ಕಲಬುರಗಿ: ರೈತರಿಂದ ಡಿಸಿ ಕಚೇರಿಗೆ ಮುತ್ತಿಗೆ

KannadaprabhaNewsNetwork |  
Published : Nov 15, 2026, 01:15 AM IST
ಫೋಟೋ- ಕಬ್ಬು 1, ಕಬ್ಬು 2 ಮತ್ತು ಕಬ್ಬು 3 | Kannada Prabha

ಸಾರಾಂಶ

ಕಲಬುರಗಿಯಲ್ಲಿ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರ ಹೋರಾಟ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಲಬುರಗಿಯಲ್ಲಿರುವ 5 ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ ಕಬ್ಬಿಗೆ 3, 400 ರು. ನೀಡಲು ಒಪ್ಪಿರದಗಿ ಡೀಸಿ ಇಕ್ರಮ್‌ ಶರೀಫ್‌ ಹೇಳಿಕೆ ನೀಡಿದ್ದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಕಲಬುರಗಿಯಲ್ಲಿ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರ ಹೋರಾಟ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಲಬುರಗಿಯಲ್ಲಿರುವ 5 ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ ಕಬ್ಬಿಗೆ 3, 400 ರು. ನೀಡಲು ಒಪ್ಪಿರದಗಿ ಡೀಸಿ ಇಕ್ರಮ್‌ ಶರೀಫ್‌ ಹೇಳಿಕೆ ನೀಡಿದ್ದರು.ಜಿಲ್ಲಾಧಿಕಾರಿ ಮದ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಹೊಂದಲಾಗಿತ್ತಾದರೂ ರೈತರು ಈ ಬೆಲೆಯನ್ನು ತಿರಸ್ಕರಿಸಿದ್ದು ಪ್ರತಿ ಟನ್‌ ಕಬ್ಬಿಗೆ 3, 600 ರು ನಿಗದಿಪಡಿಸಬೇಕು, ಇಲ್ಲದೆ ಹೋದ್ರೆ ಹೋರಾಟ ಇನ್ನೂ ಉಗ್ರ ಸ್ವರೂಪದಲ್ಲಿ ನಡೆಸೋದಾಗಿ ಹೇಳಿ ಡೀಸಿ ಕಚೇರಿಗೇ ಮುತ್ತಿಗೆ ಹಾಕಿದ್ದಾರೆ. ರಾತ್ರಿಯೂ ಹೋರಾಟ ಮುಂದುವರಿದಿದ್ದು, ಕಲಬುರಗಿ ಮುಖ್ಯರಸ್ತೆಯ ಸಂಚಾರ ಸ್ಥಗಿತಗೊಂಡಿದೆ.ಕಳೆದ 15 ದಿನದಿಂದ ಚವಡಾಪೂರ ಕ್ರಾಸ್‌ ಹತ್ತಿರ ರೈತರು ಹೋರಾಟದಲ್ಲಿದ್ದರು. ಅವರೆಲ್ಲರ ಹೋರಾಟ ಇದೀಗ ಡೀಸಿ ಕಚೇರಿಗೆ ಶಿಫ್ಟ್‌ ಆಗಿರೋದರಿಂದ ನಗರದಲ್ಲಿ ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ ಬಂದಿದೆ. ಡೀಸಿ ಕಚೇರಿ ಎದುರು ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು, ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ನೀಡುವಂತೆ ಆಗ್ರಹಿಸಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿರುವ ಹರಾಟದ ನೇತೃತ್ವ ವಹಿಸಿರುವ ಚೂನಪ್ಪ ಪೂಜಾರಿ ಹಾಗೂ ಇತರರು ಡಸಿ ಕೇರಿಯಲ್ಲಿ ಸಭೆಯಲ್ಲಿ ಡೀಸಿಯವರೇ ಇಲ್ಲ, ಕಾರ್ಖಾನೆವರೂ ಇಲ್ಲ. ಹೀಗಿದ್ದಾಗ ನಾವೇನು ಆಹಾರ ಇಲಾಖೆಯ ಉಪನಿರ್ದೇಶಕರೊಂದಿಗೆ ಮಾತಾಡಬೇಕಾ? ಲಕ್ಷಾಂತರ ರೈತರು ಸೇರಿ ಹೋರಾಟ ಮಾಡುತ್ತಿದ್ದಾರೆ. ಇವರಿಗೆ ರೈತರ ಹೋರಾಟಕ್ಕೆ ಬೆಲೆಯೇ ಇಲ್ಲವೆ? ಎಂದು ಖಾರವಾಗಿ ಪ್ರಶ್ನಿಸಿದರು.ರೈತರ ಕಬ್ಬಿಗೆ ನ್ಯಾಯ ಸಮ್ಮತ ಬೆಲೆ ಸಿಗೋವರೆಗೂ ಹೋರಾಟ ನಡೆಯಲಿದೆ. ಜಿಲ್ಲಾಡಳಿತದವರು ಕಬ್ಬಿನ ರೈತರ ಹೋರಾಟ ಅಲಕ್ಷಿಸುತ್ತಿದ್ದಾರೆದು ಅನೇಕ ರೈತರು ಆರೋಪಿಸಿದ್ದಾರೆ. ರೈತರ ಹೋರಾಟ ಉಗ್ರಗೊಂಡಿರೋದರಿಂದ ಡೀಸಿ ಮಧ್ಯಸ್ಥಿಕೆಯಲ್ಲಿ ನಿಗದಿಯಾಗಿದ್ದ ಟನ್‌ ಕಬ್ಬಿನ 3, 400 ರು ಬೆಲೆಯ ಒಪ್ಪಂದ ಬಿದ್ದು ಹೋದಂತಾಗಿದೆ. ರೈತರು ಈ ಬೆಲೆಗೆ ಒಪ್ಪಿಲ್ಲ. ಟನ್‌ಗೆ 3, 600 ರು ನಿಗದಿಪಡಿಸಬೇಕಂಬುದು ಕಬ್ಬು ರೈತರ ಒಕ್ಕರಲಿನ ಆಗ್ರಹವಾಗಿದೆ. ಹೋರಾಟ ರಾತ್ರಿಯೂ ಮುಂದುವರಿದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ಉದ್ಯೋಗಕ್ಕಾಗಿ ಕರವೇ ಆಗ್ರಹ ಅಭಿಯಾನ
ಸಹಕಾರ ಕ್ಷೇತ್ರದಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ: ಶೇಖರಗೌಡ ಮಾಲಿ ಪಾಟೀಲ್