ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರಾರ್ಥನಾ ಮಂದಿರಕ್ಕೆ ಆಗಮಿಸಿದ ಅವರು, ಚರ್ಚ್ ಫಾದರ್ ರೆವರೆಂಡ್ ಪೌಲುಸ್ ಥಾಮಸ್ ಅವರಿಗೆ ಚೆಕ್ ನೀಡಿ ತಾಲೂಕಿನ ಕ್ರೈಸ್ತ ಬಾಂಧವರಿಗೆ ಕ್ರಿಸ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ವೇಳೆ ಆರ್‌ಟಿಒ ಮಲ್ಲಿಕಾರ್ಜುನ್ ಅವರನ್ನು ಅಭಿನಂದಿಸಿ ಮಾತನಾಡಿದ ಫಾದರ್ ಪೌಲುಸ್ ಥಾಮಸ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಪರಿಷತ್ ಸದಸ್ಯರಾಗಿ ಮಲ್ಲಿಕಾರ್ಜುನ್ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕಿನಲ್ಲಿ ತಮ್ಮದೇ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಎಂದರು.ಕಳೆದ ನಾಲ್ಕು ವರ್ಷಗಳಲ್ಲಿ ನಿರಂತರ ಸಮಾಜ ಸೇವೆ ಮಾಡುತ್ತಾ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ, ಕ್ರೀಡಾ ಪಟುಗಳಿಗೆ ಆರ್ಥಿಕ ನೆರವು, ದೇವಾಲಯಗಳ ಜೀರ್ಣೋದ್ಧಾರಕ್ಕೆ ಧನ ಸಹಾಯ, ಶಬರಿಮಾಲೆ ಅಯ್ಯಪ್ಪ ಮಾಲಾ ಧಾರಿಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿದ ಆರ್‌ಟಿಒ ಮಲ್ಲಿಕಾರ್ಜುನ್ ಮಾತನಾಡಿ, ದೇವನೊಬ್ಬ ನಾಮ ಹಲವು ಎನ್ನುವ ಹಾಗೆ ರಾಮ, ಅಲ್ಲಾ, ಯೇಸು ಎಲ್ಲರೂ ಭಗವಂತನ ಅವತಾರಗಳಾಗಿವೆ. ನಮ್ಮ ದೇಶದಲ್ಲಿ ಸರ್ವ ಧರ್ಮದವರು ವಾಸಿಸುತ್ತಿದ್ದು, ತಾಲೂಕಿನಲ್ಲಿ ಎಲ್ಲಾ ಧರ್ಮದ ಜನರು ಅಣ್ಣತಮ್ಮಂದಿರು, ಅಕ್ಕತಂಗಿಯರಾಗಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಇದು ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದರು.ಈ ವೇಳೆ ಎಮಿಲ್ಡಾ ಕ್ವಾಡ್ರಸ್ ಪಿಂಟೋ ಸಿಸ್ಟರ್ ಜೋಶ್ಲಿನ್ ಕ್ರಸ್ಟಾ, ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ. ಹರಿಚರಣತಿಲಕ್, ಆರ್.ನೀಲಕಂಠ ಸೇರಿದಂತೆ ಇತರರು ಹಾಜರಿದ್ದರು.