ಕೆ.ನಂದೀಶ್‌ ಬೇಗೂರು ಫ್ಯಾಕ್ಸ್‌ಗೆ ನೂತನ ಅಧ್ಯಕ್ಷ

KannadaprabhaNewsNetwork | Updated : Apr 04 2025, 12:51 AM IST

ಸಾರಾಂಶ

ತಾಲೂಕಿನ ಬೇಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡರಾದ ಅರೇಪುರ ಕೆ.ನಂದೀಶ್‌, ಉಪಾಧ್ಯಕ್ಷರಾಗಿ ಸದಾಶಿವಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬೇಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡರಾದ ಅರೇಪುರ ಕೆ.ನಂದೀಶ್‌, ಉಪಾಧ್ಯಕ್ಷರಾಗಿ ಸದಾಶಿವಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ. ನಂದೀಶ್‌, ಉಪಾಧ್ಯಕ್ಷ ಸ್ಥಾನಕ್ಕೆ ಸದಾಶಿವಮೂರ್ತಿ ನಾಮಪತ್ರ ಸಲ್ಲಿಸಿದರು.

ಇತರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅಧ್ಯಕ್ಷರಾಗಿ ಕೆ. ನಂದೀಶ್‌, ಉಪಾಧ್ಯಕ್ಷರಾಗಿ ಸದಾಶಿವಮೂರ್ತಿ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್. ನಾಗೇಶ್‌ ಘೋಷಿಸಿದರು.

ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರಾದ ತಗ್ಗಲೂರು ತಮ್ಮಯ್ಯಪ್ಪ, ನಾರಾಯಣ, ರಾಜಣ್ಣ ಜೈನ್‌, ಶಂಕರಪ್ಪ, ಬಿಳಿಗಿರಿನಾಯಕ, ಪಿ.ಚಂದ್ರು, ರತ್ನಮ್ಮ, ಗ್ರಾಮದ ಯಜಮಾನ ಶಿವಮೂರ್ತಿ, ಮುಖಂಡರಾದ ಆಟೋ ಮಹೇಶ್‌, ಬೇಗೂರು ಮಂಜುನಾಥ್‌, ಸಿದ್ದರಾಜು, ಮಹೇಶ್‌, ಮಲ್ಲಿಕಾರ್ಜುನ, ವೆಂಕಟನಾಯಕ, ಕಬ್ಬೇಪುರ ಮಂಜುಸೂಧನ್‌, ಸಂಘದ ಸಿಇಒ ಶ್ರೀನಿವಾಸ ಶೆಟ್ಟಿ ಸೇರಿದಂತೆ ಹಲವರಿದ್ದರು.

ಮೂವರು ಗೈರು

ಕಾಂಗ್ರೆಸ್‌ ಬೆಂಬಲಿತರಾದ ನೂತನ ನಿರ್ದೇಶಕರಾದ ಮಲ್ಲಿದಾಸ್‌, ಚಂದ್ರಪ್ರಸಾದ್‌, ನಿರ್ಮಲ ಅವರು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಗೈರಾಗಿದ್ದರು.

ನೂತನ ಉಪಾಧ್ಯಕ್ಷ ಸದಾಶಿವಮೂರ್ತಿ ಕೂಡ ಬೇಗೂರು ಗ್ರಾಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಅಂದು ಅಪ್ಪ,ಸಹೋದರ, ಇಂದು ನಂದೀಶ್‌ ಅಧ್ಯಕ್ಷ !

ಗುಂಡ್ಲುಪೇಟೆ: ಬೇಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅರೇಪುರ ಗ್ರಾಮದ ಹಿರಿಯ ರಾಜಕಾರಣಿ ವಿ.ಕೆಂಪಣ್ಣ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ವಿ.ಕೆಂಪಣ್ಣ ಕಾಲವಾದ ಬಳಿಕ ವಿ.ಕೆಂಪಣ್ಣ ಅವರ ಪುತ್ರ ಕೆ. ಬಸವಣ್ಣ ಬೇಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇದೀಗ ಗುರುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ವಿ. ಕೆಂಪಣ್ಣರ ಪುತ್ರ ಕೆ. ನಂದೀಶ್‌ ಬೇಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗುವ ಮೂಲಕ ಅಂದು ಅಪ್ಪ ವಿ.ಕೆಂಪಣ್ಣ, ಸಹೋದರ ಕೆ. ಬಸವಣ್ಣ ಅಧ್ಯಕ್ಷರಾದ ಸಾಲಿಗೆ ಕೆ.ನಂದೀಶ್‌ ಕೂಡ ಸೇರ್ಪಡೆಯಾಗಿದ್ದಾರೆ.

Share this article