ಕಬಳಿ ಬಸವೇಶ್ವರ ದೇಗುಲ ವಿವಾದ ಬಗೆಹರಿಸಿದ ನಿರ್ಮಲಾನಂದ ಶ್ರೀ

KannadaprabhaNewsNetwork |  
Published : Jan 06, 2025, 01:00 AM IST
5ಎಚ್ಎಸ್ಎನ್11 : ಕಬಳಿ ಬಸವೇಶ್ವರಸ್ವಾಮಿ ದೇವಾಲಯದ ಅರ್ಚಕ ವೃಂಧ. | Kannada Prabha

ಸಾರಾಂಶ

ತಾಲೂಕಿನ ಕಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನ ವಿವಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಮಧ್ಯಸ್ಥಿಕೆಯೊಂದಿಗೆ ಸುಖಾಂತ್ಯಗೊಂಡಿದ್ದು, ಈ ಹಿಂದಿನ ಅರ್ಚಕರೇ ಪೂಜೆ ಮುಂದುವರಿಸುವಂತೆ ನಿರ್ಧರಿಸಲಾಗಿದೆ. ಶ್ರೀ ಕ್ಷೇತ್ರ ಕಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಪೂಜೆಗೆ ಸಂಬಂಧಿಸಿದಂತೆ ಅರ್ಚಕರಾದ ರೇಣುಕಾ ಆರಾಧ್ಯ ಕುಟುಂಬಸ್ಥರು ಕಾನೂನು ಮೊರೆಯನ್ನು ಹೋಗಿದ್ದರು. ಆದರೆ ಈ ಕಾನೂನು ಸಮರದಲ್ಲಿ ನ್ಯಾಯಾಂಗ ಇಲಾಖೆಯು ಅರ್ಚಕರ ಪರವಾಗಿ ತಡೆಯಾಜ್ಞೆ ನೀಡಿ ಪೂಜೆ ಮುಂದುವರೆಸುವಂತೆ ಆದೇಶಿಸಿತ್ತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಕಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನ ವಿವಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಮಧ್ಯಸ್ಥಿಕೆಯೊಂದಿಗೆ ಸುಖಾಂತ್ಯಗೊಂಡಿದ್ದು, ಈ ಹಿಂದಿನ ಅರ್ಚಕರೇ ಪೂಜೆ ಮುಂದುವರಿಸುವಂತೆ ನಿರ್ಧರಿಸಲಾಗಿದೆ.

ತಾಲೂಕಿನ ಶ್ರೀ ಕ್ಷೇತ್ರ ಕಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಪೂಜೆಗೆ ಸಂಬಂಧಿಸಿದಂತೆ ಅರ್ಚಕರಾದ ರೇಣುಕಾ ಆರಾಧ್ಯ ಕುಟುಂಬಸ್ಥರು ಕಾನೂನು ಮೊರೆಯನ್ನು ಹೋಗಿದ್ದರು. ಆದರೆ ಈ ಕಾನೂನು ಸಮರದಲ್ಲಿ ನ್ಯಾಯಾಂಗ ಇಲಾಖೆಯು ಅರ್ಚಕರ ಪರವಾಗಿ ತಡೆಯಾಜ್ಞೆ ನೀಡಿ ಪೂಜೆ ಮುಂದುವರೆಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ ಅರ್ಚಕರ ಮತ್ತು ಗ್ರಾಮಸ್ಥರು ದೇವಾಲಯಕ್ಕೆ ಪೂಜೆಗೆ ಎಂದು ಆಗಮಿಸಿದ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದವರು ಪೂಜೆ ಮಾಡದಂತೆ ತಡೆದು ದೇವಾಲಯಕ್ಕೆ ಬೀಗ ಹಾಕಿದರು. ಆದರೆ ದೇವಾಲಯದ ಬೀಗ ತೆರೆಯುವಂತೆ ಗ್ರಾಮಸ್ಥರು ಮತ್ತು ಅರ್ಚಕರು ಎಷ್ಟೇ ಕೇಳಿಕೊಂಡರು ಕೂಡ ಬೀಗವನ್ನು ತೆರೆಯಲಿಲ್ಲ. ತದನಂತರ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಮತ್ತು ಅರ್ಚಕರ ಕುಟುಂಬದವರು ಪ್ರತಿಭಟನೆಯನ್ನು ಮಾಡಿದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಇಲಾಖೆಯವರು ಆಗಮಿಸಿ ಗ್ರಾಮಸ್ಥರ ಮತ್ತು ಅರ್ಚಕರನ್ನು ಮನವೊಲಿಸಲು ಮುಂದಾದರು. ಆದರೂ ಕೂಡ ಪ್ರಯೋಜನ ಆಗದ ಹಿನ್ನೆಲೆ ಗ್ರಾಮಸ್ಥರು ಮತ್ತು ಅರ್ಚಕರು ಸಂಘಟನೆಗಳ ಮೊರೆ ಹೋದರು. ಇದನ್ನು ವೀಕ್ಷಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಸ್ವಾಮೀಜಿ ಅವರು ಮಧ್ಯಸ್ಥಿಕೆ ವಹಿಸಿ ಅರ್ಚಕರನ್ನು ಕರೆಸಿ ಸತ್ಯ ಸತ್ಯತೆಯನ್ನು ತಿಳಿದು ದೇವಾಲಯದ ಪೂಜಾ ವಿಚಾರಕ್ಕೆ ಮತ್ತು ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಮೊರೆ ಹೋಗಿರುವ ವಿಚಾರ ನನ್ನ ಗಮನಕ್ಕೆ ಬಂದಿರುವುದಿಲ್ಲ. ಆದ್ದರಿಂದ ಇನ್ನು ಮುಂದೆ ದೇವಾಲಯದ ದಿನನಿತ್ಯದ ಪೂಜೆ ಕೈಂಕರ್ಯವನ್ನು ನೀವೇ ನಿರ್ವಹಿಸುವುದು. ಇನ್ನು ಮುಂದೆ ಏನಾದರೂ ಕುಂದು ಕೊರತೆಗಳು ಕಂಡುಬಂದಲ್ಲಿ ನೇರವಾಗಿ ಶ್ರೀಮಠಕ್ಕೆ ಬಂದು ನನ್ನನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರೇಣುಕಾ ಆರಾಧ್ಯ ಮತ್ತು ಗಿಡಗೌಡ ಕೆ. ಪಿ. ನಟರಾಜ್ ತಿಳಿಸಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?