ಕನ್ನಡ್ರಭ ವಾರ್ತೆ ನಾಪೋಕ್ಲು
ದೇವಾಲಯದ ಮುಖ್ಯ ದ್ವಾರದಿಂದ ನಾಗನಕಟ್ಟೆ ವರೆಗೆ 12 ಲಕ್ಷ ರು. ವೆಚ್ಚದಲ್ಲಿ ಏರುಗತಿಯ ಹಾದಿಗೆ ಬಿಸಿಲು ಮಳೆಯಿಂದ ಭಕ್ತಾದಿಗಳಿಗೆ ರಕ್ಷಣೆಗಾಗಿ ಹಾದಿಯುದ್ದಕ್ಕೂ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಮತ್ತು ಹಂಚಿನ ಮೇಲ್ಛಾವಣಿ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಸನ್ನಿಧಿಯ ಮುಖ್ಯ ದ್ವಾರದಿಂದ ನಾಗನಕಟ್ಟೆಯ ವರೆಗಿನ ಪ್ರದೇಶಕ್ಕೆ ಮಳೆಗಾಲದಲ್ಲಿ ಏರುಗತಿಯ ದಾರಿಯಲ್ಲಿ ಪಾಚಿಗಟ್ಟಿ ಜಾರುವ ದಾರಿಯಿಂದಾಗಿ ಭಕ್ತರು ನಡೆದಾಡಲು ಕಷ್ಟ ಪಡುತ್ತಿದ್ದರು. ಇದನ್ನು ಮನಗಂಡ ಭಕ್ತ ಜನ ಸಂಘದ ಪದಾಧಿಕಾರಿಗಳು ಯೋಜನೆ ರೂಪಿಸಿದ್ದು ಮೇಲ್ಛಾವಣಿ ನಿರ್ಮಿಸಲು ನಿರ್ಧರಿಸಲಾಗಿತ್ತು.ಭಕ್ತ ಜನ ಸಂಘದ ಅಧ್ಯಕ್ಷ, ಅಖಿಲ ಕೊಡವ ಸಮಾಜ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಪ್ರಾರ್ಥನೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು. ಅರ್ಚಕ ಜಗದೀಶ್ ಪ್ರಸಾದ್ ಪೂಜಾ ವಿಧಿ ವಿಧಾನ ನೆರವೇರಿಸಿದರು.