ಕಲಾವಿದರನ್ನು ಬೆಳಕಿಗೆ ತರುವುದೇ ಕಜಾಪ ಉದ್ದೇಶ: ಡಿ.ಎಂ.ಸಾವಕಾರ

KannadaprabhaNewsNetwork | Published : Dec 7, 2024 12:31 AM

ಸಾರಾಂಶ

ಕಲಾವಿದರು ಸಾಕಷ್ಟು ಜನರಿದ್ದು ಅದರಲ್ಲಿ ಅಧಿಕ ಜನರು ಎಲೆಯ ಮರೆ ಕಾಯಿಯಂತಿರುವ ಕಲಾವಿದರನ್ನು ಬೆಳಕಿಗೆ ತರುವುದು ಕನ್ನಡ ಜಾನಪದ ಪರಿಷತ್ ಮೂಲ ಉದ್ದೇಶ ಎಂದು ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಕಲಾವಿದರು ಸಾಕಷ್ಟು ಜನರಿದ್ದು ಅದರಲ್ಲಿ ಅಧಿಕ ಜನರು ಎಲೆಯ ಮರೆ ಕಾಯಿಯಂತಿರುವ ಕಲಾವಿದರನ್ನು ಬೆಳಕಿಗೆ ತರುವುದು ಕನ್ನಡ ಜಾನಪದ ಪರಿಷತ್ ಮೂಲ ಉದ್ದೇಶ ಎಂದು ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಹೇಳಿದರು.

ಇಳಕಲ್ಲ ತಾಲೂಕಿನ ಕರಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಬಾಗಲಕೋಟೆ, ಇಳಕಲ್ಲ ತಾಲೂಕು ಹಾಗೂ ಕರಡಿ ಹೋಬಳಿ ಘಟಕದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಜನಪದ ಸಂಭ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ, ಕರಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ, ಜೋಗುಳ, ಲಾವಣಿ, ಹಂತಿ, ಕುಟ್ಟುವ, ಬಿಸುವ, ರಾಸಿ ಮಾಡುವ ಇನ್ನಿತರೆ ಹಲವಾರು ಹಾಡುಗಳನ್ನು ದಾಖಲಿಸಿಕೊಂಡು ಮಕ್ಕಳಿಗೆ ತಿಳಿಸಿಕೊಟ್ಟು ನೆಲ-ಮೂಲ ಪರಂಪರೆಯ ರೂವಾರಿಗಳನ್ನಾಗಿ ರೂಪಿಸುವುದು ಅವಶ್ಯವಿದೆ ಎಂದರು.

ಕಜಾಪ ತಾಲೂಕಾಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ಮಾತನಾಡಿ, ಜನರ ಎದೆಯ ಭಾವದಿಂದ ಜನಜನಿತವಾದ ಜನಪದ ಸಾಹಿತ್ಯವು ಹಳ್ಳಿ ಸೊಗಡಿನ ಮೂಲ ಸಂಸ್ಕೃತಿ ಆಕರ. ಅದು ಉತ್ತಮ ಆರೋಗ್ಯಕ್ಕೆ ಮೂಲ ರಕ್ಷಕ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಟಕ ಅಕಾಡೆಮಿ ಪುರಸ್ಕೃತರು ತಾಲೂಕು ಕಸಾಪ ಅಧ್ಯಕ್ಷ ಮಹಾದೇವ ಕಂಬಾಗಿ, ಕಜಾಪ ಮತ್ತು ಕಸಾಪ ಮಕ್ಕಳ ಹತ್ತಿರಕ್ಕೆ ಬಂದು ಸಾಹಿತ್ಯ ಸಂಸ್ಕೃತಿ ಬೆಳೆಸುತ್ತಿವೆ ಜನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಜಾಪ ಮುಂಚುಣಿಯಲ್ಲಿದೆ ಎಂದರು. ಸತ್ಕಾರಕ್ಕೆ ಉತ್ತರವಾಗಿ ಅಮರೇಶ ಐಹೊಳ್ಳಿ ಮಾತನಾಡಿದರು.

ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಹನಮಪ್ಪ ಚಿತ್ತವಾಡಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಜಾಪ ಕಾರ್ಯದರ್ಶಿ ಆರ್.ಬಿ.ನಬಿವಾಲೆ, ಜಿಲ್ಲಾ ಖಜಾಂಚಿ ಸುರೇಶ ವಸ್ತ್ರದ, ಹುನಗುಂದ ಕಜಾಪ ಅಧ್ಯಕ್ಷ ಬಿ.ಡಿ ಚಿತ್ತರಗಿ, ಎಂ.ಆರ್. ಪಾಟೀಲ, ಗ್ರಾಪಂ ಅಧ್ಯಕ್ಷ ಶರಣಪ್ಪ ಕನಸಾವಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಸಜ್ಜನ, ಗ್ರಾಪಂ ಪಿಡಿಒ ಆರ್.ಎಂ, ಮುದಗಲ್ಲ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಮಹಾದೇವ ಕಂಬಾಗಿ ಹಾಗೂ ಗಂಗೂಬಾಯಿ ಆರೇರ, ಮಹಾಂತೇಶ ಗೊರಜನಾಳ, ಎಚ್.ಎಸ್.ಗೌಡರ, ಚಿನ್ನಪ್ಪ ಇಂಜಿನೀಯರ್, ವೆಂಕನಗೌಡ ಗೌಡರ, ಅರುಂಧತಿ ಎಂ, ವೆಂಕನಗೌಡ ಗೌಡರ, ಮುತ್ತು ಕರಮಡಿ, ಈರಣ್ಣ ಕುಂದರಗಿಮಠ, ಅಮರೇಶ ಐಹೊಳ್ಳಿ, ಆನಂದ ದೇವಗಿರಿಕರ ಇವರನ್ನು ಸನ್ಮಾನಿಸಲಾಯಿತು. ಪ್ರತಿಭೆಗಳಾದ ಪ್ರಿಯಾಂಕ ಕನ್ನಳ್ಳಿ, ಶಾರದಾ ಕಂಡ್ರಿ, ಪ್ರತಿಕ್ಷಾ ಭಜಂತ್ರಿ, ರೂಪಾ ತೋಟದ, ಭಾಗ್ಯವತಿ ಹೆಚ್ ಹಾಗೂ ಜಯಶ್ರೀ ಗೌಡರಗೆ ಪುರಸ್ಕಾರ ನೀಡಲಾಯಿತು.

ಜನಪದ ವಿವಿದ ಕಲೆಗಳ ಪ್ರದರ್ಶನವೂ ನಡೆಯಿತು. ರಾಮಕೃಷ್ಣ ಹಂಚಾಟೆ, ಮಲ್ಲಪ್ಪ ಅಂಗಡಿ, ವೈಶಾಲಿ ಘಂಟಿ, ಸುಜಾತ ಅಂಗಡಿ, ಕಲ್ಪನಾ ಗಜೇಂದ್ರಗಡ, ನಂದಾ ನಾಗಶೆಟ್ಟಿ, ಬಸಮ್ಮ ಕರ್ಲಿ, ವಿಧ್ಯಾ ಹಡಗಲಿ, ಸುಮಾ ಶೀಲವಂತರ, ನಿಂಗಮ್ಮ ಬೇವೂರ, ಅಶೋಕ ಬೇವಿನಮಟ್ಟಿ ಗಣೇಶ ಕುಪಸ್ತ ಮತ್ತಿತರರು ಇದ್ದರು. ಸೌಜನ್ಯ ಗೌಡರ್ ಹಾಗೂ ಸಂಗಡಿಗರು ಪ್ರಾರ್ಥಿಸಿ, ಕರಡಿ ಹೋಬಳಿ ಘಟಕದ ಅಧ್ಯಕ್ಷ ಮಹಾಂತೇಶ ಅಂಗಡಿ ಸ್ವಾಗತಿಸಿ, ಎಚ್.ಬಿ ಕಂಬಳಿ ನಿರೂಪಸಿ, ನಾಗಪ್ಪ ಲಮಾಣಿ ವಂದಿಸಿದರು.

Share this article