ಸೋದೆ ಮಠದ ‘ಕದಳೀ ವಿಶ್ವದರ್ಶನ’: ಚಿತ್ರಕಲಾ ಸ್ಪರ್ಧೆ

KannadaprabhaNewsNetwork |  
Published : Nov 07, 2026, 02:30 AM IST
ಶೃಂಗೇರಿ ಮಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಆಗುಂಬೆ ಸ್ವಚ್ಛತೆ ನಮ್ಮ ಬದ್ಧತೆ ಅಭಿಯಾನಕ್ಕೆ ಸೋಮೇಶ್ವರ ವಲಯರಣ್ಯಾಧಿಕಾರಿ ಕಚೇರಿ ಎದುರು ಅಮಾಸೆಬೈಲು ವಲಯಾರಣ್ಯಾಧಿಕಾರಿ ರೂಪೇಶ್ ಕುಮಾರ್ ಚಾಲನೆ ನೀಡಿದರು.ಮನೋಜ್ ಕುಮಾರ್,ರವಿಶಂಕರ್  ಇದ್ದರು. | Kannada Prabha

ಸಾರಾಂಶ

ಸೋದೆ ಶ್ರೀ ವಾದಿರಾಜ ಮಠದ ಭಾವಿ ಪರ್ಯಾಯೋತ್ಸವದ ಪ್ರಯುಕ್ತ 29ರಂದು ನಡೆಯುವ ಬಾಳೆ ಮುಹೂರ್ತ ಮತ್ತು ಮೂರು ದಿನಗಳ ರಾಷ್ಟ್ರ ಮಟ್ಟದ ಬಾಳೆ ಮೇಳ - ‘ಕದಳೀ ವಿಶ್ವದರ್ಶನ’ದಂಗವಾಗಿ ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ವೈ‍ಶಿಷ್ಟ್ಯಪೂರ್ಣ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಉಡುಪಿ: ಸೋದೆ ಶ್ರೀ ವಾದಿರಾಜ ಮಠದ ಭಾವಿ ಪರ್ಯಾಯೋತ್ಸವದ ಪ್ರಯುಕ್ತ 29ರಂದು ನಡೆಯುವ ಬಾಳೆ ಮುಹೂರ್ತ ಮತ್ತು ಮೂರು ದಿನಗಳ ರಾಷ್ಟ್ರ ಮಟ್ಟದ ಬಾಳೆ ಮೇಳ - ‘ಕದಳೀ ವಿಶ್ವದರ್ಶನ’ದಂಗವಾಗಿ ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ವೈ‍ಶಿಷ್ಟ್ಯಪೂರ್ಣ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಲ್ಲಿರುವ ಕಲಾಪ್ರತಿಭೆ ಹಾಗೂ ಸೃಜನಶೀಲ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ, ಅವರನ್ನು ಕದಳೀ ವಿಶ್ವದರ್ಶನ ಮೇಳದ ಭಾಗೀದಾರರನ್ನಾಗಿಸುವ ಉದ್ದೇಶದಿಂದ 1 ರಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗಾಗಿ ಬಾಳೆ ಕೃಷಿ ಹಾಗೂ ಬಾಳೆಯ ಮಹತ್ವವನ್ನು ಆಧರಿಸಿದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸ್ಪರ್ಧೆಯು 22ದಂದು ಬೆಳಿಗ್ಗೆ 9 ಗಂಟೆಗೆ, ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಮೂಡಿಬರುವ ಅತ್ಯುತ್ತಮ ಚಿತ್ರಕೃತಿಗಳನ್ನು ಆಯ್ಕೆ ಮಾಡಿ, ವಿಜೇತ ವಿದ್ಯಾರ್ಥಿಗಳಿಗೆ ಡಿ.1ರ ಸಂಜೆ ಕದಳೀ ವಿಶ್ವದರ್ಶನ ಬಾಳೆ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಚಿತ್ರಕಲಾ ಸ್ಪರ್ಧೆ: ವಿಭಾಗ 1 : (1 ರಿಂದ 3ನೇ ತರಗತಿ) ವಿಷಯ : ಬಾಳೆಗಿಡ - ಬಾಳೆಹಣ್ಣು ವ್ಯಾಪಾರ ಅಥವಾ ಬಾಳೆ ತೋಟ. ವಿಭಾಗ 2 : (4 ರಿಂದ 7ನೇ ತರಗತಿ) ವಿಷಯ: ಬಾಳೆಯ ತೋಟದಲ್ಲಿ ಮಂಗಗಳು ಅಥವಾ ಆನೆಗಳು ಅಥವಾ ಗೋವುಗಳು ವಿಭಾಗ 3 : (8 ರಿಂದ 10ನೇ ತರಗತಿ) ಬಾಳೆಯ ತೋಟದಲ್ಲಿ ಕೃಷ್ಣ ಬಲರಾಮ ಬಾಳೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಸ್ವಂತ, ಸೃಜನಾತ್ಮಕ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ನಟರಾಜ ಉಪಾಧ್ಯಾಯ ( 9880945716 )

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ