ಕಡಬ: ಕೊಂಬಾರು ಗ್ರಾಮದ ಮನೆಗೆ ಶಂಕಿತರು ಭೇಟಿ

KannadaprabhaNewsNetwork |  
Published : Apr 06, 2024, 12:48 AM IST
11 | Kannada Prabha

ಸಾರಾಂಶ

ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದರು ಎನ್ನಲಾಗಿದೆ. ಮನೆಗೆ ಆಗಮಿಸಿದ ಶಂಕಿತರು ಶಸಾಸ್ತ್ರ ಹಿಡಿದುಕೊಂಡಿದ್ದರು ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಗುರುವಾರ ರಾತ್ರಿ ವೇಳೆ ಶಂಕಿತರ ತಂಡ ಆಗಮಿಸಿ ಊಟ, ಮಾಡಿ ದಿನಸಿ ಸಾಮಗ್ರಿ ಪಡೆದುಕೊಂಡು ತೆರಳಿರುವ ಬಗ್ಗೆ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಚೇರು ಎಂಬ ಪ್ರದೇಶದ ಮನೆಯೊಂದಕ್ಕೆ ಶಂಕಿತರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಗುರುವಾರ ಸಂಜೆ ಏಳು ಗಂಟೆ ವೇಳೆ ತಂಡ ಚೇರುವಿನ ಮನೆಗೆ ಆಗಮಿಸಿ ಊಟ ಮಾಡಿದ್ದು, ಸುಮಾರು 9 ಗಂಟೆ ವೇಳೆ ದಿನಸಿ ಸಾಮಗ್ರಿಗಳನ್ನು ಪಡೆದು ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದರು ಎನ್ನಲಾಗಿದೆ. ಮನೆಗೆ ಆಗಮಿಸಿದ ಶಂಕಿತರು ಶಸಾಸ್ತ್ರ ಹಿಡಿದುಕೊಂಡಿದ್ದರು ಎಂದು ತಿಳಿದುಬಂದಿದ್ದು, ಮನೆಯಲ್ಲಿದ್ದ ವೇಳೆ ಮನೆಯವರ ಜೊತೆ ಮಾತನಾಡಿರುವ ಸಾಧ್ಯತೆ ಇದೆ.

ಶೋಧ ಕಾರ್ಯ: ಶಂಕಿತರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್ ನಿಗ್ರಹ ಪಡೆ, ಪೊಲೀಸರು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದು, ಎಎನ್ಎಫ್ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ಇದೆ.

ಶಂಕಿತರ ಸಂಚಾರ: ನಕ್ಸಲರು ಇರಬಹುದೆಂಬ ಶಂಕಿತರು ಮಾ.16ರಂದು ದಕ್ಷಿಣ ಕನ್ನಡ ಕೊಡಗು ಗಡಿ ಭಾಗದ ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆ ಎಸ್ಟೇಟ್‌ನ ಅಂಗಡಿಯೊಂದಕ್ಕೆ ಭೇಟಿ ನೀಡಿ ಸಾಮಗ್ರಿಗಳನ್ನು ಖರಿದಿಸಿ ತೆರಳಿದ್ದರು. ಮಾ.23ರಂದು ಶಂಕಿತರು ಕಡಬ ತಾಲೂಕಿನ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಐನೆಕಿದು ಗ್ರಾಮದ ಅರಣ್ಯದ ಅಂಚಿನ ಮನೆಗೆ ಭೇಟಿ ನೀಡಿ ಊಟ, ಸಾಮಗ್ರಿಗಳನ್ನು ಪಡೆದು ತೆರಳಿದ್ದರು. ಮಾ.18ರಿಂದಲೇ ಶಂಕಿತರು ಭೇಟಿ ನೀಡಿದ ಪರಿಸರ ಸೇರಿದಂತೆ ವಿವಿಧೆಡೆ ನಕ್ಸಲ್ ನಿಗ್ರಹ ಪಡೆ ಶೋಧ ಕಾರ್ಯ ಆರಂಭಿಸಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''