ಕನ್ನಡ ಪ್ರಭ ವಾರ್ತೆ ಮುಧೋಳ
ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಮುಖಂಡರು, ಆರ್.ಬಿ.ತಿಮ್ಮಾಪುರ ಅವರು ದಲಿತ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡುವುದರಿಂದ ಶೋಷಿತ ಮತ್ತು ಹಿಂದುಳಿದ ವರ್ಗಗಳಿಗೆ ಪಕ್ಷದ ಮೇಲೆ ಮತ್ತಷ್ಟು ವಿಶ್ವಾಸ ಮೂಡಲಿದ್ದು, ಸಮುದಾಯಕ್ಕೆ ಉತ್ತರ ಕರ್ನಾಟಕಕ್ಕೆ ಸಾಮಾಜಿಕ ನ್ಯಾಯ ಸಿಗಲಿದೆ ಎಂದು ಮುಖಂಡರಾದ ರಘುನಾಥ ಮೊಕಾಶಿ ಹಾಗೂ ಚಿನ್ನು ಅಂಬಿ ಪ್ರತಿಪಾದಿಸಿದ್ದಾರೆ.
ಬಾಗಲಕೋಟ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ತಿಮ್ಮಾಪುರ ಅವರ ಅನುಭವ ಅತ್ಯಗತ್ಯವಾಗಿದೆ. ಕ್ಷೇತ್ರದ ಬಲಿಷ್ಠ ನಾಯಕರನ್ನು ಸೋಲಿಸಿ ಗೆದ್ದು ಬಂದಿರುವ ಇವರಿಗೆ ಮಂತ್ರಿ ಸ್ಥಾನ ನೀಡುವುದು ಪ್ರಾದೇಶಿಕ ಸಮತೋಲನಕ್ಕೆ ಸಹಕಾರಿಯಾಗಲಿದೆ ಎಂದು ಹೋಳಬಸು ತೇಲಿ ಮತ್ತು ಪಿಂಟು ಕದಂ ತಿಳಿಸಿದ್ದಾರೆ.ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಎಐಸಿಸಿ ವರಿಷ್ಠರು ತಕ್ಷಣವೇ ಈ ಬೇಡಿಕೆಯನ್ನು ಪುರಸ್ಕರಿಸಿ ಶಾಸಕ ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸಂಪುಟ ದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಮುಖಂಡರಾದ ಚಿನ್ನು ಅಂಬಿ, ಮುರುಗೇಶ ಇಟಂಗಿ, ಕೃಷ್ಣ ಗುಜ್ಜನ್ನವರ, ರವಿ ಗಂಗಲ್, ನೀಲೇಶ್ ಇಂಗಳೆ, ಯೂನುಸ್ ಕೊಡಚಿ, ಬಸು ಬಳಿಗಾರ, ನಿತಿನ್ ಮಾನೆ ಒತ್ತಾಯಿಸಿದ್ದಾರೆ.--