ಕನ್ನಡಪ್ರಭ ವಾರ್ತೆ ಕಲಬುರಗಿ
ಫೆ.29ರರೊರೊಳಗಾಗಿ ಸುಸ್ತಿಸಾಲಗಾರ ರೈತರು ಈ ಯೋಜನೆಯ ಲಾಭ ಪಡೆಯಲಿ. ಮತ್ತೆ ಹೊಸ ಸಾಲ ಪಡೆಯಲು ಅರ್ಹರಾಗಲಿ ಎಂದು ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಅಧಕ್ಷ ಸೋಮಶೇಖರ ಗೋನಾಯಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ಕಂಗೆಟ್ಟಿರುವ ರೈತರಿಗೆ ಈ ಯೋಜನೆ ವರವಾಗಲಿದೆ. ರೈತರು ಈ ಯೋಜನೆಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದ್ದಾರೆ.ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 731 ಸುಸ್ತಿದಾರ ರೈತರಿದ್ದಾರೆ. ಇವರಿಂದ ಬ್ಯಾಂಕಿಗೆ ಅಸಲು 34. 38 ಕೋಟಿ ರು, ಬಡ್ಡಿ 30.93 ಕೋಟಿ ರು. ಸೇರಿದಂತೆ ಒಟ್ಟು 65.22 ಕೋಟಿ ರು. ಹಣ ವಸೂಲಾಗಬಕು. 731 ಸುಸ್ತಿ ಪ್ರಕರಣಗಳ ಪೈಕಿ 667 ಪ್ರಕರಣಗಳಲ್ಲಿ ರೈತರ ಮೇಲೆ ದಾವೆ ಹೂಡಲಾಗಿದೆ. ಈ ಪೈಕಿ 60 ಕೋಟಿ ರು. ಅವಾರ್ಡ್ ಆಗಿದೆ. ಇನ್ನೂ 654 ಕೋಟಿ ರು. ಬಾಕಿ ಬರಬೇಕಿದೆ. ಬಡ್ಡಿ ರೂಪದಲ್ಲಿ 50.9 ಕೋಟಿ ರು. ಬಾಕಿ ಸುಸ್ತೀದಾರ ಸಾಲಗಾರರ ರೂಪದಲ್ಲಿ ಬರಬೇಕಿದೆ ಎಂದರು.
ಬ್ಯಾಂಕಿನ ಹೊಸ ಕಟ್ಟಡಕ್ಕಾಗಿ ರೈತರಿಂದ ಸಂಗ್ರಹಿಸಿದ್ದ 15 ಕೋಟಿ ರು. ಹಣವನ್ನು ಕಳೆದ ಬಾರಿಯ ಆಡಳಿತ ಮಂಡಳಿ ಬೆಳೆ ಸಾಲಕ್ಕೆ ಹಣ ವಿನಿಯೋಗಿಸಿದೆ. ನವು ಅಧ್ಯಕ್ಷರಾಗಿ ಬಂದ ಮೇಲೆ ಹಳೆ ಕಟ್ಟಡವನ್ನೇ ರಿಪೇರಿ ಮಾಡಲಾಗಿದ್ದು ಬಾಡಿಗೆ ಕಟ್ಟಡದಿಂದ ಬ್ಯಾಂಕನ್ನು ಮತ್ತೆ ಹಲೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು.
ಖಾದಿ ಉದ್ಯಮ ಸಮೀತಿಗೆ ಡಿಸಿಸಿ ಬ್ಯಾಂಕು ಸದಸ್ಯತ್ವ ಹೊಂದಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸದಸ್ಯತ್ವ ನಮಗೆ ದೊರಕಿದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಯೋಜನೆ, ಉದ್ಯಮ ಶೀಲತೆ ಅಭಿವೃದ್ಧಿ ಯೋಜನಯಡಿಯಲ್ಲಿ ಶೇ. 35 ರಿಯಾಯ್ತಿಯ ಯೋಜನೆಗಳು ಯುವಕರಿಗೆ ಲಭ್ಯವಾಗಲಿವೆ. ಮದ್ಯ, ಮಾಂಸದ ಮಲಿಗೆ ಹೊರತು ಪಡಿಸಿ ಉಳಿದೆಲ್ಲ ವ್ಯವಹಾರಕ್ಕೆ ಈ ಯೋಜನೆಯಲ್ಲಿ ಅವಕಾಶವಿದೆ. ಇನ್ನೇನು 2 ವಾರದಲ್ಲಿ ಈ ಪ್ರಕ್ರಿಯೆ ಮುಗಿದು ಡಿಸಿಸಿ ಬ್ಯಾಂಕಿಗೆ ಸದಸ್ಯತ್ವ ದೊರಕುವ ವಿಶ್ವಾಸ ಗೋನಾಯಕ್ ವ್ಯಕ್ತಪಡಿಸಿದರು.