ಕನ್ನಡಪ್ರಭ ವಾರ್ತೆ ಚವಡಾಪುರ
ಜ.15 ಸೋಮವಾರದಂದು ಬೆಳಗ್ಗೆಯಿಂದ ಸಂಜೆ ವರೆಗೆ ದೇವರ ಅಡ್ಡಪಲ್ಲಕ್ಕಿ ಉತ್ಸವವು ದೇವಸ್ಥಾನ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳ ಸಮ್ಮುಖದಲ್ಲಿ ಜರುಗಿತು. ಪಲ್ಲಕ್ಕಿ ಉತ್ಸವದ ವೇಳೆ ಭಕ್ತರು ದೇವರಿಗೆ ನಮಿಸಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಭಾವದಿಂದ ನಮಿಸಿದರು. ಬಂದ ಭಕ್ತರಿಗಾಗಿ ದೇವಸ್ಥಾನ ಕಮಿಟಿಯವರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ರಾತ್ರಿ ಜಾತ್ರೆಯ ಪ್ರಯುಕ್ತ ಸಾಮಾಜಿಕ ನಾಟಕ, ಸಂಗೀತ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಶಿವಾನಂದ ಶಿವಯೋಗಿಗಲು ಕಲ್ಲಾಲಿಂಗ ಮಠ ಕುಮಸಗಿ, ಈರಕ್ತಯ್ಯ ಹಿರೆಮಠ, ಸುರೇಶಗೌಡ ಮಾಲಿಪಾಟೀಲ, ರೇವಣಸಿದ್ದಯ್ಯ ಮಠ, ರೇವಣಸಿದ್ದ ನಾಟಿಕಾರ, ಭಾಗಣ್ಣ ನಾಟಿಕಾರ, ಹುಲಿಕಂಟೆಪ್ಪ ಹೇರೂರ, ರಮೇಶ ಹೂಗಾರ, ಸುಭಾಷಚಂದ್ರಗೌಡ ಪೊಲೀಸಪಾಟೀಲ, ರಮೇಶಗೌಡ ಪೊಲೀಸಪಾಟೀಲ, ಬಾಳುಗೌಡ ಮಾಲಿಪಾಟೀ, ಸಂಗಪ್ಪ ಪೂಜಾರಿ, ಸಂತೋಷ ಜಗಲಗೊಂಡ, ಮದಪ್ಪ ಜಗಲಗೊಂಡ, ಸಾಯಬಣ್ಣ ದೊಡ್ಮನಿ, ಶಿವಲಿಂಗ ಗಾಯಕವಾಡ, ಪರಮಾನಂದ ಕಲಾಲ ಸೇರಿದಂತೆ ಸಹಸ್ರಾರು ಭಕ್ತರು ಇದ್ದರು.