ಕನ್ನಡಪ್ರಭ ವಾರ್ತೆ ಚಿಂಚೋಳಿ
ಗೊಂಡ-ಕುರುಬ ಎರಡೂ ಜಾತಿಗಳು ಒಂದೇ ಆಗಿದ್ದು, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಗೊಂಡ-ಕುರುಬರ ಸಂಘ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಗರ್ಜನೆ ಮುಖಂಡರು ಸೋಮವಾರ ಪಟ್ಟಣದಲ್ಲಿ ಅರೆಬೆತ್ತಲೆ ಹಾಗೂ ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಸಿದರು.ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಕುರುಬ ಸಮಾಜದ ಮುಖಂಡರು ಪಟ್ಟಣದ ಬಸನಿಲ್ದಾಣದಿಂದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆವರೆಗೆ ಡೊಳ್ಳು ಬಾರಿಸುತ್ತಾ ಬೇವಿನ ಸೊಪ್ಪು, ಲಕ್ಕಿ ತಪ್ಪಲು ಮೈಗೆ ಸುತ್ತಿಕೊಂಡು ಸರ್ಕಾರದ ಗಮನ ಸೆಳೆದರು.
ಗೊಂಡ ಪರ್ಯಾಯ ಪದವೇ ಕುರುಬ ಆಗಿದೆ. ಕುರುಬ ಮತ್ತು ಗೊಂಡ ಒಂದೇ ಆಗಿದೆ. ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅನೇಕ ವರ್ಷಗಳಿಂದ ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿವೆ. ಆದರೆ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಇನ್ನುವರೆಗೆ ಕೇಂದ್ರ ಸರಕಾರ ನೀಡಿರುವುದಿಲ್ಲ. ಗೊಂಡ ಆದಿವಾಸಿ ಜಾತಿಯನ್ನು ೧೯೩೬ರಲ್ಲಿ ರಾಣಿ ಎಲಿಜಬೆತ ಮತ್ತು ೧೯೫೦ರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಎಸ್.ಟಿ. ಪಟ್ಟಿಯಲ್ಲಿ ಪರಿಗಣಿಸಿದ್ದಾರೆ. ಆದರೆ ಕುರುಬ ಸಮಾಜಕ್ಕೆ ಇನ್ನುವರೆಗೆ ಸರಕಾರ ಎಸ್.ಟಿ. ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕುರುಬ ಸಂಘದ ತಾಲೂಕು ಅಧ್ಯಕ್ಷ ಹಣಮಂತ ಪೂಜಾರಿ ಮಾತನಾಡಿ, ನಮ್ಮ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಆದರೆ ರಾಜ್ಯ ಸರ್ಕಾರವು ಕುರುಬ ಸಮಾಜವನ್ನು ಎಸ್.ಟಿ. ಗೊಂಡಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ ಈವರೆಗೆ ನಮ್ಮ ಬೇಡಿಕೆಗೆ ಸರಕಾರಗಳು ಸ್ಪಂದಿಸಿಲ್ಲ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಕೊಡಿಸಿಲ್ಲ. ಕುರುಬ ಸಮಾಜದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿದ್ದಾರೆ. ಅಲ್ಲದೇ ೧೩ ಶಾಸಕರು ಇದ್ದಾರೆ. ಆದರೆ ನಮ್ಮ ಜನಾಂಗದ ಬೇಡಿಕೆಗೆ ಅವರು ಸ್ಪಂದಿಸುತ್ತಿಲ್ಲ. ಸಂವಿಧಾನಬದ್ಧವಾದ ಹಕ್ಕುಗಳನ್ನು ನಮಗೆ ಸರಕಾರಿ ಕಲ್ಪಿಸಬೇಕಾಗಿದೆ ಎಂದುಧಾಅಗ್ರಹಿಸಿದರು.
ಕುರುಬ ಸಮಾಜದ ಮುಖಂಡರಾದ ರೇವಣಸಿದ್ದಪ್ಪ ಸಾತನೂರ, ರೇವಣಸಿದ್ದಪ್ಪ ಅಣಕಲ, ರಾಜಕುಮಾರ ಮರಪಳ್ಳಿ, ಗೋಪಾಲ ಗಾರಂಪಳ್ಳಿ, ಗುರುನಾಥ ಪೂಜಾರಿ, ಅಭಿಷೇಕ, ರವೀಂದ್ರ ಪೂಜಾರಿ, ಬಂಡೆಪ್ಪ ಪೂಜಾರಿ, ಹಣಮಂತ ಹಿರೇಮನಿ, ಅಭಿಷೇಕ ಮಲಕನೋರ, ಕೃಷ್ಣಾ ಬೀರಾಪೂರ, ದೇವೇಂದ್ರಪ್ಪ ಮಾತನಾಡಿದರು.ಪ್ರತಿಭಟನೆಯಲ್ಲಿ ಕುರುಬ ಸಮಾಜದ ಮುಖಂಡರಾದ ಜಗನ್ನಾಥ ಪೆಂಚನಪಳ್ಳಿ, ರವಿಗೊಲ್ಲ, ಮಹಾದೇವ, ವೆಂಕಟೇಶ, ಬಕ್ಕಪ್ಪ ಪೋಲಕಪಳ್ಳಿ, ಮಂಜುಳ ಸಾತನೂರ, ಬಂಟನಳ್ಳಿ ಬಂಡಪ್ಪ, ಮಂಜುಳ ಸುಲೇಪೇಟ, ಶಾರದಾಬಾಯಿ ಐನಾಪೂರ, ಸಂತೋಷ ಮಾಳಪ್ಪನೋರ, ಕೃಷ್ಣಪ್ಪ ಮಿರಿಯಾಣ, ನಾಗಪ್ಪ, ಅಶೋಕ ಸುಲೇಪೇಟ, ಜಗನ್ನಾಥ ಕರೊಳ್ಳಿ, ಚಂದ್ರಕಾಂತ ಮಿರಿಯಾಣ, ನರಸಿಂಹ ಮಲ್ಲೇಶ ಕುಂಚಾವರಂನೇತೃತ್ವ ವಹಿಸಿದ್ದರು.