ಕಲಿಕೆಯೊಂದಿಗೆ ಗಳಿಕೆಯಾಗಬೇಕಾದರೆ ಕೌಶಲ ಜ್ಞಾನ ಅಗತ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯಲು ಅಂಕಗಳು ಪ್ರಮುಖ ಮಾನದಂಡವಾಗಲಾರವು. ಜೀವನದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅಗತ್ಯವಾಗಿದೆ.
ಧಾರವಾಡ:
ಕಲಿಕೆಯೊಂದಿಗೆ ಗಳಿಕೆಯಾಗಬೇಕಾದರೆ ಕೌಶಲ ಜ್ಞಾನ ಅಗತ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯಲು ಅಂಕಗಳು ಪ್ರಮುಖ ಮಾನದಂಡವಾಗಲಾರವು. ಜೀವನದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅಗತ್ಯವಾಗಿದೆ ಎಂದು ಧಾರವಾಡದ ಜಿಟಿಟಿಸಿಯ ತರಬೇತುದಾರ ಪ್ರಶಾಂತ ಸುತಾರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಸಮೀಪದ ಶಿರೂರ ಗ್ರಾಮದ ಎಸ್.ಜಿ. ಬಾಳನಗೌಡ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಎಸ್ಎಸ್ಎಲ್ಸಿ ನಂತರ ಮುಂದೇನು? ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ನಿರುದ್ಯೋಗ ಸಮಸ್ಯೆಯಿಂದ ಅರ್ಹರಿಗೆ ಅರ್ಹ ಉದ್ಯೋಗ ಸಿಗುವುದಿಲ್ಲ. ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೆ ಬೆನ್ನು ಬೀಳದೇ ಅಲ್ಪಾವಧಿ ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದರೆ ನಿರುದ್ಯೋಗಿಗಳಾಗದೇ ಸ್ವಾವಲಂಬಿಯಾಗಿ ಜೀವನ ಸಾಗಿಸಬಹುದು. ಅಂಕಗಳ ಜತೆ ವಿದ್ಯಾರ್ಥಿಗಳಲ್ಲಿ ವಿಭಿನ್ನಕೌಶಲ್ಯವಿದ್ದರೆ ಮಾತ್ರ ಯಶಸ್ಸು ಸಾಧಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭೂ ದಾನಿ ಶಂಕರಗೌಡ ಬಾಳನಗೌಡ್ರ, ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ನಂತರ ಮುಂದೇನು? ಎಂಬ ಗೊಂದಲ ಸಹಜ. ಶಿಕ್ಷಕರು ಆ ದೆಸೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕರಾದ ಡಾ. ಭಾಗ್ಯಜ್ಯೋತಿ ಕೋಟಿಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಇಲ್ಲದಿದ್ದರೆ ಎಷ್ಟೇ ಓದಿದರೂ ವ್ಯರ್ಥ. ಕೌಶಲ್ಯವಿದ್ದವರಿಗೆ ಮಾತ್ರ ಹೆಚ್ಚು ಉದ್ಯೋಗಾವಕಾಶಗಳು ಲಭಿಸುತ್ತವೆ ಎಂದರು.ಕವಿವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಶ್ರೀದೇವಿ ಹೂಲಿಕಟ್ಟಿ ನಿರ್ವಹಿಸಿದರು. ಪ್ರಭುಲಿಂಗ ನರೇಗಲ್ಲ ವಂದಿಸಿದರು. ಕಾರ್ಯಕ್ರಮದಲ್ಲಿ ದ್ಯಾಮನಗೌಡ ಬಲ್ಲರವಾಡ, ಜಯಾ ನಾಗಸಮುದ್ರ, ನಾಗರಾಜ ಕಾಲವಾಡ, ಜಯಶ್ರೀ ಗುಡಗೇರಿ, ಬಸಮ್ಮ ಬಂಡೆಪ್ಪನವರ, ಶಿಕ್ಷಕರು ವಿದ್ಯಾರ್ಥಿ ವೃಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.