ರೈತರ ಸಂಕಷ್ಟ ದೂರವಾಗಿ ಮಳೆಯ ಅಭಾವ ನೀಗಿ ಉತ್ತಮ ಮಳೆಯಾಗುವ ಮೂಲಕ ರೈತರ ಕಣ್ಣೀರು ಒರೆಸುವ ಸಂಕಲ್ಪದೊಂದಿಗೆ ಇಲ್ಲಿನ ಬಹಮನಿ ಕೋಟೆ ಪಕ್ಕದಲ್ಲಿ 21 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮ ಭಾನುವಾರ ಸಂಜೆ ವಿದ್ಯುಕ್ತವಾಗಿ ಆರಂಭವಾಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿರೈತರ ಸಂಕಷ್ಟ ದೂರವಾಗಿ ಮಳೆಯ ಅಭಾವ ನೀಗಿ ಉತ್ತಮ ಮಳೆಯಾಗುವ ಮೂಲಕ ರೈತರ ಕಣ್ಣೀರು ಒರೆಸುವ ಸಂಕಲ್ಪದೊಂದಿಗೆ ಇಲ್ಲಿನ ಬಹಮನಿ ಕೋಟೆ ಪಕ್ಕದಲ್ಲಿ 21 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮ ಭಾನುವಾರ ಸಂಜೆ ವಿದ್ಯುಕ್ತವಾಗಿ ಆರಂಭವಾಯಿತು.
ಹಿಂದೂ ಮಹಾಗಣಪತಿ ಸಮಿತಿಯ ಗೌರವಾಧ್ಯಕ್ಷ ಸಂಜೀವ್ ಗುಪ್ತಾ, ರಾಜು ನಲವದಿ ಸೇರಿದಂತೆ ಸಮೀತಿಯ ಪ್ರಮುಖರ ಸಮ್ಮುಖದಲ್ಲಿ ಪೂಜೆಗಳು ನಡೆದು ಗಣಪತಿಯನ್ನು ಭವ್ಯ ಶೋಭಾಯಾತ್ರೆಯ ಮೂಲಕ ವಿಸರ್ಜನೆಗೆ ಅಣಿಗೊಳಿಸಲಾಯ್ತು. ನಗರದ ಕೋಟೆ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಹಿಂದೂ ಮಹಾಗಣಪತಿಗೆ ಭಾನುವಾರ ಬೆಳಗ್ಗೆಯೂ ವಿಧಿವಿಧಾನಗಳ ಪ್ರಕಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭವ್ಯ ಶೋಭಾಯಾತ್ರೆ ಆರಂಭಗೊಂಡಿತು. ಶೋಭಾಯಾತ್ರೆಯಲ್ಲಿ ದೇಶಿ ಸಾಂಸ್ಕೃತಿಕ ಕಲಾತಂಡಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು.ನಾಸಿಕ್ ಡೋಲು, ಡೊಳ್ಳು, 30 ಜನರ ಮಂಗಳೂರಿನ ಭಜನಾ ತಂಡ, ಸಾರವಾಡದಿಂದ 10 ಜನರ ಗೊಂಬೆ ಕುಣಿತ ತಂಡ ಹಾಗೂ 15ಕ್ಕೂ ಹೆಚ್ಚು ಭಜನಾ ಮಂಡಳಿಗಳು ಭಾಗವಹಿಸಿ ಮೆರುಗು ತಂದವು. ಶೋಭಾಯಾತ್ರೆಯು ಸಂಜೆ 4ಕ್ಕೆ ಕೋಟೆ ಮುಂಭಾಗದಿಂದ ಆರಂಭವಾಗಿ ಪ್ರಕಾಶ್ ಏಷಿಯನ್ ಮಾಲ್, ಹುಮನಾಬಾದ್ ಬೇಸ್, ಚೌಕ್ ಪೊಲೀಸ್ ಠಾಣೆ, ಸರಾಫ್ ಬಜಾರ್, ಚಪ್ಪಲ್ ಬಜಾರ್, ಸೂಪರ್ ಮಾರ್ಕೆಟ್, ಜಗತ್ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಸಂಚರಿಸಿ ಅಪ್ಪನ ಕೆರೆಯಲ್ಲಿ ಗಣಪತಿ ವಿಸರ್ಜನೆ ನಡೆಯಿತು.ಹಿಂದೂ ಮಹಾಗಣಪತಿ ಸಮಿತಿಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಕಾರ್ಯದರ್ಶಿ ಅಶ್ವಿನ್ ಕುಮಾರ್, ಅನಿಲಕುಮಾರ ಸಿನ್ನೂರಕರ್, ಸಹ ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಪ್ರಶಾಂತ ಗುಡ್ಡಾ, ಶಿವರಾಜ ಸಂಗೋಳಗಿ, ಸತೀಶ್ ಮಾವೂರ್, ಸಂಜಯ್ ರೇವಣಕರ್, ಬಿರಾದಾರ ಸರ್, ಸಿದ್ದು ಸಾಕರೆ ಸೇರಿದಂತೆ ಅನೇಕ ಪ್ರಮುಖರು ಶೋಭಾಯಾತ್ರೆಯಲ್ಲಿದ್ದರು. ಆಕರ್ಷಕವಾಗಿದ್ದ ಕಲಾತಂಡಗಳ ಪ್ರದರ್ಶನ: ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ನಾಸಿಕ್ ಡೋಲು, ಡೊಳ್ಳು, ಭಜನಾ ತಂಡಗಳು, ಗೊಂಬೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಹಿಂದೂ ಮಹಾಗಣಪತಿ ಸಮಿತಿಯಿಂದ 21 ದಿನಗಳ ಕಾಲ ಗಣೇಶನ ಪ್ರತಿಷ್ಠಾಪನೆ ಮಾಡುವ ಮೂಲಕ ವಿವಿಧ ಕಾರ್ಯಕ್ರಮ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೂಲಕ ಸಮಾಜದಲ್ಲಿ ಸಾಮರಸ್ಯ ಭಾವ ಮೂಡಿಸಿ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಸಂದೇಶ ಸಾರಲಾಯಿತು. ಶೋಭಾಯಾತ್ರೆಯಲ್ಲಿ ಕಲಬುರಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರೋದು ಖುಷಿ ತಂದಿದೆ ಎಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಶ್ರೀಮಂತ ರಾಜು ನವಲದಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.