Music evening on Feb. 6th
- ಭಾರತರತ್ನ ಲತಾ ಮಂಗೇಶ್ಕರ್ ಸ್ಮರಣೋತ್ಸವಕನ್ನಡಪ್ರಭ ವಾರ್ತೆ ಬೀದರ್ಪ್ರಖ್ಯಾತ ಹಿನ್ನೆಲೆ ಗಾಯಕಿ, ಗಾನ ಕೋಗಿಲೆ, ಭಾರತ ರತ್ನ ದಿ.ಲತಾ ಮಂಗೇಶ್ಕರ್ ಅವರ 4ನೇ ಸ್ಮರಣೋತ್ಸವ ನಿಮಿತ್ತ ಫೆ.6ರಂದು (ಶುಕ್ರವಾರ) ಸಂಜೆ 5ಗಂಟೆಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ‘ಏಕ್ ಶ್ಯಾಮ್ ಲತಾಕೆ ನಾಮ್’ ಸಂಗೀತ ಸಂಜೆ ಆಯೋಜಿಸಲಾಗಿದೆ.
ಲತಾ ಮಂಗೇಶ್ಕರ್ ಸ್ಮರಣೆಯೊಂದಿಗೆ ಅವರಿಗೆ ಸಂಗೀತ ನಮನ ಸಲ್ಲಿಸಲು ಬೀದರ್ ಸಂಗೀತ ಕಲಾ ಮಂಡಲ ಕಾರ್ಯಕ್ರಮ ಆಯೋಜಿಸಿದೆ. ಖ್ಯಾತ ಗಾಯಕರಾದ ರೇಖಾ ಅಪ್ಪಾರಾವ್ ಸೌದಿ, ಶಿವಾನಿ ಶಿವದಾಸ ಸ್ವಾಮಿ, ರಶ್ಮಿ ಶರ್ಮಾ, ಅಂಜಲಿ ಮಾಲೆ, ಶಿವದಾಸ ಸ್ವಾಮಿ, ಆಬೀದ್ ಅಲಿ ಖಾನ್, ಡಾ.ವಿ.ವಿ.ನಾಗರಾಜ್ ಅವರು ಸಂಗೀತದ ಸುಧೆ ಹರಿಸಲಿದ್ದಾರೆ ಎಂದು ಸಂಗೀತ ಕಲಾ ಮಂಡಲ ಅಧ್ಯಕ್ಷ ರಾಜೇಂದ್ರಸಿಂಗ್ ಪವಾರ್ ತಿಳಿಸಿದ್ದಾರೆ.ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಉದ್ಘಾಟಿಸುವರು. ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್ ಅಧ್ಯಕ್ಷತೆ ವಹಿಸುವರು. ಹಿರಿಯ ಚರ್ಮರೋಗ ತಜ್ಞ ಡಾ.ವಿಜಯಕುಮಾರ ಕೋಟೆ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ನಿವೃತ್ತ ಆರ್‌ಟಿಒ ಕೆ.ಟಿ.ವಿಶ್ವನಾಥ, ಬೆಳಗು ಟ್ರಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ ಭಾಗವಹಿಸುವರು. ಕಲಾಪ್ರೇಮಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಾನಲಹರಿ ಆಲಿಸಬೇಕೆಂದು ಬೀದರ್ ಸಂಗೀತ ಕಲಾ ಮಂಡಲ ಕೋರಿದೆ.
--ಚಿತ್ರ 5ಬಿಡಿಆರ್52:
ಲತಾ ಮಂಗೇಶ್ಕರ್--