ಚಿ. ದೊಡ್ಡಪ್ಪ ಅಪ್ಪ ಸ್ಕಾಲರಶಿಪ್: ಫೆ.2ರಂದು ರಾಜ್ಯ, ಫೆ.ರಂದು ಸಿಬಿಎಸ್ಇ ಪಠ್ಯ ಪರೀಕ್ಷೆಕನ್ನಡಪ್ರಭ ವಾರ್ತೆ ಕಲಬುರಗಿ
ಮಾಂಟೆಸ್ಸೋಯಿರಿಂದ ಆರಂಭವಾಗಿ ಈಗ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ದೇಶದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸ್ಕಾಲರ್‌ಶಿಪ್ ರೂಪದಲ್ಲಿ ಮೆಗಾ ಆಫರ್ ಕೊಡುವುದರೊಂದಿಗೆ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ಘೋಷಿಸಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದಶಿ ಬಸವರಾಜ ದೇಶಮುಖ, ಸಂಸ್ಥೆಯ ೯ನೇ ಮಹಾದಾಸೋಹ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಸ್ಕಾಲರ್‌ಶಿಪ್ ಹೆಸರಿನಲ್ಲಿ ೨.೫ ಕೋಟಿ ರು.ಗಳ ಸ್ಕಾಲರ್‌ಶಿಪ್ ನೀಡಲು ಮುಂದಾಗಿದೆ. ಇದಕ್ಕಾಗಿ ಫೆಬ್ರವರಿ ತಿಂಗಳಲ್ಲೇ 2 ಪ್ರತ್ಯೇಕ ಪರೀಕ್ಷೆಗಳನ್ನು (ರಾಜ್ಯ ಪಠ್ಯ- ಫೆ.2ರಂದು, ಸಿಬಿಎಸ್ಇ ಪಠ್ಯ- ಫೆ.4ರಂದು ಪರೀಕ್ಷೆ) ನಡೆಸಲಾಗುತ್ತಿದೆ, ಮಕ್ಕಳು ಇದರ ಲಾಭ ಪಡೆಯಲಿ ಎಂದರು.ಸ್ಕಾಲರ್‌ಶಿಪ್ ಯೋಜನೆ ಸುತ್ತಮುತ್ತ:
ಪ್ರವೇಶ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗಳ ಆಧಾರದನ್ವಯ ಮೇಲೆ ತಿಳಿಸಿದ ಗರಿಷ್ಠ ೯೦ ರ‍್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್‌ನ್ನು ಪಡೆಯುತ್ತಾರೆ. ಇದೇರೀತಿ ಪಿಯುಸಿ ದ್ವೀತಿಯ ವರ್ಷದಲ್ಲಿಯೂ ಸಹ ಇಡಿ ಪಿಯುಸಿ ಪ್ರಥಮ ವರ್ಷದ ಎಲ್ಲ ಪರೀಕ್ಷೆಗಳ ಅಂಕಗಳ ಆಧಾರದನ್ವಯ ಅಗ್ರ ೯೦ ರ‍್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುವುದು.
ಈ ಪರೀಕ್ಷೆಯಲ್ಲಿ ಟಾಪ್ ಬರುವ 30 ಮಕ್ಕಳಿಗೆ ಶೇ.50 ಹಾಸ್ಟೆಲ್, ಕಾಲೇಜಿನ ಶುಲ್ಕದಲ್ಲಿ ವಿನಾಯ್ತಿ ಇರುತ್ತದೆ. ನಂತರದ ಟಾಪ್ 25 ಮಕ್ಕಳಿಗೆ ಕಾಲೇಜು, ಹಾಸ್ಟೆಲ್‌ನ ಶೇ.25 ಶುಲ್ಕ ವಿನಾಯ್ತಿ ಇರಲಿದೆ. 2 ಹಂತಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಿ 600 ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ.
ಎಸ್ಬಿಆರ್ ಎಂದರೆ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಶಿಕ್ಷಣವೆಂದರೆ ಎಸ್‌ಬಿಆರ್ ಆಗಿದೆ. ಹೀಗಾಗಿ ಇದೊಂದು ರಾಜ್ಯದಲ್ಲಿ ಎಸ್‌ಬಿಆರ್ ಹೆಸರಿನ ಬ್ಯಾಂಡ್ ಬ್ಯಾಂಡ್ ಪರಿವರ್ತನೆಯಾಗಿದೆ. 60 ವರ್ಷಗಳ ಹಿಂದೆ ಶಾಲೆ ಆರಂಭಿಸಿರುವ ಡಾ. ಅಪ್ಪಾಜಿ ಅವರ ದೂರದೃಷ್ಟಿ ಇದಕ್ಕೆ ಕಾರಣವೆಂದು ಡಾಕ್ಷಾಯಿಣಿ ಅಪ್ಪಾ ಹೇಳಿದರು. ವಿದ್ಯಾಭಂಡಾರಿ ಡಾ.ಶರಣಬಸವಪ್ಪ ಅಪ್ಪ ಅವರು ಕ್ರೀಯಾಶೀಲ ಕಾರ್ಯಚಟುವಟಿಕೆಗಳೊಂದಿಗೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶಿಕ್ಷಣ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಮುಟ್ಟಿಸುವ ಮೂಲಕ ದೇಶವೆ ಕಲಬುರಗಿ ಕಡೆ ತಿರುಗಿ ನೋಡುವಂತೆ ಮಾಡಿದ್ದು ಕೂಡಾ ಇತಿಹಾಸವೆಂದು ಬಸವರಾಜ ದೇಶಮುಖ ಹೇಳಿದರು.
ಡಾ.ಅಪ್ಪ ಅವರೊಂದಿಗೆ ಪ್ರಾರ್ಚಾರಾದ ದೇವರಕಲ್ಲ ಮತ್ತು ಶ್ರೀಶೈಲ ಹೊಗಾಡೆ, ಚಂದ್ರಕಾoತ ಪಾಟೀಲ್ ಹೀಗೆ ಅಪಾರ ಸಿಬ್ಬಂದಿ ಬಳಗದ ಸಹಕಾರದೊಂದಿಗೆ ಇಂದು ಆಲದ ಮರವಾಗಿ ಈ ಸಂಸ್ಥೆ ಬೆಳೆದು ನಿಂತಿದೆ. ಜಗತ್ತಿನ ಹೊರ ದೇಶಗಳಲ್ಲಿ ಇರುವ ಸುಮಾರು ೫೦ ಸಾವಿರ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಓದಿದವರಾಗಿದ್ದಾರೆ ಎಂದು ಡಾ.ದಾಕ್ಷಾಯಣಿ ಎಸ್. ಅಪ್ಪ ಅವರು ಹೆಮ್ಮೆಯಿಂದ ಹೇಳಿದರು.