​ರೋಣ, ಸವಡಿಯಲ್ಲಿ ಸಂಕನೂರ ಪರ ಕಳಕಪ್ಪ ಬಂಡಿ ಮತಯಾಚನೆ

KannadaprabhaNewsNetwork |  
Published : Oct 18, 2026, 03:00 AM IST
17 ರೋಣ 1. ಪಶ್ಚಿಮ‌ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವ್ಹಿ.ಸಂಕನೂರ ಪರ ಮಾಜಿ ಸಚಿವ ಕಳಕಪ್ಪ‌ ಬಂಡಿ  ಸವಡಿಯಲ್ಲಿ ಮತಯಾಚಿಸಿದರು. | Kannada Prabha

ಸಾರಾಂಶ

ತಾಲೂಕಿನ ಸವಡಿ ಮತ್ತು ರೋಣ ಪಟ್ಟಣದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಸ್.ವಿ. ಸಂಕನೂರ ಪರವಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಶನಿವಾರ ಮತಯಾಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರೋಣ

ತಾಲೂಕಿನ ಸವಡಿ ಮತ್ತು ರೋಣ ಪಟ್ಟಣದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಸ್.ವಿ. ಸಂಕನೂರ ಪರವಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಶನಿವಾರ ಮತಯಾಚನೆ ನಡೆಸಿದರು.

​ಈ ಸಂದರ್ಭ ಮಾತನಾಡಿದ ಅವರು, ದೇಶದ ಪ್ರಜ್ಞಾವಂತ ಪದವೀಧರ ಮತದಾರರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮನಸಾರೆ ಮೆಚ್ಚಿದ್ದಾರೆ. ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಿಂದ ಪದವೀಧರ ಮತದಾರರು ತೀವ್ರ ಬೇಸತ್ತಿದ್ದಾರೆ ಎಂದರು

​ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅತ್ಯಂತ ಸೂಕ್ತ ಅಭ್ಯರ್ಥಿಯಾಗಿದ್ದು, ಪ್ರಜ್ಞಾವಂತ ಮತದಾರರು ಅವರಿಗೆ ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಭಾರಿ ಬಹುಮತದಿಂದ ಆರಿಸಿ ತರಬೇಕು ಎಂದು ಮನವಿ ಮಾಡಿಕೊಂಡರು.

ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ, ಮುಖಂಡರಾದ ಮುದಿಯಪ್ಪ ಕರಡಿ, ಅಶೋಕ ವನ್ನಾಲ, ಪ್ರಧಾನ ಕಾರ್ಯದರ್ಶಿ ರಮೇಶ ವಕ್ಕರ, ಶಿವಾನಂದ ಜಿಡ್ಡಿಬಾಗಿಲ, ಅಶೋಕ ನವಲಗುಂದ, ಮಲ್ಲು ಮಾದರ ಬಸವರಾಜ ರಂಗನಗೌಡ, ಬಸವರಾಜ ಕೊಟಗಿ, ಅನಿಲ್ ಶರಣಪ್ಪ ಪ್ಯಾಟಿ, ಅಶೋಕ್ ಪವಾಡಶೆಟ್ರ, ಮಂಜುನಾಥ ಗದಗ, ಶ್ರೀಶೈಲ ಇಟಗಿ, ಶಂಕ್ರಯ್ಯ ಹಿರೇಮಠ ಸೇರಿದಂತೆ ಬಿಜೆಪಿ‌ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಸಂಕನೂರ ಬೆಂಬಲಿಸಿಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರ ಆಯ್ಕೆಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಡಂಬಳ ಹೋಬಳಿಯ ಮೇವುಂಡಿ ಗ್ರಾಮದಲ್ಲಿ ಸಂಕನೂರ ಪರ ಮತಯಾಚಿಸಿ ಮತ್ತು ಘಟನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯ ಆಡಳಿತ ಪ್ರಭಾವ ಕೂಡಾ ಪದವೀಧರರು ಮೆಚ್ಚಿಕೊಂಡು ಪಕ್ಷದ ಅಭ್ಯರ್ಥಿಗೆ ಒಲುವು ತೋರಲಿದ್ದಾರೆ ಎಂದರು.

ರೋಣ ಮಂಡಲ ಬಿಜೆಪಿ ಅಧ್ಯಕ್ಷ ಉಮೇಶ ಮಲ್ಲಾಪೂರ ಮಾತನಾಡಿ, ರೋಣ ಮಾಜಿ ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ಕ್ಷೇತ್ರಾದ್ಯಂತ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಪ್ರಯತ್ನ ನಿರಂತರ ನಡೆದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಡಂಬಳ ಬಿಜೆಪಿ ಮಂಡಲ ಅಧ್ಯಕ್ಷ ಅಂದಪ್ಪ ಹಾರೋಗೇರಿ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸುವ ಕೆಲಸ ನಡೆದಿದೆ, ಹೀಗಾಗಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.

ಈ ವೇಳೆ ಮುಖಂಡರಾದ ಮುದ್ಲಿಂಗಪ್ಪ ಕೊರ್ಲಹಳ್ಳಿ, ರವಿ ಕರಿಗಾರ, ವೆಂಕನಗೌಡ ಪಾಟೀಲ, ಮಲ್ಲಪ್ಪ ಮಠದ, ಬಸವರಾಜ ಚೆನ್ನಳ್ಳಿ, ರಾಜೇಶ ಅರಕಾಲ, ಅಶೋಕ ವನ್ನಾಲ, ಉಮೇಶ ಅಂಕದ ದೇವೇಂದ್ರಪ್ಪ ಪಾಟೀಲ, ಮಲ್ಲನಗೌಡ ಶಿಂಗಟಾಲೂರು, ನಾಗರಾಜ ಕಾಟ್ರಳ್ಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಡಗಿ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಯತ್ನ
ಶರಣರಿಗೆ ಜಾತಿ ಸೂತ್ರ ತೊಡಿಸುವುದು ಬೇಡ: ಮಾರುತಿ ಶಿಡ್ಲಾಪೂರ