ಸರ್ಕಾರದ ಒಳಮೀಸಲಾತಿ ನೀತಿ ಖಂಡಿಸಿ ಪ್ರತಿಭಟನೆರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಒಳಮೀಸಲಾತಿ ಸೂತ್ರವನ್ನು ಖಂಡಿಸಿ ಲಂಬಾಣಿ, ಕೊರಮ, ಕೊರಚ ಹಾಗೂ ಭೋವಿ ಸಮಾಜ ನೇತೃತ್ವದಲ್ಲಿ ನಗರದಲ್ಲಿ ಸೆ. 8ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ್, ಮಾಜಿ ಸಚಿವ ಬಾಬೂರಾವ ಚವ್ಹಾಣ್, ಸಮಾಜದ ಮುಖಂಡರಾದ ರಾಮಚಂದ್ರ ಜಾದವ್, ಪ್ರೇಮಸಿಂಗ್ ರಾಠೋಡ, ಚಂದು ಜಾಧವ್, ಅನೀಲ ಜಾಧವ ಹೇಳಿದ್ದಾರೆ.