ಕನ್ನಡಪ್ರಭ ವಾರ್ತೆ ನಾಪೋಕ್ಲು
ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ ಮಾತನಾಡಿ ವರ್ಷಕ್ಕೊಮ್ಮೆ ನಡೆಯುವ ಮಹಾಸಭೆಗೆ ಸದಸ್ಯರು ಎಲ್ಲರೂ ಹಾಜರಾಗಬೇಕು. ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಸಂಘದ ನಿರ್ದೇಶಕ ಕಲಿಯಂಡ ಹ್ಯಾರಿ ಮಂದಣ್ಣ ಮಾತನಾಡಿ, ಭಕ್ತರ ಹಣದಲ್ಲಿ ಭಕ್ತ ಜನ ಸಂಘ ದೇವಾಲಯದ ಅಭಿವೃದ್ಧಿ ಕಾರ್ಯ ಮಾಡಿದ್ದು ಮುಜರಾಯಿ ಇಲಾಖೆಯೊಂದಿಗೆ ಭಕ್ತ ಜನ ಸಂಘ ಸೇರಿಕೊಂಡು ದೇವಾಲಯದ ಅಭಿವೃದ್ಧಿ ಆಗಬೇಕು ಎಂದರು.ಸದಸ್ಯ ಜಿ .ರಾಜೇಂದ್ರ ಮಾತನಾಡಿ, ಹಿಂದಿನ ವಾರ್ಷಿಕ ಮಹಾಸಭೆಯಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆಯ ಮರಳಿ ಪಡೆಯಲು ಶಾಸಕರು ಮುಖ್ಯಮಂತ್ರಿಗಳೊಂದಿಗೆ ವ್ಯವಹರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ಏನು ಬೆಳವಣಿಗೆಗಳಾಗಿವೆ ಎಂದು ಪ್ರಶ್ನಿಸಿದರು.
ದೇವಾಲಯ ಟ್ರಸ್ಟ್ ರಚನೆ ಸಲಹೆ:
ಭಕ್ತರು ಇತರ ಅರ್ಚಕರನ್ನು ಕರೆದುಕೊಂಡು ಬಂದರೆ ದೇವಾಲಯದಲ್ಲಿ ಪೂಜೆಗೆ ಅವಕಾಶ ನೀಡಬಾರದು ಎಂದು ಬೊಳಿಯಾಡಿರ ಸಂತು ಸುಬ್ರಮಣಿ ಸಲಹೆ ನೀಡಿದರು. ಒಂದು ಬಾರಿ ತುಲಾಭಾರಕ್ಕೆ ಬಳಸಿದ ಅಕ್ಕಿ ಮರುಬಳಕೆ ಮಾಡಬಾರದು ಎಂದು ಪರದಂಡ ಸದಾ ನಾಣಯ್ಯ ಸೂಚಿಸಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ , ತಕ್ಕರಾದ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ, ದೇವಾಲಯದ ಅಭಿವೃದ್ಧಿ ಮುಖ್ಯ. ಎಲ್ಲರೂ ಭಕ್ತ ಸಂಘಕ್ಕೆ ಸಹಕಾರ ನೀಡಬೇಕು. ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, 15 ವರ್ಷಗಳಿಂದ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅಭಿವೃದ್ಧಿ ಕೈಗೊಂಡ ಸಮಗ್ರ ಮಾಹಿತಿ ತಿಳಿಸಿದರು.
ಸಂಘದ ಕಾರ್ಯದರ್ಶಿ ಬೊಳಂದಂಡ ಲಲಿತ ನಂದಕುಮಾರ್ ವಾರ್ಷಿಕ ವರದಿ, ಲೆಕ್ಕ ಪತ್ರ ಮಂಡಿಸಿದರು. ಕೋಟಿಮಣಿಯoಡ ಭೂಪಯ್ಯ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಪರದಂಡ ಡಾಲಿ ಸ್ವಾಗತಿಸಿದರು. ಖಜಾಂಚಿ ಖಜಾಂಜಿ ನಂಬಡಮಂಡ ಸುಬ್ರಮಣ್ಯ ವಂದಿಸಿದರು.
ಈ ಸಂದರ್ಭ ಮಹಾಸಭೆಯಲ್ಲಿ 15 ಮಂದಿ ಸದಸ್ಯರನ್ನೊಳಗೊಂಡ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಯವಕಪಾಡಿಯ ಅಂಜಪರವಂಡ ಕುಶಾಲಪ್ಪ, ನಾಲಡಿಯ ಪರದಂಡ ಸುಮನ್ ಸುಬ್ರಮಣಿ, ಪರದಂಡ ನಾಣಯ್ಯ, ಕೆಳೇಟಿರ ರಂಜನ್ ಅಪ್ಪಚ್ಚು, ಕಲಿಯಂಡ ಗಿರೀಶ್, ಅಲ್ಲಾರಂಡ ಸನ್ನು ಅಯ್ಯಪ್ಪ, ಬಿಟ್ಟಿರ ಚೋಂದಮ್ಮ, ಕುಲ್ಲೇಟಿರ ಅರುಣ್ ಬೇಬ, ಕಾಂಡಂಡ ಸಜನ್ ಪೂವಯ್ಯ, ಕುಟ್ಟ೦ಜೇಟ್ಟಿರ ಬೋಪಣ್ಣ , ಅಪ್ಪಾರಂಡ ಮಂದಣ್ಣ ಅನ್ನಾಡಿಯಂಡ ದಿಲೀಪ್ ,ಕಲ್ಯಾಟ೦ಡ ಅಪ್ಪಣ್ಣ ಹಾಗೂ ಅರ್ಚಕ ಕುಶ ಭಟ್ಅವರನ್ನು ಆಯ್ಕೆ ಮಾಡಲಾಯಿತು.