ಪೌರಕಾರ್ಮಿಕರ ಹಿತ ಕಾದವರು ಸಿದ್ದರಾಮಯ್ಯ: ಸೋಮಶೇಖರ್

KannadaprabhaNewsNetwork |  
Published : Apr 20, 2024, 01:01 AM IST
18 | Kannada Prabha

ಸಾರಾಂಶ

ಚುನಾವಣೆ ದಿನ ಮತದಾನವನ್ನೇ ಪೂಜೆ ಎಂದು ತಿಳಿದು ಮತ ಕೇಂದ್ರವನ್ನೇ ದೇವಸ್ಥಾನ ಎಂದು ಭಾವಿಸಿ ತಪ್ಪದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು. ಸಿದ್ದರಾಮಯ್ಯ ಅವರು ಇಡೀ ರಾಜಕೀಯ ಇತಿಹಾಸದಲ್ಲಿ ಯಾರು ಮಾಡಿರದ ಜನಪರ ಯೋಜನೆ ರೂಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬದ ಆರ್ಥಿಕ ಶಕ್ತಿ ಬಲಪಡಿಸಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕೆ.ಆರ್‌. ಕ್ಷೇತ್ರದ ವಿವಿಧೆಡೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ಪರ ಮತಯಾಚಿಸಿದರು.

ವಾರ್ಡ್‌ ನಂ. 60ರ ಸಿಲ್ಕ್‌ಫ್ಯಾಕ್ಟರಿ, ನೆಲ್ಲೂರು ಶೆಡ್‌, ರಾಜೀವ್‌ಗಾಂಧಿ ಕಾಲೋನಿ, ಅರುಂಧತಿ ಕಾಲೋನಿ, ಬುದ್ಧನಗರ ಬಡಾವಣೆಯಲ್ಲಿ ಸೋಮಶೇಖರ್‌ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಚುನಾವಣೆ ದಿನ ಮತದಾನವನ್ನೇ ಪೂಜೆ ಎಂದು ತಿಳಿದು ಮತ ಕೇಂದ್ರವನ್ನೇ ದೇವಸ್ಥಾನ ಎಂದು ಭಾವಿಸಿ ತಪ್ಪದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು. ಸಿದ್ದರಾಮಯ್ಯ ಅವರು ಇಡೀ ರಾಜಕೀಯ ಇತಿಹಾಸದಲ್ಲಿ ಯಾರು ಮಾಡಿರದ ಜನಪರ ಯೋಜನೆ ರೂಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬದ ಆರ್ಥಿಕ ಶಕ್ತಿ ಬಲಪಡಿಸಿದೆ ಎಂದರು.

ಮಾಜಿ ಮೇಯರ್‌ ನಾರಾಯಣ್, ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ನಗರ ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಶಿವಣ್ಣ, ಎರ್.ಎಚ್. ಕುಮಾರ್, ಆರ್. ದಾಸು, ಆರ್ಟಿಸ್ಟ್ ನಾಗರಾಜು, ನರಸಿಂಹ, ಹನುಮಯ್ಯ, ಶ್ರೀನಿವಾಸ, ಮಂಜು, ನಾಗರತ್ನ ಮಂಜುನಾಥ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!