ಕ್ಯಾತನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಕೆ.ಎಸ್.ರಾಮಚಂದ್ರು ಆಯ್ಕೆ

KannadaprabhaNewsNetwork |  
Published : Apr 10, 2025, 01:00 AM IST
9ಕೆಎಂಎನ್ ಡಿ27 | Kannada Prabha

ಸಾರಾಂಶ

ಒಟ್ಟು 20 ಸದಸ್ಯರ ಬಲವನ್ನು ಹೊಂದಿರುವ ಕ್ಯಾತನಹಳ್ಳಿ ಗ್ರಾಪಂನಲ್ಲಿ ಎಲ್ಲಾ ಸದಸ್ಯರು ರೈತ ಸಂಘದ ಬೆಂಬಲಿತರಾಗಿದ್ದು, ಅಧಿಕಾರ ಒಡಂಬಡಿಕೆ ಅನ್ವಯ ಈ ಹಿಂದಿನ ಉಪಾಧ್ಯಕ್ಷ ಕೆ.ಎಸ್.ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕ್ಯಾತನಹಳ್ಳಿ ಗ್ರಾಪಂ ನೂತನ ಉಪಾಧ್ಯಕ್ಷರಾಗಿ ರೈತ ಸಂಘದ ಬೆಂಬಲಿತ ಅಭ್ಯರ್ಥಿ ಕೆ.ಎಸ್.ರಾಮಚಂದ್ರು ಅವಿರೋಧವಾಗಿ ಆಯ್ಕೆಯಾದರು.ಒಟ್ಟು 20 ಸದಸ್ಯರ ಬಲವನ್ನು ಹೊಂದಿರುವ ಗ್ರಾಪಂನಲ್ಲಿ ಎಲ್ಲಾ ಸದಸ್ಯರು ರೈತಸಂಘದ ಬೆಂಬಲಿತರಾಗಿದ್ದು, ಅಧಿಕಾರ ಒಡಂಬಡಿಕೆ ಅನ್ವಯ ಈ ಹಿಂದಿನ ಉಪಾಧ್ಯಕ್ಷ ಕೆ.ಎಸ್.ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಕೆ.ಎಸ್.ರಾಮಚಂದ್ರು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆ ಎಇಇ ರಮ್ಯ ಅವರು ನೂತನ ಉಪಾಧ್ಯಕ್ಷ ಅವಿರೋಧ ಆಯ್ಕೆ ಪ್ರಕಟಿಸಿದರು. ಈ ವೇಳೆ ರೈತ ಸಂಘದ ಮುಖಂಡರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ನೂತನ ಉಪಾಧ್ಯಕ್ಷ ರಾಮಚಂದ್ರು ಮಾತನಾಡಿ, ನಮ್ಮ ನಾಯಕರಾದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಎಸ್.ದಯಾನಂದ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕ್ಯಾತನಹಳ್ಳಿಗೆ 4.5ಕೋಟಿ ರು. ಅನುದಾನ ನೀಡಿದ್ದಾರೆ. ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಡೆಯಲಿದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಸಿದ್ದಾಚಾ‌ರ್, ಮಾಜಿ ಅಧ್ಯಕ್ಷೆ ಆಯೀಷಾ, ಮಾಜಿ ಉಪಾಧ್ಯಕ್ಷ ನಯನ (ಸಂತೋಷ್), ಕೆ.ಎಸ್.ರವಿಕುಮಾ‌ರ್, ಸದಸ್ಯರಾದ ಮನೋಹರ್, ವಿನಾಯಕ, ಚಿದಾನಂದ, ಯಮುನಾ, ಅನಿತಾ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಎಸ್.ದಯಾನಂದ, ರೈತಸಂಘದ ಕ್ಯಾತನಹಳ್ಳಿ ಘಟಕದ ಅಧ್ಯಕ್ಷ ರವಿಕುಮಾರ್, ರೈತಸಂಘದ ಮುಖಂಡರಾದ ಕೆ.ಕೆ.ಗೌಡೇಗೌಡ, ಕೆ.ಪಿ.ಮಹದೇವೇಗೌಡ, ಕೆ.ಸಿ.ನಾಗೇಶ್, ಯುವರಾಜು, ನಾರಾಯಣಗೌಡ, ಪಿ.ಶಂಕರ್, ಪಿಡಿಒ ಸಂಗಮೇಶ್ ಚೌಹಣ್, ಗ್ರಾ.ಪಂ ನಿವೃತ್ತ ನೌಕರ ಕೆ.ಮೋಹನ್ ಸೇರಿದಂತೆ ಇತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ