಿ, ಮಂಜೇಶ್‌ಒಲಂಪಿಕ್, ರಮಣರೆಡ್ಡಿ, ಎಂ.ಎಚ್.ನಾಗರಾಜು, ಪಿ.ಎನ್. ರಾಮಯ್ಯ,ಎಂ.ಜೆ.ಶಿವಣ್ಣ, ನಟರಾಜಶೆಟ್ಟಿ, ನಂಜೇಗೌಡ, ರಂಗರಾಜು, ನರಸಿಯಪ್ಪ, ಕೈದಾಳ ರಮೇಶ್‌ಸೇರಿದಂತೆ ವಿವಿಧ ಸಹಕಾರ ಸಂಸ್ಥೆ, ಸಂಘಸಂಸ್ಥೆಗಳು ಪ್ರಮುಖರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.