ಕನ್ನಡಪ್ರಭ ವಾರ್ತೆ ಹೊಳೆನರಸೀಪುರಮೊದಲ ವಚನಕಾರರಾದ ಶ್ರೀ ದೇವರ ದಾಸಿಮಯ್ಯನವರು ೧೧ನೇ ಶತಮಾನದಲ್ಲಿ ೧೭೬ ವಚನಗಳನ್ನು ರಚಿಸಿದ್ದರು. 12ನೇ ಶತಮಾನದಲ್ಲಿ ೬೬೮ ವಚನಕಾರರು ಇದ್ದರು ಎಂಬ ಉಲ್ಲೇಖವಿದ್ದು, ಇವರುಗಳಿಗೆ ಸ್ಪೂರ್ತಿ ಹಾಗೂ ತಳಹದಿ ಶ್ರೀ ದೇವರ ದಾಸಿಮಯ್ಯನವರ ವಚನಗಳು ಎಂದು ನಿವೃತ್ತ ಪ್ರಾಂಶುಪಾಲ ಎಚ್. ಎಸ್. ಪ್ರಭುಶಂಕರ್ ತಿಳಿಸಿದರು.
ಕೈವಾರ ತಾತಯ್ಯ ಎಂದೇ ಖ್ಯಾತರಾಗಿರುವ ಯೋಗಿನಾರೇಯಣ ಯತೀಂದ್ರರು ಸಾರಿದ ಕಾಲಜ್ಞಾನ ಮತ್ತು ತತ್ವಗಳನ್ನು ಅರಿತುಕೊಳ್ಳಬೇಕು. ಪೂಜ್ಯರು ಆಧ್ಯಾತ್ಮಿಕ ನಾಯಕರು ಮಾತ್ರವಲ್ಲದೆ, ಭವಿಷ್ಯ ಜ್ಞಾನಿಗಳಾಗಿಯೂ ಗುರುತಿಸಿಕೊಂಡಿದ್ದರು ಹಾಗೂ ಶ್ರೀಯುತರು ರಚಿಸಿದ ಕಾಲಜ್ಞಾನ ಸಾಹಿತ್ಯ ಮತ್ತು ಭಕ್ತಿಗೀತೆಗಳು ಇಂದಿನ ಕಾಲಘಟ್ಟದಲ್ಲಿಯೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯ ಜೀವನ ನಡೆಸುವ ಸಂದೇಶವನ್ನು ಅವರು ತಮ್ಮ ಕೀರ್ತನೆಗಳ ಮೂಲಕ ಸಾರಿದರು. ಸಮಾಜದ ಒಳಿತಿಗಾಗಿ ಶ್ರಮಿಸಿದ ಪೂಜ್ಯರ ಆದರ್ಶಗಳನ್ನು ಪಾಲಿಸುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿ, ಇಂದಿನ ಯುವಜನತೆಗೆ ತಾತಯ್ಯ ಅವರ ಮಾರ್ಗದರ್ಶನ ಬಹಳ ಅಗತ್ಯವಾಗಿದ್ದು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸಂಭವಿಸುತ್ತಿರುವ ಅನೇಕ ದುಷ್ಪರಿಣಾಮ ತಡೆದು, ಶಾಂತಿಯುತ ಮತ್ತು ಸನ್ಮಾರ್ಗದ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು. ಬಲಿಜ ಜನಾಂಗದ ಹಿರಿಯರಾದ ವಿ. ಗೋವಿಂದರಾಜು ಹಾಗೂ ರೂಪಹರೀಶ್ ಮತ್ತು ದೇವಾಂಗ ಸಂಘದ ಅಧ್ಯಕ್ಷ ಡಾ. ರಾಜೇಶ್, ಯುವಕ ಸಂಘದ ಅಧ್ಯಕ್ಷ ಶಂಕರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ತಹಸೀಲ್ದಾರ್ ವೈ. ಎಂ. ರೇಣುಕುಮಾರ್, ತಾಪಂ ಇಒ ಮುನಿರಾಜು, ಸುಜಾತ ಅಲಿ, ಪುರಸಭೆ ಮಾಜಿ ಅಧ್ಯಕ್ಷ ಎ.ಜಗನ್ನಾಥ್, ಹಿರಿಯರಾದ ಎಚ್. ವಿ. ಸುರೇಶ್ ಕುಮಾರ್, ಮಂಜುನಾಥ, ಎಚ್. ಕೆ. ಮೋಹನ್, ಗಿರೀಶ್, ಕುಮಾರ್, ತಾಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಚ್. ಜಿ. ವೆಂಕಟೇಶ್, ಧನ್ಯ ಕುಮಾರ್, ಜಯಶ್ರೀ ಜಗನ್ನಾಥ್, ಎಚ್. ಸಿ. ಅಶೋಕ್, ನರಸಿಂಹ, ಇತರರು ಉಪಸ್ಥಿತರಿದ್ದರು.