ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಪಟ್ಟಣದಲ್ಲಿ ನಡೆದ ನೂತನ ರಥಗಳ ನಿರ್ಮಾಣ ಮತ್ತು ದೇವಸ್ಥಾನ ನವೀಕರಣಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಈಗಿರುವ ಜೋಡಿ ರಥಗಳು ಶಿಥಿಲಾವಸ್ಥೆಗೆ ಬಂದಿರುವುದರಿಂದ ನೂತನ ರಥಗಳ ನಿರ್ಮಾಣಕ್ಕೆ ಸ್ಥಳೀಯ ಮುಖಂಡರು ಮುಂದಾದಾಗ ಹೊಸಪೇಟೆಯ ಉದ್ಯಮಿ ಶ್ಯಾಮರಾಜ ಸಿಂಗ್ ಮತ್ತು ಜಯರಾಜ ಸಿಂಗ್ ನೂತನ ರಥಗಳಲ್ಲಿ ಒಂದು ರಥ ಅಂದರ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥದ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದಾಗ ಅದರಂತೆ ಅವರು ಒಂದು ರಥ ನಿರ್ಮಿಸಿಕೊಟ್ಟಿದ್ದಾರೆ. ಇದೇ ರೀತಿಯಲ್ಲಿ ಶ್ರೀ ಆಂಜನೇಯಸ್ವಾಮಿ ರಥಕ್ಕೆ ಹೊಸಪೇಟೆ ಉದ್ಯಮಿ ಜಯರಾಜ ಸಿಂಗ್ ₹50 ಲಕ್ಷ ದೇಣಿಗೆ ನೀಡಿದಾಗ ನಂತರ ಒಬ್ಬೊಬ್ಬರೇ ಸ್ವಯಂ ಪ್ರೇರೆಣೆಯಿಂದ ಬಂದು ದೇಣಿಗೆ ನೀಡಿದ ಪರಿಣಾಮವಾಗಿ ಮತ್ತೊಂದು ರಥ ನಿರ್ಮಾಣವಾಗಿ ಶ್ರೀರಾಮನವಮಿಗೆ ನೂತನ ಜೋಡಿ ರಥ ಎಳೆದು ರಥೋತ್ಸವವನ್ನು ಆಚರಿಸಲಾಗುವುದು. ಭಕ್ತರಿಂದ ಸಂಗ್ರಹಿಸಿದ ಹಣದಲ್ಲಿ ಜೋಡು ರಥಗಳು ಮತ್ತು ದೇವಸ್ಥಾನ ನವೀಕರಣಗೊಂಡಿದೆ ಎಂದು ವಿವರಿಸಿದರು.ಮರಿಯಮ್ಮನಹಳ್ಳಿಯ ಜನರ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಯೋಜನೆಯನ್ನು ಪ್ರತ್ಯೇಕವಾಗಿ ಅಮೃತ್ 02 ರಲ್ಲಿ ಹನ್ನೆರಡು ತಿಂಗಳು 18 ವಾರ್ಡುಗಳಿಗೂ ದಿನದ 24 ತಾಸು ಪ್ರತಿ ಮನೆಗೂ ಕುಡಿಯುವ ನೀರು ದೊರೆಯುವಂತೆ ಈಗಾಗಲೇ ಈ ಯೋಜನೆ ಚಾಲನೆ ನೀಡಲಾಗಿದೆ. ಯುಗಾದಿಗೆ ಹೊಸ ನೀರು ಕೊಡುತ್ತೇವೆ ಎಂದು ಸಂಕಲ್ಪ ಮಾಡಿಕೊಂಡತೆ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.
ಸ್ಥಳೀಯ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಿ. ನಾಗಲಾಪುರ ಶ್ರೀಗುರು ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ನಂತರ ಬೆಂಗಳೂರಿನ ಮಂಜು ಇವೇಂಟ್ಸ್ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.