ಕನ್ನಡ ಸಾಹಿತ್ಯ ಲೋಕಕ್ಕೆ ಕಲಬುರ್ಗಿಯವರ ಕೊಡುಗೆ ಅಪಾರ: ಡಾ. ವೀರಣ್ಣ

KannadaprabhaNewsNetwork |  
Published : Nov 04, 2026, 01:15 AM IST
ಕಾರ್ಯಕ್ರಮವನ್ನ ಡಾ. ವೀರಣ್ಣ ರಾಜೂರ ಉದ್ಘಾಟಿಸಿದರು. | Kannada Prabha

ಸಾರಾಂಶ

ಡಾ. ಎಂ.ಎಂ. ಕಲಬುರ್ಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಸಂಶೋಧನೆ, ಶಾಸನ ಅಧ್ಯಯನ, ವಚನ ಸಾಹಿತ್ಯ, ಹಾಗೂ ಕನ್ನಡ ಸಾಂಸ್ಕೃತಿಕ ಪರಂಪರೆಯ ಅಧ್ಯಯನದಲ್ಲಿ ಅವರು ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುಳಗುಂದ

ಡಾ. ಎಂ.ಎಂ. ಕಲಬುರ್ಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಸಂಶೋಧನೆ, ಶಾಸನ ಅಧ್ಯಯನ, ವಚನ ಸಾಹಿತ್ಯ, ಹಾಗೂ ಕನ್ನಡ ಸಾಂಸ್ಕೃತಿಕ ಪರಂಪರೆಯ ಅಧ್ಯಯನದಲ್ಲಿ ಅವರು ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅವರ ಸಂಶೋಧನಾ ದೃಷ್ಟಿಕೋನ ಮತ್ತು ವೈಚಾರಿಕ ನಿಲುವುಗಳು ಇಂದಿನ ಯುವ ಸಂಶೋಧಕರಿಗೆ ಮಾರ್ಗದರ್ಶಿಯಾಗಿವೆ ಎಂದು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ ತಿಳಿಸಿದರು.

ಪಟ್ಟಣದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ, ಐಕ್ಯೂಎಸಿ ಹಾಗೂ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡ ಸಹಯೋಗದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಎಂಬ ಸಂಶೋಧನಾ ಕೃತಿಯ ಕುರಿತು ಡಾ. ವೈ.ಎಂ. ಭಜಂತ್ರಿ ಮಾತನಾಡಿ, ಕವಿರಾಜಮಾರ್ಗವು ಕನ್ನಡ ಸಾಹಿತ್ಯದ ಪ್ರಾಚೀನತೆ, ಭಾಷಾ ವೈಶಿಷ್ಟ್ಯ, ಕಾವ್ಯ ಪರಂಪರೆ ಹಾಗೂ ಕನ್ನಡ ನಾಡು-ನುಡಿಯ ಸಾಂಸ್ಕೃತಿಕ ಅಸ್ಮಿತೆಯನ್ನು ಪರಿಚಯಿಸುವ ಮಹತ್ವದ ಕೃತಿಯಾಗಿದೆ. ಕವಿರಾಜಮಾರ್ಗದ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆ ಮತ್ತು ಸಾಹಿತ್ಯಿಕ ಚಿಂತನೆಗಳನ್ನು ಅರಿಯಬಹುದು ಎಂದರು.

ನಾಮವಿಜ್ಞಾನ ಎಂಬ ಕೃತಿಯ ಕುರಿತು ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ವ್ಯಕ್ತಿನಾಮಗಳು, ಸ್ಥಳನಾಮಗಳು ಹಾಗೂ ವಿವಿಧ ಹೆಸರುಗಳ ಹಿಂದಿರುವ ಐತಿಹಾಸಿಕ, ಭೌಗೋಳಿಕ, ಸಾಂಸ್ಕೃತಿಕ ಮತ್ತು ಭಾಷಿಕ ಹಿನ್ನೆಲೆಯನ್ನು ವಿಶ್ಲೇಷಿಸುವುದೇ ನಾಮವಿಜ್ಞಾನದ ಮಹತ್ವವಾಗಿದೆ. ಹೆಸರುಗಳು ಕೇವಲ ಗುರುತಿನ ಸಂಕೇತಗಳಲ್ಲ; ಅವು ಒಂದು ಪ್ರದೇಶದ ಇತಿಹಾಸ, ಜನಜೀವನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿ ಬಿಂಬಿಸುತ್ತವೆ ಎಂದು ತಿಳಿಸಿದರು.

ವಚನ ಸಾಹಿತ್ಯಕ್ಕೆ ಡಾ. ಎಂ.ಎಂ ಕಲಬುರ್ಗಿಯವರ ಕೊಡುಗೆ ವಿಷಯದ ಕುರಿತು ಶಕುಂತಲಾ ಸಿಂಧೂರ ಮಾತನಾಡಿದರು.

ಈ ವೇಖೆ ಶಾಸನ ತಜ್ಞೆ ಹನುಮಾಕ್ಷಿ ಗೋಗಿ, ನಾಗರಾಜ ದೇಶಪಾಂಡೆ, ಡಾ. ಎಸ್.ಸಿ. ಚವಡಿ, ಅಶೋಕ ಸೋನಗೋಜಿ, ಪ್ರಾ. ಡಾ. ರಮೇಶ ಕಲ್ಲನಗೌಡರ, ಸುಮನ್ ಚವಡಿ, ರಾಜೇಶ್ವರಿ ಬಡ್ನಿ ಸೇರಿ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಶಿವಪ್ಪ ಎಸ್. ಮುದಿಯಜ್ಜನವರ ಸ್ವಾಗತಿಸಿದರು. ಪಲ್ಲವಿ ಮುಶಪ್ಪನವರ ಹಾಗೂ ನೀಲಾ ನರೇಗಲ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌