ಪತ್ರಿಕಾ ವಿತರಕರಿಗೆ ಬದುಕಿದ್ದಾಗಲೇ ಸೌಲಭ್ಯ ನೀಡಿ: ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ

KannadaprabhaNewsNetwork |  
Published : Mar 24, 2026, 01:30 AM IST
ಪೊಟೋ: 23ಎಸ್‌ಎಂಜಿಕೆಪಿ04ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪತ್ರಿಕಾ ವಿತರಕರಿಗೆ ಸತ್ತ ಮೇಲೆ ಅಪಘಾತ ವಿಮೆ ನೀಡುವ ಬದಲು ಇದ್ದಾಗ ಆರೋಗ್ಯ ಪರಿಹಾರ ಅಥವಾ ವಿಮೆಗಳನ್ನು ನೀಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಪತ್ರಿಕಾ ವಿತರಕರಿಗೆ ಸತ್ತ ಮೇಲೆ ಅಪಘಾತ ವಿಮೆ ನೀಡುವ ಬದಲು ಇದ್ದಾಗ ಆರೋಗ್ಯ ಪರಿಹಾರ ಅಥವಾ ವಿಮೆಗಳನ್ನು ನೀಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪತ್ರಿಕಾ ವಿತರಕರಿಗೆ ಸತ್ತ ಮೇಲೆ ಅಪಘಾತ ವಿಮೆ ನೀಡುವ ಬದಲು ಇದ್ದಾಗ ಆರೋಗ್ಯ ಪರಿಹಾರ ಅಥವಾ ವಿಮೆಗಳನ್ನು ನೀಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಮಾಲತೇಶ್ ಮಾತನಾಡಿ, ಪ್ರತಿನಿತ್ಯ ಬೆಳಗಿನ ಜಾವ ಎಲ್ಲರೂ ಏಳುವ ಮುಂಚೆ ನಾವು ಸಮಾಜ ಮತ್ತು ಸರ್ಕಾರ, ರಾಜಕೀಯ ಗಣ್ಯರುಗಳ ಹಾಗೂ ರಾಜ್ಯ, ದೇಶ,ವಿದೇಶದ ಸುದ್ದಿಗಳನ್ನು ಹೊತ್ತು ತಂದು ಮನೆ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ನಮ್ಮ ಜೀವನ ಶೋಚನೀಯವಾಗಿದೆ. ಅದೇ ರೀತಿ ನಮ್ಮ ರಾಜ್ಯಾಧ್ಯಕ್ಷ ಶಂಭುಲಿಂಗ ಜಿ.ಬಿ.ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೂಡಲೆ ಸರ್ಕಾರ ಇತ್ತ ಪರಿಹಾರ ನೀಡಬೇಕು ಎಂದರು.

ಪತ್ರಿಕ ವಿತರಕ ಸಂಘದ ಗೌರವಾಧ್ಯಕ್ಷ ಹುಲಿಗಿ ಕೃಷ್ಣ ಮಾತನಾಡಿ, ಕನಿಷ್ಠ ಕಾರ್ಮಿಕ ಇಲಾಖೆ ಸೌಲಭ್ಯನೂ ಸಹ ನಮಗೆ ದೊರೆಯದೆ, ಅನ್ಯಾಯವಾಗಿದ್ದು ಎಲ್ಲಾ ಪತ್ರಿಕ ವಿತರಿಕರಿಗೂ ಆರೋಗ್ಯ ವಿಮೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ನೆರವಿನ ರೀತಿಯಲ್ಲಿ ಹೊಸ ಚಿಂತನೆ ಮಾಡಿ ಪತ್ರಿಕ ವಿತರಕರ ಜೀವನ ಸ್ಫೂರ್ತಿಯಾಗಿ ಎಂದರು.

ಜಯ ಕರ್ನಾಟಕ ಜನಪರ ವೇದಿಕೆ ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್. ಶಾಸ್ತ್ರಿ ಮಾತನಾಡಿ, ಪತ್ರಿಕಾ ವಿತರಕರ ಜೀವನ ಬಹಳಷ್ಟು ಕಷ್ಟದಲ್ಲಿದ್ದು ಸರ್ಕಾರ ವಿಶೇಷವಾದ ಅನುದಾನ ಮತ್ತು ಸೌಲಭ್ಯಗಳನ್ನು ನೀಡುವ ಮುಖಾಂತರ ಇಡೀ ದೇಶಕ್ಕೆ ಮಾದರಿಯಾಗಿ ಸಮಾಜದ ಹಾಗೂಹೋಗುಗಳ ವಿಷಯ ಮತ್ತು ಸುದ್ದಿಯನ್ನು ತಲುಪಿಸುವ ವಿತರಕರ ಬದುಕು ಕಟ್ಟಿಕೊಳ್ಳಲು ಹೊಸ ಕಾನೂನು ಜಾರಿಗೆ ತಂದ ಸಮಾಜಕ್ಕೆ ಸ್ಫೂರ್ತಿಯಾಗಿ ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್, ಪದಾಧಿಕಾರಿಗಳಾದ ಪರಶುರಾಮ್ ರಾವ್, ಮಲ್ಲಿಕಾರ್ಜುನ್ ಭದ್ರಾವತಿ , ಪಾರ್ಥಿಬನ್, ರಾಮು ಜಿ, ಚಂದ್ರಶೇಖರ್, ಪ್ರತಾಪ್, ಶರತ್, ಧನಂಜಯ್, ಅಜೀ ಉಲ್ಲಾ, ಪ್ರಾಣೇಶ್, ಸಂಗಮೇಶ್ವರ್, ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಕಾರ್ಯದರ್ಶಿ ಇಮ್ರಾನ್, ಕರವೇ ಜನಮನ ರಾಜ್ಯ ಸಂಘಟನೆ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಹಿಂದೂ ಹೋರಾಟಗಾರಿಗೆ ಅಧಿಕಾರ ಸಿಕ್ಕರೆ ಕ್ರಾಂತಿ: ಬಸನಗೌಡ ಪಾಟೀಲ್ ಯತ್ನಾಳ್
ಹೊಳೆನರಸೀಪುರದಲ್ಲಿ ಕೈವಾರ ತಾತಯ್ಯ ಜಯಂತಿ