ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕೆಎಸ್‌ಪಿ ಹುಟ್ಟುಬ್ಬದ ಅಂಗವಾಗಿ ಮೇಲುಕೋಟೆ ಪುತಿನ ಕಲಾಮಂದಿರದಲ್ಲಿ ಹಸಿರು ಭೂಮಿ ಟ್ರಸ್ಟ್, ದೃಶ್ಯ ಟ್ರಸ್ಟ್, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪುತಿನ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡಿದ್ದ ಪುಟ್ಟಣ್ಣಯ್ಯರಿಗೆ ರಂಗನಮನ ಹೊಂಬಾಳೆ ನಾಟಕೋತ್ಸವವನ್ನು ಭಾನುವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.
ಅಗಲಿದ ನಾಯಕರಿಗೆ ಹಲವು ರೀತಿಯ ನಮನ ಸಲ್ಲಿಸಲಾಗುತ್ತದೆ. ಆದರೆ, ಪುಟ್ಟಣ್ಣ ಅವರಿಗೆ ರಂಗನಮನ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ರಂಗ ಚಟುವಟಿಕೆಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರೋತ್ಸಾಹ ದೊರೆಯುತ್ತಿಲ್ಲ. ಸಮುದಾಯದ ವಿಚಾರಧಾರೆಗಳನ್ನು ತರೆದಿಟ್ಟು, ಚಿಂತನೆಗೆ ಪ್ರೇರೇಪಿಸುವ ಕೆಲಸವನ್ನು ನಾಟಕಗಳು ಮಾಡುತ್ತದೆ ಎಂದರು.ನಾಟಕಗಳು ಸಮಾಜಮುಖಿ ಚಿಂತನಗಳಿಗೆ ಹುಟ್ಟು ಹಾಕುತ್ತದೆ. ನಾಟಕ ಆಡುವುದು, ಹೆಣ್ಣುಮಕ್ಕಳು ಪಾಲ್ಗೊಳ್ಳುವುದು ಕೀಳರಿಮೆ ಎಂಬ ಭಾವನೆ ಗ್ರಾಮೀಣ ಭಾಗದಲ್ಲಿದೆ. ಆದರೆ, ಹೆಣ್ಣುಮಕ್ಕಳು ಸಹ ನಾಟಕಗಳಲ್ಲಿ ತೊಡಗಿಸಿಕೊಳ್ಳು ವಂತಾಗಬೇಕು. ಮೂಲಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ರಂಗಚಟುವಟಿಕೆ ಸರಳ ವೇದಿಕೆಯಾಗಿದೆ ಎಂದರು.
ಪು.ತಿ.ನ ಕಲಾಮಂದಿರ ರಂಗ ಚಟುವಟಿಕೆಗಾಗಿ ರೂಪುಗೊಂಡಿದೆ. ಇದನ್ನು ರಂಗಾಸಕ್ತರು ಬಳಸಿಕೊಳ್ಳಬೇಕು. ಧಾರವಾಹಿಗಳಾಗಲಿ ಸಿನಿಮಾಗಳಾಗಲಿ ವ್ಯಕ್ತಿತ್ವವನ್ನು ರೂಪಿಸುವುದಿಲ್ಲ. ಹೊಸ ಚಿಂತನೆಗಳನ್ನು ಹುಟ್ಟು ಹಾಕುವುದಿಲ್ಲ. ಆದರೆ, ನಾಟಕಕ್ಕೆ ವ್ಯಕ್ತಿತ್ವ ರೂಪಿಸುವ ಶಕ್ತಿ ಇದೆ ಎಂದರು.
ರೈತನಾಯಕಿ ಸುನೀತಪುಟ್ಟಣ್ಣಯ್ಯ ಮಾತನಾಡಿ, ಪುಟ್ಟಣ್ಣಯ್ಯರ ವಿಚಾರಧಾರೆಗಳನ್ನು ನಮಗೆ ಆದರ್ಶವಾಗಿವೆ. ಅವರಿಗೆ ನಾಟಕೋತ್ಸವ ಮೂಲಕ ರಂಗನಮನ ಸಲ್ಲಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಸಂತೋಷವಾಗಿದೆ ಎಂದರು.
ಇದೇ ವೇಳೆ ನಿವೃತ್ತ ಪಂಚಾಯತ್ ಅಧಿಕಾರಿ ಎಂ.ಕೆ.ಕೆಂಪೇಗೌಡರಿಗೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಹೆಸರಿನಲ್ಲಿ ಹಸಿರು ಪುರಸ್ಕಾರ ನೀಡಿ ಗೌರವಿಸಲಾಯಿತು. ಮೊದಲದಿನ ಪೂರ್ಣಚಂದ್ರತೇಜಸ್ವಿ ಜೀವನಾಧಾರಿತ ನನ್ನ ತೇಜಸ್ವಿನಾಟಕ ಪ್ರದರ್ಶನಗೊಂಡಿತು.