ರಿಯಾಜಅಹ್ಮದ ಎಂ. ದೊಡ್ಡಮನಿಡಂಬಳ: ರೋಣ ಕ್ಷೇತ್ರದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮೂಲ ಸೌಕರ್ಯವೇ ಬುನಾದಿ ಎಂಬ ಆಶಯದೊಂದಿಗೆ ಮಾಜಿ ಶಾಸಕ ಕಳಕಪ್ಪ ಬಂಡಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡ ಕಾರ್ಯಗಳು ಇಂದಿಗೂ ಮನೆಮಾತಾಗಿವೆ.
ಹಾರೂಗೇರಿ ಗ್ರಾಮದ ಎಸ್‌ಸಿ ಕಾಲನಿಯಲ್ಲಿ ₹251 ಲಕ್ಷ, ಮುರಡಿ ತಾಂಡಾದ ಎಸ್ಸಿ ಕಾಲನಿಯಲ್ಲಿ ₹25 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ. ಅದೇ ರೀತಿ ವೇಠಾಆಲೂರು ಗ್ರಾಮದಲ್ಲಿ ₹46 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ, ₹2 ಕೋಟಿ ವೆಚ್ಚದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ ಕಟ್ಟಡ, ಸ್ವಚ್ಛ ಮತ್ತು ಸುಂದರ ಗ್ರಾಮಗಳಿಗಾಗಿ ಪ್ರತಿ ಗ್ರಾಮಗಳಿಗೆ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣ ಘಟಕ ನಿರ್ಮಿಸಿದ್ದಾರೆ.
ಕಾಲನಿಗಳಿಗೆ ಮೂಲ ಸೌಕರ್ಯ: ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೂ ಗಮನ ನೀಡಿದ್ದಾರೆ. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ವಿವಿಧ ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲನಿಗಳಲ್ಲಿ ಸಿಸಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.ನೀರಾವರಿ ಯೋಜನೆ: ರೋಣ ಕ್ಷೇತ್ರದ ಕೃಷಿ ಆಧರಿತ ಆರ್ಥಿಕತೆಗೆ ನೀರಾವರಿ ಅತ್ಯಂತ ಪ್ರಮುಖವಾಗಿರುವ ಹಿನ್ನೆಲೆ ಕೆರೆಗಳಿಗೆ ಬಾಂದಾರಗಳ ನಿರ್ಮಾಣದ ಮೂಲಕ ನೀರು ತುಂಬಿಸುವುದು ಹಾಗೂ ನೀರಾವರಿ ಸೌಲಭ್ಯ ವಿಸ್ತರಿಸುವ ಯೋಜನೆಗಳಿಗೆ ಒತ್ತು ನೀಡಿದ್ದಾರೆ.
ವಿಶೇಷ ಛಾಪು: ಜನಸಾಮಾನ್ಯರು ಮತ್ತು ಪಕ್ಷ ನಿಷ್ಠೆಯಲ್ಲಿರುವರನ್ನು ಗುರುತಿಸಿ ಗೌರವಿಸುವ ಗುಣ ಹೊಂದಿರುವುದರಿಂದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರು ಅಪಾರ ಜನಪ್ರಿಯತೆ ಹೊಂದಿದ್ದಾರೆ. ಅವರು ತಮ್ಮದೇ ಆದ ವಿಶೇಷ ಛಾಪನ್ನು ರಾಜಕಾರಣದಲ್ಲಿ ಮೈಗೂಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಡಂಬಳ ಮಂಡಳ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಲ್ಲಪ್ಪ ಗವಿಸಿದ್ಧಪ್ಪ ಮಠದ ತಿಳಿಸಿದರು.