* ಶೇಷಮೂರ್ತಿ ಅವಧಾನಿ ಕಲಬುರಗಿ
ಪ್ರತಿ ಬಾರಿ ಮಳೆಯಿಂದಾಗುವ ಅತಿವೃಷ್ಟಿ, ಮಳೆ ಕೊರತೆಯಿಂದ ಎದುರಾಗುವ ಅನಾವೃಷ್ಟಿ, ಭೀಮಾ ನದಿ ತೀರದ ಲಕ್ಷಾಂತರ ರೈತರು, ಜನತೆ ಕಣ್ಣೀರ ಕೋಡಿ ಹರಿಸುವಂತಾಗಿದೆ. ತಾವು ಲಕ್ಷಾಂತರ ಹಣ ಹೂಡಿ ಮಾಡುತ್ತಿರೋ ಬೇಸಾಯದ ಫಸಲು ಫಲ ಅತೀ ನೀರಿನಿಂದ, ನೀರಿನ ಕೊರತೆಯಿಂದಾಗಿ ಹಾಳಾಗೋದನ್ನು ಕಣ್ಣಾರೆ ಕಂಡು ಮರಗುತ್ತಾರೆ. ಕಣ್ಣ ಮುಂದೆಯೇ ನದಿ ಉಕ್ಕೇರಿ ಮನೆ ಮಠ ಹೊಕ್ಕು ಬೀದಿಗೆ ಬೀಳುತ್ತಾರೆ, ಕೆಲವೊಮ್ಮೆ ನದಿ ಇದ್ದರೂ ಕೂಡಾ ತಮಗೆ, ತಮ್ಮ ಜಾನುವಾರುಗಳಿಗೆ ಹನಿ ನೀರೂ ಸಿಗುತ್ತಿಲ್ಲವೆಂದು ತತ್ವಾರ ಪಡುತ್ತಾರೆ.
ಮೂರು ಜಿಲ್ಲೆಗಳಲ್ಲಿನ ಜನರ ನೋವು
'ಭೀಮಾ' ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಜೀವನದಿ. ಈ ಜಿಲ್ಲೆಗಳ ನಗರ, ಪಟ್ಟಣಗಳು, ಹಳ್ಳಿಗಳ ಜನ, ಜಾನು ವಾರುಗಳ ಕುಡಿಯುವ ನೀರು ಮತ್ತು ನೀರಾವರಿಗೆ ಆಶ್ರಯವಾಗಿರುವ ಭೀಮಾ ನಮ್ಮನ್ನಾಳುವವರ ಅಲಕ್ಷತನಕ್ಕೆ ತುತ್ತಾಗಿದೆ. ಭೀಮರಥಿ ಮಳೆಗಾಲದಲ್ಲಿ ಉಕ್ಕಿ ಹರಿದು, ಪ್ರವಾಹದಿಂದ ನಷ್ಟ ಉಂಟಾದರೆ, ಬೇಸಿಗೆಯಲ್ಲಿ ಭೀಮಾ ತೀರದ ಜನರಿಗೆ ಕುಡಿಯುವ ನೀರಿಗೂ ಗತಿಯಿಲ್ಲದಂತೆ ಬತ್ತಿ ಹೋಗುತ್ತದೆ. 3 ಜಿಲ್ಲೆಗಳ 7 ತಾಲೂ ಕುಗಳ 164 ಗ್ರಾಮಗಳು ಮತ್ತು ಕಲಬುರಗಿ, ಯಾದಗಿರಿ ನಗರಗಳೂ ಕೂಡ ಕುಡಿಯುವ ನೀರಿಗೆ ಭೀಮಾ ನೀರನ್ನೇ ಅವಲಂಬಿಸಿವೆ. ಪ್ರತಿ ವರ್ಷ ಮಳೆಗಾಲ ದಲ್ಲಿ ನದಿ ಮೇಲಿನ ಭಾಗದ ಮಹಾರಾಷ್ಟ್ರದಿಂದ ನೀರು ಹರಿದು ನೆರೆ, ಪ್ರವಾಹದಲ್ಲಿ ಜನ, ಜಾನುವಾರು ಕೊಚ್ಚಿಹೋದರೆ, ಬೇಸಿಗೆಯಲ್ಲಿ ಪರಿತಪಿಸುವಂತಾಗುತ್ತಿದೆ. ನೀರಿನ ಹಂಚಿಕೆ ವಿಚಾರದಲ್ಲಿರುವ ಅಂತರ್‌ರಾಜ್ಯ ವಿವಾದ, ಸರ್ಕಾರಗಳ ಉಪೇಕ್ಷೆ ನೀತಿಗಳೇ ಭೀಮಾ ತೀರದಲ್ಲಿ ನಿರಂತರ ಕಣ್ಣೀರ ಕೋಡಿ ಹರಿಯುಸಸವಂತಾಗಿದೆ ಎನ್ನಬಹುದು. ಕೃಷ್ಣಾ ಜಲಾನಯನ ಪ್ರದೇಶಕ್ಕೆ ಒಳಪಡುವ, ಕೃಷ್ಣಯ ಮುಖ್ಯ ಉಪನದಿ ಭೀಮಾ ನೀರು ಬಳಕೆಯಲ್ಲಿ ನಮ್ಮನ್ನಾಳುವವರೆಲ್ಲರ ಉಪೇಕ್ಷೆಗೆ ಸಾಕ್ಷಿಯಾಗಿ ನಿಂತಿದೆ.
ಮಳೆಗಾಲದಲ್ಲಿ | ಬಚಾವತ್ ಆಯೋಗ ಕರುಣಿಸಿದ 16 ಟಿಎಂಸಿ
ಪ್ರವಾಹ, ಬೇಸಿಗೆಯಲ್ಲಿ ಸಂಪೂರ್ಣ ಬತ್ತಿ ಹೋಗುವ ಭೀಮಾ ನದಿ ನೀರು ಬಳಕೆಗೆ
ಸರ್ಕಾರ ಆಲಕ್ಷ್ಯ ನದಿ ಪಕ್ಕದಲ್ಲೇ ಇದ್ದರೂ ಹನಿ ನೀರಿಗೆ ತತ್ವಾರ
ಮಹಾರಾಷ್ಟ್ರದ ಪುಣೆ ಹತ್ತಿರ ಭೀಮಾಶಂಕರ ಕ್ಷೇತ್ರದಲ್ಲಿ ಜನಿಸಿ ಮಹಾರಾಷ್ಟ್ರ, ಕರ್ನಾಟಕದಲ್ಲಿ ಹರಿದು ಬರುವ ಭೀಮಾ ನದಿ ನೀರಲ್ಲಿ ಬಚಾವತ್ ಜಲ ಆಯೋಗದ ತೀರ್ಪಿನಂತೆ ನಮ್ಮ ರಾಜ್ಯವು 16 ಟಿಎಂಸಿ ನೀರು ಬಳಸಿಕೊಳ್ಳಬಹುದು.
ಬಚಾವತ್ ಆಯೋಗ ತೀರ್ಪು ನೀಡಿ ಮೂರು ದಶಕಗಳೇ ಕಳೆದಿದರೂ ಭೀಮೆಯಲ್ಲಿ ನಮ್ಮ ಪಾಲಿನ ನೀರನ್ನು ಬಳಸುವಲ್ಲಿಯೂ ಸರ್ಕಾರಗಳು ಮುಗ್ಗಿಸಿದ್ದರಿಂದಲೇ ಈ ಭಾಗದಲ್ಲಿ ನದಿಗಳಿದ್ದರೂ ರೈತರ, ಜನರ ಕಣ್ಣೀರು ಬತ್ತುತ್ತಿಲ್ಲ.
ಹಿಡಿ ನೀರನ್ನೂ ಹಿಡಿದಿಡುತ್ತಿಲ್ಲ!
ಸನ್ನತಿ, ಸೊನ್ನ ಜಲಾಶಯಗಳನ್ನು ನಿರ್ಮಿಸಿದರೂ ಸಂಗ್ರಹ ಅಷ್ಟಕ್ಕಷ್ಟೆ. ಕಲಬುರಗಿ ಮತ್ತು ವಿಜಯ ಪುರ ರೈತರ ಹೋರಾಟದ ಫಲವಾಗಿ ಅಫಜಲ ಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ 3.16 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ. ಚಿತ್ತಾಪುರ ತಾಲೂಕಿನ ಸನ್ನತಿ ಬಳಿ 2.84 ಟಿಎಂಸಿ ಸಾಮ ರ್ಥದ ಬ್ಯಾರೇಜ್, ಕೃಷ್ಣಾ ಭಾಗ್ಯ ಜಲ ನಿಗಮ ದಿಂದೆ ಘತ್ತರಗಾ, ಕಲ್ಲೂರ-ಚಿನ್ನಮಳ್ಳಿ, ದೇವಲ ಗಾಣಗಾಪುರ, ಯಾದಗಿರಿ ಮತ್ತು ಜೋಳದಡಗಿ ಸೇರಿದಂತೆ ಬಾಂದಾರು ನಿರ್ಮಿಸಿ ನೀರು ನಿಲ್ಲು ವಂತೆ ಮಾಡಲಾಗಿದೆ. ಪೂರ್ಣ ಪಾಲಿನ ಬಳಕೆ
ಇನ್ನೂ ಆಗಿಲ್ಲ ಎಂಬುದೇ ನಮ್ಮ ದೌರ್ಭಾಗ್ಯ.
ನಮ್ಮ ನಿರ್ಲಕ್ಷ್ಯಕ್ಕೆ ಮಹಾ ಪ್ರವಾಹ ಶೇ.25ರಷ್ಟು
ಬೇಸಿಗೆಯಲ್ಲಿ ಭೀಮಾ ನದಿಗೆ ನಿರಂತರ ನೀರು ಹರಿಸ ಬೇಕೆಂದು ರೈತರೆಲ್ಲರೂ ಸುಪ್ರೀಂ ಕೋರ್ಟ್ ಕದ ತಟ್ಟಿದಾಗ ನ್ಯಾಯಮೂರ್ತಿ ಬ್ರಿಜೇಶ ಅವರದ್ದ ಪೀಠ ಮಹಾರಾಷ್ಟ್ರಕ್ಕೆ ತಾಕೀತು ಮಾಡಿತ್ತು. ಆಗ ಕೆಲ ವರ್ಷ ನೀರು ಬಿಟ್ಟಂತೆ ಮಾಡಿದ ಮಹಾರಾಷ್ಟ್ರಈಗ ಬೇಸಿಗೆಯಲ್ಲಿ ನೀರು ಬಿಡೋ ದನ್ನೇ ನಿಲ್ಲಿಸಿದೆ, ಮಳೆಗಾಲದಲ್ಲಿ ಭಾರಿ ಮಳೆಯಾದಾಗ ಮಾತ್ರ ಹೆಚ್ಚಿನ ನೀರು ರಾಜ್ಯದ ನದಿ ಪಾತ್ರಕ್ಕೆ ಹರಿಸಿ ಪ್ರವಾಹ- ನೆರೆಗೆ ಕಾರಣವಾಗುತ್ತಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ಚಕಾರ ಎತ್ತದಿರೋದು ದುರದೃಷ್ಟದ ಸಂಗತಿ.
ನಮ್ಮ 'ಮಹಾ' ದೌರ್ಬಲ್ಯ
ಭೀಮಾ ನದಿಯ ಜಲಾನಯನ ಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರವು 22 ಅಣೆಕಟ್ಟುಗಳನ್ನು ನಿರ್ಮಿಸಿಕೊಂಡು ನೀರು ಹಿಡಿದಿಟ್ಟು ಕೊಳ್ಳುತ್ತದೆ. ಭಾರಿ ಮಳೆಯಾದಾಗ ಇವೆಲ್ಲ ಜಲಾ ಶಯಗಳಿಂದ ನೀರನ್ನು ಏಕಕಾಲಕ್ಕ ಹರಿ ಬಿಡುತ್ತದೆ. ಅದರಿಂದ ಹೆಚ್ಚಿನ ಕೆಟ್ಟ ಪರಿಣಾಮಕ್ಕೆ ತುತ್ತಾಗೋದು ಭೀಮಾ ತೀರದ ಕರ್ನಾಟಕದ ಜನರು. ಬೇಸಿಗೆಯಲ್ಲಿ ಹನಿ ನೀರು ಬಿಡದಂತೆ ಹಿಡಿ ದಿಟ್ಟು ಬಳಸುವ ಮಹಾರಾಷ್ಟ್ರ ಮಳೆಗಾಲದಲ್ಲಿ ಹೇಳದೆ ಕೇಳದೆ ನೀರು ಬಿಡುತ್ತ ಕನ್ನಡಿಗರ ಕಣ್ಣೀರಿಗೆ ಕಾರಣ ಆಗುತ್ತಿದ್ದರೂ ರಾಜ್ಯ ಸರ್ಕಾರ ಇದನ್ನು ಪ್ರಶ್ನಿಸುವ ಗಟ್ಟಿತನ ತೋರುತ್ತಿಲ್ಲ ಯಾಕೆ ಎಂಬುದೇ ಭೀಮಾ ತೀರದವರ ಪ್ರಶ್ನೆಯಾಗಿದೆ.
ನೀರು ಬಳಸಿಲ್ಲ!
ಭೀಮಾ ನದಿಯ ಒಟ್ಟು ಉದ್ದ 861 ಕಿ.ಮೀ., ಈ ಪೈಕಿ ಕರ್ನಾಟಕದಲ್ಲಿ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ 300 ಕಿ.ಮೀ. ಹರಿದು ಯಾದಗಿರಿ ಸಮೀಪ ಕೃಷ್ಣಾ ನದಿ ಸೇರುತ್ತದೆ. ಭೀಮಾ ನದಿ ಶೇ.70 ಭಾಗ ಮಹಾರಾಷ್ಟ್ರದಲ್ಲೇ ಹರಿಯುತ್ತದೆ. ಇನ್ನುಳಿದಂತೆ ಶೇ.30ರಷ್ಟು ಮಾತ್ರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಹರಿಯುತ್ತದೆ. ಭೀಮಾ ನದಿಯ ದಡದಲ್ಲಿರುವ ಕರ್ನಾಟಕದ ಕಲಬುರಗಿ, ಯಾದಗಿರಿ, ವಿಜಯಪುರ ಮೂರು ಜಿಲ್ಲೆಗಳ 165 ಗ್ರಾಮಗಳ ಮೂಲಕ ಹರಿಯುತ್ತದೆ. ಮೂರೂ ಜಿಲ್ಲೆಗಳ ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳೂ ಸೇರಿದಂತೆ ಸುಮಾರು 1 ಕೋಟಿ ಜನವಸತಿ, ಭೀಮಾ ನದಿಯ ನೀರನ್ನೇ ಅವಲಂಬಿಸಿವೆ. ಭೀಮಾನದಿ ತಮ್ಮದೆಂದೇ ಹೇಳುವಷ್ಟು ಮಹಾರಾಷ್ಟ್ರ ಈ ನದಿ ನೀರಿನ ಮೇಲೆ ಅಧಿಪತ್ಯ ಸಾರುತ್ತಿದ್ದರೂ ಇದನ್ನು ಪ್ರಶ್ನಿಸುವ ಮೂಲಕ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಭೀಮಾ ತೀರದ ನಿವಾಸಿಗಳಿಗೆ ನ್ಯಾಯ ಕೊಡಿಸುವ ಕೆಲಸ ನೆನೆಗುದಿಗೆ ಬಿದ್ದಿದೆ.