ಲಾಭದತ್ತ ಕಡೂರು ಟೌನ್ ಕೋ- ಆಪರೇಟೀವ್ ಸೊಸೈಟಿ: ಕೆ.ಬಿ.ಸೋಮೇಶ್

KannadaprabhaNewsNetwork |  
Published : Sep 16, 2024, 01:48 AM IST
15ಕೆಕೆೆಡಿಯು2. | Kannada Prabha

ಸಾರಾಂಶ

ಕಡೂರು, 115 ವರ್ಷಗಳ ಇತಿಹಾಸದ ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ 6,34,485 ರು.ಗಳ ನಿವ್ವಳ ಲಾಭ ಗಳಿಸಿದ್ದು ಶೇರುದಾರರಿಗೆ ಶೇ 10 ಡಿವಿಡೆಂಟ್‍ನ್ನು ನೀಡುವುದಾಗಿ ಅಧ್ಯಕ್ಷ ಕೆ.ಬಿ.ಸೋಮೇಶ್ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ, ಕಡೂರು

115 ವರ್ಷಗಳ ಇತಿಹಾಸದ ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ 6,34,485 ರು.ಗಳ ನಿವ್ವಳ ಲಾಭ ಗಳಿಸಿದ್ದು ಶೇರುದಾರರಿಗೆ ಶೇ 10 ಡಿವಿಡೆಂಟ್‍ನ್ನು ನೀಡುವುದಾಗಿ ಅಧ್ಯಕ್ಷ ಕೆ.ಬಿ.ಸೋಮೇಶ್ ಘೋಷಣೆ ಮಾಡಿದರು.

ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಕಡೂರು ಟೌನ್ ಸೊಸೈಟಿ 115 ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆವಹಿಸಿ ಶೇರುದಾರರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಸೊಸೈಟಿ ಕಚೇರಿಯನ್ನು ಹಂತ ಹಂತವಾಗಿ ಎಲ್ಲ ರೀತಿಯಲ್ಲಿ ಬದಲಾವಣೆ ಮಾಡಲಾಗಿದ್ದು ಕಚೇರಿ ಯನ್ನು ಆಧುನಿಕರಣಗೊಳಿಸಲಾಗಿದೆ. ಸಿಬ್ಬಂದಿ ಕೊಠಡಿ, ಆಡಳಿತ ಮಂಡಳಿ ಸಭೆಗೆ ಪ್ರತ್ಯೇಕ ಕೊಠಡಿಗಳನ್ನು ಮಾಡಲಾಗಿದೆ. ಇದಕ್ಕೆ ಸದಸ್ಯರು ಹಾಗೂ ನಿರ್ದೇಶಕರ ಸಲಹೆ, ಸೂಚನೆ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯ ನಿಷ್ಠೆಯೇ ಕಾರಣ ಎಂದರು.

ಮಾಜಿ ಅಧ್ಯಕ್ಷ ಕೆ.ಎಚ್. ರವಿ ಮಾತನಾಡಿ, ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬೆಳ್ಳಿಪ್ರಕಾಶ್ ಟೌನ್ ಕೋ-ಆಪರೇಟಿವ್ ಸೊಸೈಟಿಗೆ 3 ಲಕ್ಷಗಳನ್ನು ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿ, ಹೀಗೆ ಸೊಸೈಟಿಯ ಆದಾಯ ಹೆಚ್ಚಿಸುತ್ತ ಅಭಿವೃದ್ಧಿಯತ್ತ ಸಾಗಿದೆ ಎಂದರು.ಸದಸ್ಯ ಶಿವಶಂಕರ್ ಸೊಸೈಟಿ ಪ್ರಗತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ಕಲ್ಪನಾ ಲವ, ಮಾಜಿ ಅಧ್ಯಕ್ಷ ಕೆ.ಜಿ.ಶ್ರೀನಿವಾಸಮೂರ್ತಿ, ಸುಶೀಲಾ ಶ್ರೀನಿವಾಸ್, ಕೆ.ಕೆ.ಮಂಜು, ಅಜಯ್‍ ಒಡೆಯರ್, ಚಂದ್ರಶೇಖರ್, ಕೆ.ಜಿ.ಲೋಕೇಶ್ವರ್, ಕೆ.ಜಿ.ಪ್ರದೀಪ್, ಪೈರೋಜ್ ಖಾನ್,ಸಲಹಾ ನಾಮ ನಿರ್ದೇಶಕರಾದ ರೇಣುಕಪ್ಪ, ಹೇಮರಾಜ್, ಎಂ.ಉಪೇಂದ್ರನಾಥ್, ಬಿ.ಎಲ್.ಕುಮಾರ್, ವೆಂಕಟೇಶ್, ಕೆ.ಎಂ.ನಾಗರಾಜ್, ಆರ್.ಕೃಷ್ಣಮೂರ್ತಿ,ಮಹಾಲಿಂಗ, ಕಾರ್ಯದರ್ಶಿ ಚನ್ನಕೇಶವಮೂರ್ತಿ,ಸಿಬ್ಬಂದಿ ವರ್ಗದ ಶ್ರೀಧರ್,ತಿಮ್ಮಯ್ಯ,ಪ್ರಸಾದ್ ಮತ್ತು ಸದಸ್ಯರು ಇದ್ದರು. 15ಕೆಕೆಡಿಯು2.ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ 115ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ಬಿ.ಸೋಮೇಶ್ ಅವರ ಸಾಧನೆಯನ್ನು ಗುರುತಿಸಿ ಸದಸ್ಯರು,ನಿರ್ದೇಶಕರು ಪುಷ್ಪಲತಾ ಸೋಮೇಶ್ ದಂಪತಿಗಳನ್ನು ಸನ್ಮಾನಿಸಿದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ