ಜ್ಞಾನ ಸಂವಾದನೆಗೆ ಕೌಶಲ್ಯದ ಜೊತೆಗೆ ನಿರಂತರ ಪ್ರಯತ್ನ ಬೇಕು

KannadaprabhaNewsNetwork |  
Published : Jan 11, 2025, 12:49 AM IST
50 | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಬರವಣೆಗೆ ಮತ್ತು ಸ್ನೇಹಿತರ ಒಡನಾಡಿ ಕ್ಷೀಣಿಸುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಇಂದಿನ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜತೆಗೆ ಜ್ಞಾನ ಸಂಪಾದನೆಗೆ ನಿರಂತರ ಪ್ರಯತ್ನದೊಂದಿಗೆ ಗುರು–ಗುರಿ ಇದ್ದರೆ ಯಶ್ವಸಿನಿ ಮೆಟ್ಟಲು ಹತ್ತಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.

ಪಟ್ಟಣದ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲೀನ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರದಾನ ಭಾಷಣ ಮಾಡಿ ಅವರು ಇಂದಿನ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯದ ಜತೆಗೆ ಜ್ಞಾನ ಸಂಪಾದನೆ ಮಾಡಿದರೆ ಆ ವಿದ್ಯಾರ್ಥಿ ಪ್ರಂಚದಲ್ಲಿಯೇ ಎಲ್ಲಿ ಬೇಕಾದರೂ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಕಲಿಕೆಯೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಬರವಣೆಗೆ ಮತ್ತು ಸ್ನೇಹಿತರ ಒಡನಾಡಿ ಕ್ಷೀಣಿಸುತ್ತಿದೆ. ತಂತ್ರಜ್ಞಾನವನ್ನು ಅವಶ್ಯಕವಾದಷ್ಟು ಮಾತ್ರ ಬಳಕೆಯಾಗಬೇಕು. ಮಕ್ಕಳಿಗೆ ಪೋಷಕರು ಶಿಸ್ತು, ಏಕ್ರಾಗತೆ, ಸಮಯ ಪಾಲನೆಯನ್ನು ತಿಳಿಸಿಕೊಟ್ಟರೇ ಆ ಮಕ್ಕಳು ಭವ್ಯ ಭಾರತ ಪ್ರಜೆಯಾಗಲಿದ್ದಾರೆ ಎಂದು ಅವರು ಹೇಳಿದರು.

ರಾಜಕಾರಣಿಗಳಿಗೆ ಎಲೆಕ್ಷನ್ ಹೇಗೆ ಹಬ್ಬವೋ ಅದೇ ರೀತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಬ್ಬದಂತೆ ಭಾವಿಸಿ ಬರೆದರೆ ಗುರಿಮುಟ್ಟುವುದು ಸುಲಭವಾಗಲಿದೆ. ನಿದ್ದೆಗೆಟ್ಟು ಕಷ್ಟದಿಂದ ಓದದೆ ಪ್ರೀತಿಯಿಂದ ಓದಿ ಜತೆಗೆ ಅಬ್ದುಲ್ ಕಲಾಂ ರವರು ಹೇಳಿದಂತೆ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಎಂದು ಸಲಹೆ ನೀಡಿದರು.

ವಾರ್ಷಿಕೋತ್ಸವ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾತನಾಡಿ, ವಿದ್ಯೆ ಎಂಬುದು ಮನುಷ್ಯನ ಬದುಕಿನಲ್ಲಿ ಎಷ್ಟು ಎತ್ತರಕ್ಕೆ ಬೇಕಾದರು ಕರೆದುಕೊಂಡು ಹೋಗುವ ಅಸ್ತçವಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರ ಬದುಕಿಗೆ ಶಿಕ್ಷಣ ಎಂಬುದು ಅಮೃತ ಇದ್ದಂತೆ ಆದ್ದರಿಂದಲೇ ಸರ್ಕಾರಗಳು ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಅದರ ಸದುಪಯೋಗವನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿ ಎಂದು ಆಶಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತಿಚೆಗೆ ಮಕ್ಕಳು ಮೊಬೆಲ್ ಬಳಕೆ ಹೆಚ್ಚಾಗುತ್ತಿದ್ದು ದೈನಂದಿನ ಆಟಪಾಠದಲ್ಲಿ ತೊಡಗುತ್ತಿಲ್ಲಾ. ಮಕ್ಕಳಿಗೆ ದೈಹಿಕ ವ್ಯಾಯಾಮವಿಲ್ಲದೇ ಓದನ್ನು ಕೂಡ ಕಿತ್ತುಕೊಳ್ಳುತ್ತಿದೆ ಎಂದು ಅವರು ವಿಷಾದಿಸಿದರು.ಬಿಆರ್‌ಸಿ ವೆಂಕಟೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ಲಯನ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ಬುದ್ದಿಸಾಗರ್, ಕಾರ್ಯದರ್ಶಿ ಕೆ.ಸಿ.ಲೋಕೇಶ್, ಖಜಾಂಚಿ ಮಹಾದೇವಯ್ಯ, ಆಡಳಿತಾಧಿಕಾರಿ ಎಸ್.ಸದಾಶಿವ, ಸದಸ್ಯರಾದ ಸತ್ಯಕುಮಾರ್, ಆರ್.ಎಚ್.ನಟರಾಜ್, ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಟಿ.ಪಿ.ನಂದೀಶ್‌ಕುಮಾರ್, ಪ್ರೌಡಶಾಲಾ ಮುಖ್ಯಶಿಕ್ಷಕರಾದ ಎಸ್.ಎಸ್.ಲೋಕೇಶ್, ಜಿ.ರಮೇಶ್, ದೈಹಿಕ ಶಿಕ್ಷಕಿ ಪಾರ್ವತಿ, ಸಹ ಶಿಕ್ಷಕರಾದ ಹೆಚ್.ಎನ್.ದಿವಾಕರ್, ನಳಿನಿ, ಆಶಾ, ನಂದಿನಿ, ಸುಜಾತ, ಎ.ವಿ.ಅನಿಲ್‌ಕುಮಾರ್, ಬಿ.ಎಸ್.ಹರೀಶ್, ಸಿ.ರಾಮೇಗೌಡ, ಎ.ಎಸ್.ಅಶ್ವಿನಿ, ಸಿ.ಎಂ.ಪುಷ್ಪಾವತಿ, ಯೋಗೇಶ್, ವನಜಾಕ್ಷಿ, ಎಸ್.ಯೋಗಾನಂದ, ಸೌಮ್ಯ, ಖಾರಕೊನೆ ಬೀಬಿಜಾನ್, ವಿನುತ ಇನ್ನಿತರರು ಇದ್ದರು.

ಲಯನ್ಸ್ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎಲ್.ಎಸ್.ಲೋಕೇಶ್, ಜಿ.ರಮೇಶ್, ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಹಾಗೂ ಆಡಳಿತ ಮಂಡಳಿತ ಮಂಡಳಿಯ ಪದಾಧಿಕಾರಿಗಳನ್ನು ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಗ್ರಾಮೀಣ ಸೊಗಡನ್ನು ಬಿಂಬಿಸುವ ನೃತ್ಯಗಳಾದ ಡೊಳ್ಳುಕುಣಿತ, ವೀರಗಾಸೆ, ಕೋಲಾಟ, ಕಂಸಾಳೆ ನೃತ್ಯದೊಂದಿಗೆ ಹಳೆಯ ಚಲನಚಿತ್ರಗೀತೆಗಳಿಗೆ ವಿಶೇಷ ನೃತ್ಯಗಳನ್ನು ಪ್ರದರ್ಶಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್