ಕಲಬುರಗಿ: ಸೀನಿಯರ್‌ ಸಿವಿಲ್ ನ್ಯಾಯಾಧೀಶ ವಿಶ್ವನಾಥ ಮುಗುತಿ ಹೃದಯಾಘಾತಕ್ಕೆ ಬಲಿ

Published : Jun 17, 2025, 10:25 AM IST
heart attack

ಸಾರಾಂಶ

 ಸೀನಿಯರ್‌ ಸಿವಿಲ್ ನ್ಯಾಯಾಧೀಶರಾಗಿದ್ದ ವಿಶ್ವನಾಥ ಮುಗುತಿ (44) ಸೋಮವಾರ ಬೆಳಗ್ಗೆ ನ್ಯಾಯಾಲಯದ ಕಲಾಪಗಳಿಗಾಗಿ ಹೋಗುವ ತಯ್ಯಾರಿಯಲ್ಲಿದ್ದಾಗ ಹೃದಯಾಘಾತಕ್ಕೆ ಬಲಿ 

 ಕಲಬುರಗಿ: ಇಲ್ಲಿನ 3ನೇ ಹೆಚ್ಚುವರಿ ಸೀನಿಯರ್‌ ಸಿವಿಲ್ ನ್ಯಾಯಾಧೀಶರಾಗಿದ್ದ ವಿಶ್ವನಾಥ ಮುಗುತಿ (44) ಸೋಮವಾರ ಬೆಳಗ್ಗೆ ನ್ಯಾಯಾಲಯದ ಕಲಾಪಗಳಿಗಾಗಿ ಹೋಗುವ ತಯ್ಯಾರಿಯಲ್ಲಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. 

ಬೆಳಗಾವಿ ಜಿಲ್ಲೆಯ ರಬಕವಿ, ಬನಹಟ್ಟಿ ಮೂಲದ ನ್ಯಾ.ವಿಶ್ವನಾಥ ಅವರು 15 ದಿನಗಳ ಹಿಂದೆ ಕಲಬುರಗಿಗೆ ವರ್ಗವಾಗಿ ಬಂದಿದ್ದರು. ಈ ಮುಂಚೆ ದಾವಣಗೆರೆ ಜಿಲ್ಲಾ ನ್ಯಾಯಾಲದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು.

ನಗರದ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣ ಪಕ್ಕದಲ್ಲಿರುವ ನ್ಯಾಯಾಧೀಶರ ವಸತಿ ಗೃಹದಲ್ಲಿ ಇವರು ಪತ್ನಿ, ಮಗುವಿನೊಂದಿಗೆ ವಾಸವಾಗಿದ್ದರು. ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೃತರು ಪತ್ನಿ, 4 ವರ್ಷದ ಪುತ್ರಿಯನ್ನು ಅಗಲಿದ್ದಾರೆ.

ಪುಣೆ ಸೇತುವೆ ದುರಂತದಲ್ಲಿ ಬೆಳಗಾವಿ ಯುವಕ ಸಾವು

 ಮಹಾರಾಷ್ಟ್ರದ ಪುಣೆಯ ಇಂದ್ರಾಣಿ ನದಿಯ ಮೇಲ್ಸೆತುವೆ ಕುಸಿತದ ದುರಂತದಲ್ಲಿ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಟೆಕ್ಕಿವೊಬ್ಬರು ಮೃತಪಟ್ಟಿದ್ದಾರೆ.

ರಾಯಭಾಗ ತಾಲೂಕಿನ ನಸಲಾಪುರ ಗ್ರಾಮದ ಚೇತನ ಚಾವರೇ (22) ಮೃತ ಯುವಕ. ದುರ್ಘಟನೆಯಲ್ಲಿ 25ಕ್ಕೂ ಅಧಿಕ ಜನರು ಕೊಚ್ಚಿ ಹೋಗಿರುವ ಮಾಹಿತಿ ಇದೆ. ಈಗಾಗಲೇ ಚೇತನ ಸೇರಿ 6 ಶವಗಳ ಪತ್ತೆ ಹಚ್ಚಲಾಗಿದ್ದು, ಕುಟುಂಬಸ್ಥರಿಗೆ ಮೃತದೇಹಗಳನ್ನು ಮಹಾರಾಷ್ಟ್ರ ಸರ್ಕಾರ ಹಸ್ತಾಂತರ ಮಾಡಿದೆ. ನಸಲಾಪುರ ಗ್ರಾಮದಲ್ಲಿ ಚೇತನ ಅಂತ್ಯಕ್ರಿಯೆ ನೆರವೇರಿತು.

ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ ಚಾವರೇ ಸ್ನೇಹಿತರ ಜೊತೆಗೆ ಭಾನುವಾರ ಬೆಳಗ್ಗೆ ಇಂದ್ರಾಣಿ ನದಿ ವೀಕ್ಷಣೆಗೆ ತೆರಳಿದ್ದ. ಈ ವೇಳೆ ಮೇಲ್ಸೆತುವೆ ಕುಸಿದಿತ್ತು. ದುರಂತದಲ್ಲಿ ಕೊಚ್ಚಿಕೊಂಡು ಹೋಗಿದ್ದ ಚೇತನ ಶವವಾಗಿ ಪತ್ತೆಯಾಗಿದ್ದಾನೆ.

PREV
Read more Articles on

Recommended Stories

ಅತಿವೃಷ್ಟಿ: ರೈತರ ಸಂಕಷ್ಟಕ್ಕೆ ಮರುಗಿದ ಶಾಸಕ ಅಲ್ಲಂಪ್ರಭು ಪಾಟೀಲ್‌
ಬೆಳೆಹಾನಿ: ಪರಿಹಾರಕ್ಕೆ ಶಾಸಕ ತುನ್ನೂರು ಮನವಿ