ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಂಚಾಳ ಪ್ರಕರಣ

Published : Jan 02, 2025, 11:56 AM IST
death

ಸಾರಾಂಶ

 ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆತ ಗುತ್ತಿಗೆದಾರನಾಗಿದ್ದ, ಟೆಂಡರ್‌ ಹಾಕುವಲ್ಲಿ ಹಣದ ವಹಿವಾಟು ನಡೆದಿತ್ತು. ಮೋಸ ಹೋಗಿದ್ದಾನೆ ಎಂಬೆಲ್ಲಾ ಆರೋಪಗಳು ಇದುವರೆಗೂ ಕೇಳಿ ಬಂದಿದ್ದವು. ಇದೀಗ ಸಚಿನ್‌ ಗುತ್ತಿಗೆದಾರ ಹೌದೋ, ಅಲ್ಲವೋ ಎಂಬ ಶಂಕೆ ಉದ್ಭವವಾಗಿದೆ.

ಕಲಬುರಗಿ : ಬೀದರ್‌ನ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆತ ಗುತ್ತಿಗೆದಾರನಾಗಿದ್ದ, ಟೆಂಡರ್‌ ಹಾಕುವಲ್ಲಿ ಹಣದ ವಹಿವಾಟು ನಡೆದಿತ್ತು. ಮೋಸ ಹೋಗಿದ್ದಾನೆ ಎಂಬೆಲ್ಲಾ ಆರೋಪಗಳು ಇದುವರೆಗೂ ಕೇಳಿ ಬಂದಿದ್ದವು. ಇದೀಗ ಸಚಿನ್‌ ಗುತ್ತಿಗೆದಾರ ಹೌದೋ, ಅಲ್ಲವೋ ಎಂಬ ಶಂಕೆ ಉದ್ಭವವಾಗಿದೆ.

ಈತ ಗುತ್ತಿಗೆದಾರನೇ ಅಲ್ಲವೆಂಬ ಮಾಹಿತಿಯನ್ನು ಗುತ್ತಿಗೆದಾರರ ಸಂಘದ ಬೀದರ್‌ ಘಟಕ ರಾಜ್ಯ ಘಟಕಕ್ಕೆ ಸಲ್ಲಿಸಿರುವ ವರದಿಯಲ್ಲಿ ನಮೂದಿಸಿದೆ ಎಂಬ ಸಂಗತಿ ಗೊತ್ತಾಗಿದೆ. ಹಾಗಾದ್ರೆ ಈ ಸಚಿನ್ ಪಂಚಾಳ ವೃತ್ತಿ ಏನಾಗಿತ್ತು? ಏತಕ್ಕಾಗಿ ಹಣ ಅಪಾರ ಪಡೆದುಕೊಂಡ ಅಥವಾ ಯಾಕೆ ಮಾಜಿ ಪಾಲಿಕೆ ಸದಸ್ಯ, ಸಚಿವ ಖರ್ಗೆ ಆಪ್ತ ರಾಜು ಕಪನೂರಗೆ ಹಣ ಕೊಟ್ಟ ಎನ್ನುವುದೇ ಕುತೂಹಲ ಮೂಡಿಸಿದೆ. ಈತ ಗುತ್ತಿಗೆದಾರನೇ ಅಲ್ಲದಿದ್ರೆ ಗುತ್ತಿಗೆದಾರರ ಸಂಘದಿಂದ ಹೋರಾಟ, ಬೆಂಬಲ ಸಿಗುವ ಸಾಧ್ಯತೆಯೂ ಕ್ಷೀಣ ಎನ್ನಲಾಗುತ್ತಿದೆ.

ಇದೇ ಹಿನ್ನೆಲೆಯಲ್ಲಿ ಮುಂದಿನ ತನ್ನ ಕಾರ್ಯವೈಖರಿ ಚರ್ಚಿಸಲು ಗುತ್ತಿಗೆದಾರರ ಸಂಘ ಸಭೆ ಸೇರಿ ನಿರ್ಣಯಿಸಲಿದೆ ಎಂದು ಸಂಘದ ಅದ್ಯಕ್ಷ ಜಗನ್ನಾಥ ಶೇಗಜಿ ಹೇಳಿದ್ದಾರೆ. ರಾಜ್ಯ ಕಂಟ್ರಾಕ್ಟರ್ಸ ಅಸೋಸಿಯೇಷನ್ ಸಭೆ ಕರೆದಿರುವ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಶೇಗಜಿ ಘಟಟನೆ ವರದಿಯಾಗುತ್ತಿದ್ದಂತೆಯೇ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ಗುತ್ತಿಗೆದಾರರ ಸಂಘದ ಬೀದರ್‌ ಘಟಕಕ್ಕೆ ಸೂಚನೆ ನೀಡಿದ್ದರು.

ಈ ವರದಿ ಆಧರಿಸಿ ಮುಂದಿನ ಹೋರಾಟ ರೂಪಿಸಲು ಗುತ್ತಿಗೆದಾರರ ಸಂಘ ಉದ್ದೇಶಿಸಿತ್ತು. ಇದಲ್ಲದೆ ಗುತ್ತಿಗೆದಾರರ ಮೂರು ವರ್ಷಗಳ ಬಿಲ್ ಬಾಕಿ ಇದ್ದು ಇದರ ಬಗ್ಗೆಯೂ ಸಂಘ ಸರಕಾರದ ಗಮನ ಸೆಳೆಯಲು ಮುಂದಾಗಿದೆ.

PREV
Stay updated with the latest news from Kalaburagi district (ಕಲಬುರಗಿ ಸುದ್ದಿ) — covering agriculture and tur-dal production, local governance, industrial developments, district heritage & tourism, environment, education, community events and social issues across the district on Kannada Prabha.

Recommended Stories

ಕಡಲೆ ಬೆಳೆ ಬಂಪರ್ ಫಸಲು ನಿರೀಕ್ಷೆಯಲ್ಲಿ ಅನ್ನದಾತರು
ಶಾಲಾ, ಆಸ್ಪತ್ರೆ, ವಸತಿ ನಿಲಯ, ಅಂಗನವಾಡಿಗೆ ಆಹಾರ ಆಯೋಗದಿಂದ ಪರಿಶೀಲನೆ: ಡಾ.ಹೆಚ್.ಕೃಷ್ಣ ಮಾಹಿತಿ