ಕನ್ನಡಪ್ರಭ ವಾರ್ತೆ ಪಾವಗಡ ಶ್ರೀರಾಮ ನವಮಿ ಶ್ರದ್ದಾಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸುವ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ಕಾಡುಗೊಲ್ಲರ ಹಟ್ಟಿಗಳಿಗೆ ನವಮಿ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಪಾವಗಡ ತಾಲೂಕು ಕಾಡುಗೊಲ್ಲ ಯುವ ಸೇನೆಯ ಅಧ್ಯಕ್ಷ ಅರಕ್ಯಾತನಹಳ್ಳಿ ದಿವ್ಯತೇಜ್ ಯಾದವ್ ತಿಳಿಸಿದರು. ಶ್ರೀರಾಮ ನವಮಿ ಅಂಗವಾಗಿ ತಾಲೂಕು ಕಾಡುಗೊಲ್ಲ ಯುವ ಸೇನೆ ವತಿಯಿಂದ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದ ಅವರಣದಲ್ಲಿ ತಾಲೂಕಿನ ಹಲವು ಕಾಡು ಗೊಲ್ಲರಹಟ್ಟಿಗಳಿಗೆ ನವಮಿಯ ಪಾನಕ ಹೆಸರುಬೆಳೆ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈಗ ಪ್ರಾರಂಭವಾಗುವ ಶ್ರೀರಾಮ ನವಮಿ ಪ್ರಯುಕ್ತ ತಾಲೂಕಿನಲ್ಲಿರುವ 84 ಗೊಲ್ಲರ ಹಟ್ಟಿಗಳಲ್ಲಿಯೂ ಸಹ ಅದ್ಧೂರಿಯಾಗಿ ಆಚರಣೆ ಮಾಡಬೇಕು. ಈ ಹಿನ್ನಲೆಯಲ್ಲಿ ಅವರಿಗೆ ನೆರವಾಗುವ ರೀತಿಯಲ್ಲಿ ಕಾಡುಗೊಲ್ಲ ಯುವ ಸೇನೆ ಸಂಘದಿಂದ ಹೆಸರುಬೇಳೆ ಮತ್ತು ಬೆಲ್ಲ ಒಳಗೊಂಡ ಕಿಟ್ ಗಳನ್ನು ಸಾಂಕೇತಿಕವಾಗಿ ವಿತರಿಸಲಾಗುತ್ತಿದೆ. ಜತೆಗೆ ಈ ಕಾರ್ಯಕ್ರಮಕ್ಕೆ ಪಿಎಸ್ ಐ ಚಂದ್ರಶೇಖರ್ ಅವರು ಸಹ ಹೆಚ್ಚು ನೆರವು ನೀಡಿದ್ದು, ಸಂಘದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಕಾಡುಗೊಲ್ಲ ಯುವ ಸೇನೆ ಸಂಘದ ಗೌರವಾಧ್ಯಕ್ಷ ಸಣ್ಣ ನಾಗಪ್ಪ ಮಾತನಾಡಿದರು. ಈ ವೇಳೆ ತಾಲೂಕಿನ ಕಾಡುಗೊಲ್ಲ ಯುವ ಸೇನೆಯ ಗೌರವಾಧ್ಯಕ್ಷ ಸಣ್ಣ ನಾಗಣ್ಣ,ಉಪಾಧ್ಯಕ್ಷ ದೊಡ್ಡಯ್ಯ,ಖಜಾಂಚಿ ರಾಜಣ್ಣ,ಸಂಘಟನಾ ಕಾರ್ಯದರ್ಶಿ ನಾಗೇಶ್, ಆನಂದ್, ನಾಗಣ್ಣ, ಖಾಜಾಂಚಿ ಈರಣ್ಣ,ಗುರು ಟೈಲರ್, ದವಡಬೆಟ್ಟ ಗೌಡ ಕಮಪ್ಪ, ದವಡಬೆಟ್ಟ ನಾಗರಾಜ್ ಹಾಜರಿದ್ದರು.