ಕಲಬುರಗಿ: ಟ್ಯಾಂಕರ್‌ನಲ್ಲಿ ನೀರು ಪೂರೈಕೆ

KannadaprabhaNewsNetwork |  
Published : Oct 04, 2026, 01:15 AM IST
3ಕೆಡಿವಿಜಿ9-ದಾವಣಗೆರೆಯಲ್ಲಿ ಶ್ರೀ ಗಣೇಶನ ಶೋಭಾಯಾತ್ರೆ ವೇಳೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಕಲಬುರಗಿ ನಗರಕ್ಕೆ ನೀರು ಪೂರೈಸುವ ಭೀಮಾ ಹಾಗೂ ಬೆಣ್ಣೆತೊರಾ ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವದಿಂದ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ.

ಕಲಬುರಗಿ: ನಗರಕ್ಕೆ ನೀರು ಪೂರೈಸುವ ಭೀಮಾ ಹಾಗೂ ಬೆಣ್ಣೆತೊರಾ ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವದಿಂದ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಕೊಳವೆಬಾವಿ ಇಲ್ಲದ ಮತ್ತು ಬೋರ್‍ವೆಲ್‍ಗಳು ಬತ್ತಿರುವ ಪ್ರದೇಶಗಳಿಗೆ ಪಾಲಿಕೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ಪ್ರತ್ಯೇಕ ಮನೆಗಳಿಗೆ ಸಂಪಿಗೆ ಟ್ಯಾಂಕರ್ ಬಳಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ಪ್ರತ್ಯೇಕ ಮನೆಗಳಿಗೆ ಟ್ಯಾಂಕರ್ ನೀರು ಕಳುಹಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಸಾರ್ವಜನಿಕರ ಸಾಮೂಹಿಕ ಬಳಕೆಗೆ ಮಾತ್ರ ಟ್ಯಾಂಕರ್‌ಗಳನ್ನು ನೀಡಲಾಗುವುದು. ಅದರಿಂದ ನಾಗರಿಕರು ಅಗತ್ಯವಿರುವಷ್ಟು ನೀರನ್ನು ಮುಂಗಡವಾಗಿ ಸಂಗ್ರಹಿಸಿಟ್ಟುಕೊಂಡು ಮಿತವಾಗಿ ಬಳಸಬೇಕು. ನೀರಿನ ನಿರ್ವಹಣೆಯಲ್ಲಿ ಮಹಾನಗರ ಪಾಲಿಕೆ, ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಹಾಗೂ ಮೆ. ಎಲ್ & ಟಿ ಲಿಮಿಟೆಡ್ ಸಂಸ್ಥೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕಾಗಿ ಯೋ.ಅ.ಘ ಕುಸ್ಸೆಂಪ್, ಕೆಯುಐಡಿಎಫ್‍ಸಿ ಕಾರ್ಯಪಾಲಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗೇಶಪುರವನ್ನು ಮಾದರಿ ಗ್ರಾಮವನ್ನಾಗಿಸುವ ಸಂಕಲ್ಪ
ಶಿರಪುರ ಚೆಕ್‌ಡ್ಯಾಮ್‌ಗೆ ಬಾಗಿನ ಅರ್ಪಣೆ