ಕಲ್ಯಾಣ ಕರ್ನಾಟಕದ ಸುಧಾರಣೆಯಾಗದೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ

KannadaprabhaNewsNetwork |  
Published : Sep 20, 2025, 01:00 AM IST
25 | Kannada Prabha

ಸಾರಾಂಶ

ಧೈರ್ಯ, ಸಾಹಸಕ್ಕೆ ಹೆಸರಾದ ಕಲ್ಯಾಣ ಕರ್ನಾಟಕದ ಜನರ ಸಮಗ್ರ ಅಭಿವೃದ್ಧಿ ಆಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕಲಬುರ್ಗಿ ಕರ್ನಾಟಕದ ಆಡಳಿತ ಕೇಂದ್ರಗಳಲ್ಲಿ ಒಂದಾಗಿದ್ದರು ಇಂದಿಗೂ ಸಹ ಸಂಪೂರ್ಣವಾದ ಬೆಳವಣಿಗೆ ಕಾಣಲಿಲ್ಲ. ಕಲ್ಯಾಣ ಕರ್ನಾಟಕದ ಸುಧಾರಣೆಯಾಗದೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಶ್ರೀ ಛಾಯಾದೇವಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಅಂತೋಣಿ ಪೌಲ್‌ ರಾಜ್‌ಅಭಿಪ್ರಾಯಪಟ್ಟರು.

ನಗರದ ಶ್ರೀ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಲ್ಯಾಣ ಕರ್ನಾಟಕದ ಸುಧಾರಣೆ ಮೈಸೂರು: ಇಂದು ಕರ್ನಾಟಕದ ಐತಿಹಾಸಿಕ ದಿನಗಳಲ್ಲಿ ಒಂದಾದ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧೈರ್ಯ, ಸಾಹಸಕ್ಕೆ ಹೆಸರಾದ ಕಲ್ಯಾಣ ಕರ್ನಾಟಕದ ಜನರ ಸಮಗ್ರ ಅಭಿವೃದ್ಧಿ ಆಗಬೇಕು. ಇನ್ನು ಮುಂದಾದರೂ ಆಡಳಿತ ವ್ಯವಸ್ಥೆ ಕಲ್ಯಾಣ ಕರ್ನಾಟಕದ ವಾಸ್ತವ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು. ಮತ್ತೆ ಸಮ ಸಮಾಜದ ಕಲ್ಯಾಣ ಉದಯಸಲಿ ಎಂದು ಅವರು ಆಶಿಸಿದರು.

ಭಾರತ ದೇಶ ಸ್ವತಂತ್ರಗೊಂಡ ನಂತರದಲ್ಲಿಯೂ ಹಲವಾರು ಪ್ರಾಂತ್ಯ ದೇಶಿಯ ಸಂಸ್ಥಾನಗಳಿಂದ ಆಳ್ವಿಕೆಗೆ ಒಳಪಟ್ಟಿತ್ತು. ದೇಶಿಯ ಸಂಸ್ಥಾನಗಳ ವಿಲೀನೀಕರಣವು ಸರ್ದಾರ್ ವಲ್ಲಬಾಯ್ ಪಟೇಲ್ ಅವರ ನೇತೃತ್ವದಲ್ಲಿ ನಡೆಯಿತು. ಇದಾಗಿಯೂ ಸಂಪೂರ್ಣ ದೇಶದ ಏಕೀಕರಣ ಯಶಸ್ವಿಯಾಗಿರಲಿಲ್ಲ. ಈ ಹೈದರಾಬಾದ್ ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದಾಗಿ ಅವರು ಹೇಳಿದರು.

ನಿಜಾಮನ ನಿರಂತರ ದಬ್ಬಾಳಿಕೆ ದೌರ್ಜನ್ಯ ವಿರೋಧಿಸಿ ಅಲ್ಲಿನ ಪ್ರಾಂತೀಯ ಜನರು ಅವರ ವಿರುದ್ಧ ಹೋರಾಡಿದರು. ಆಪರೇಷನ್ ಪೋಲೋ ಕಾರ್ಯಾಚರಣೆ 1948ರ ಸೆ. ರಿಂದ 17 ರವರೆಗೆ ನಡೆಯಿತು.

ಈ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಂವಿಧಾನದ 371ಜೆ ವಿಶೇಷ ಸ್ಥಾನಮಾನ ಪಡೆದುಕೊಂಡು ಕರ್ನಾಟಕದೊಂದಿಗೆ ವಿಲೀನವಾಯಿತು. ಬಳಿಕ ಸಂಪೂರ್ಣ ವಿಮೋಚನೆಗೊಂಡು ಕಲ್ಯಾಣ ಕರ್ನಾಟಕವಾಗಿ ರೂಪಿಕೊಂಡಿತು. ಹೀಗೆ ಹೈದರಾಬಾದ್ ಕರ್ನಾಟಕವು ಸೆ. 17ರಲ್ಲಿ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣಗೊಂಡಿದ್ದಾಗಿ ಅವರು ತಿಳಿಸಿದರು.

ಈ ವೇಳೆ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ