ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33 ನೇ ಕದ್ರಿ ದಕ್ಷಿಣ ವಾರ್ಡಿನ ಮೈದಾನದಿಂದ ಕದ್ರಿ ಕಂಬಳ ಜಂಕ್ಷನ್ ವರೆಗಿನ ರಸ್ತೆಯು ಸುಮಾರು 1 ಕೋಟಿ ರು. ಅನುದಾನದಲ್ಲಿ ಕಾಂಕ್ರಿಟೀಕರಣಗೊಳ್ಳಲಿದ್ದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ಮುಂದಿನ ದಿನಗಳಲ್ಲಿ ಇಲ್ಲಿನ ರಸ್ತೆಗೆ ಅತ್ಯುತ್ತಮ ಬೀದಿದೀಪಗಳೂ ಬರಲಿದ್ದು ಆ ಪ್ರಕ್ರಿಯೆಗಳೂ ಸಹ ಚಾಲನೆಯಲ್ಲಿವೆ. ಈ ಪ್ರದೇಶವು ಹಲವು ಹೋಟೆಲ್, ವೈದ್ಯಕೀಯ, ವಸತಿ ಸಮುಚ್ಚಯ, ಸೇರಿದಂತೆ ಜನನಿಬಿಡವಾಗಿದ್ದು ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಸಂಬಂಧ ಪಟ್ಟವರಿಗೆ ಸೂಚನೆ ನೀಡಿದ್ದೇನೆ. ಅದರ ಜೊತೆಯಲ್ಲಿ ಸಾರ್ವಜನಿಕರೂ ಸಹ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಪಾಲಿಕೆ ಮಾಜಿ ಸದಸ್ಯ ಸಂದೀಪ್ ಗರೋಡಿ, ಬಿಜೆಪಿ ಪ್ರಮುಖರಾದ ಫೆಡ್ರಿಕ್, ಪಮ್ಮಿ ಕೊಡಿಯಾಲ್ ಬೈಲ್, ವೆಂಕಟೇಶ್, ವೇಣುಗೋಪಾಲ್ ಶೆಟ್ಟಿ, ಹೇಮಾನಂದ್, ಯಶವಂತ್, ತಾರನಾಥ್ ಮತ್ತಿತರರಿದ್ದರು.