ಡಂಬಳ: ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಲೇಜು ನಿರ್ಮಾಣ, ಶಿಕ್ಷಣಕ್ಕೆ ಹೆಚ್ಚು ಆದ್ಯತೆ, ರಸ್ತೆಗಳು ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ಅನುದಾನದ ಹೊಳೆಯನ್ನು ರೋಣ ಮತಕ್ಷೇತ್ರಕ್ಕೆ ಮಾಜಿ ಸಚಿವರಾದ ಕಳಕಪ್ಪ ಬಂಡಿ ಹರಿಸಿದ್ದಾರೆ ಎಂದು ಬಿಜೆಪಿ ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಗಿ. ಹಾರೂಗೇರಿ ಹೇಳಿದರು.
ಪಿಆರ್‌ಡಿ, ಪಿಡಬ್ಲೂಡಿ, ಎಸ್‌ಸಿಪಿ ಟಿಎಸ್‌ಪಿ ಸೇರಿ ವಿವಿಧ ಯೋಜನೆಗಳ ಮೂಲಕ ಯುವ ಸಮೂಹಕ್ಕೆ ಶಿಕ್ಷಣ, ಜನಸಾಮಾನ್ಯರ ಮನೆಗಳಿಗೆ ಸರ್ಕಾರದ ಯೋಜನೆ ತಲುಪಿಸುವುದರ ಜತೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಗ್ರಾಮಗಳ ಸಂಪರ್ಕಕ್ಕೆ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದಂತಹ ಮತಕ್ಷೇತ್ರದಲ್ಲಿ ಹೊಸಪರ್ವ ಸೃಷ್ಟಿಸಿದ್ದ ಜನ ನಾಯಕರು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣ ಬಂಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಭು ಕರಮುಡಿ, ಪಂಚಾಕ್ಷರಯ್ಯ ಹರ್ಲಾಪೂರಮಠ, ಬಸವರಾಜ ಚನ್ನಳ್ಳಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಬಸವರಾಜ ಕೊತಂಬರಿ, ಮಲ್ಲಪ್ಪ ಮಠದ, ಚಂದ್ರು ಯಳಮಲಿ, ಸಿದ್ದನಗೌಡ ಪಾಟೀಲ, ಲಿಂಗನಗೌಡ ಹರ್ತಿ, ಮೈಲಾರೆಪ್ಪ ನೋಟಗಾರ, ರವಿ ಹಡಪದ, ಶ್ರೀಕಾಂತ ರಾಯರೆಡ್ಡಿ, ಕುಬೇರಪ್ಪ ಕವಲೂರ, ಬಸವರಾಜ ಬಂಡಿ, ಯಮನೂರ ದೊಡ್ಡಮನಿ, ಸಿದ್ದಯ್ಯ ಕಾಡಸಿದ್ದೇಶ್ವರಮಠ, ವಿಜಯ ಹಾದಿಮನಿ, ಮಹಾಂತೇಶ ಬಂಡಿ, ಪಕೀರಪ್ಪ ಆನಿ, ಮುತ್ತಪ್ಪ ಮಠದ, ಮಂಜುನಾಥ ಬಿಸನಳ್ಳಿ, ಆನಂದ ನಾಲ್ಕುರವಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರಾಜೇಶ ಗ. ಅರಕಾಲ, ಪ್ರಕಾಶ ಕೊತಂಬರಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಬಂಡಿ ಮತ್ತು ನಾಗರಾಜ ನವಲಿ, ಮುತ್ತು ಚಿನ್ನಪ್ಪಗೌಡ್ರ, ಸೋಮಶೇಖರ ಹಿರೇಮಠ, ಮುದಿಯಪ್ಪ ಮುಳಗುಂದ, ಪ್ರವೀಣ ಪಾಟೀಲ, ಪ್ರಭು ಕೊರ್ಲಹಳ್ಳಿ, ವಿನಾಯಕ ರಾಠೋಡ ಪಕ್ಷದ ಪದಾಧಿಕಾರಿಗಳು ಯುವಕ, ವಿದ್ಯಾರ್ಥಿಗಳು ಇದ್ದರು.