ಲಕ್ಷ್ಮೇಶ್ವರ ಪುರಸಭೆಯಿಂದ ಬೀದಿನಾಯಿಗಳ ಸೆರೆ

KannadaprabhaNewsNetwork |  
Published : Aug 19, 2026, 02:15 AM IST
ಪೊಟೋ-ಪಟ್ಟಣದ ವಿವಿಧ ವಾರ್ಡಗಳಲ್ಲಿ ಬೀದಿ ನಾಯಿಗಳ ಹಿಡಿಯುವ ಕಾರ್ಯಾಚರಣೆ ಮಾಡುತ್ತಿರುವ ತಂಡವು. | Kannada Prabha

ಸಾರಾಂಶ

ಬುಧವಾರವೂ ಪಟ್ಟಣದ ಇನ್ನಷ್ಟು ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಮುಂದುವರಿಸುವ ಕಾರ್ಯ ಮಾಡಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ತಿಳಿಸಿದ್ದಾರೆ.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಲವು ವರ್ಷಗಳಿಂದ ಬೀದಿನಾಯಿಗಳ ಉಪಟಳ ಹೆಚ್ಚಾಗಿತ್ತು. ಮಕ್ಕಳ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಿದ್ದ ಬೀದಿನಾಯಿಗಳನ್ನು ಪುರಸಭೆಯು ಸೆರೆ ಹಿಡಿಯುವ ಮೂಲಕ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದ್ದಾರೆ. ಪುರಸಭೆಯು ಪಟ್ಟಣದ ವಿವಿಧ ವಾರ್ಡಗಳಲ್ಲಿ ಬೀದಿನಾಯಿಗಳ ಹಿಡಿಯುವ ಕಾರ್ಯ ಮಾಡಿದೆ.

ಪಟ್ಟಣದ ಕೆಂಚಲಾಪುರ ಓಣಿಯಲ್ಲಿ 7, ದೂದಪೀರಾ ದರ್ಗಾದ ಹತ್ತಿರ 15, ಶಾದಿ ಮಹಲ್ ಹತ್ತಿರ 10, ಚಿಕನ್ ಮಾರ್ಕೆಟ್ 7, ಹೂವಿನ ಮಾರ್ಕೆಟ್ ಹತ್ತಿರ 5, ಶಿಗ್ಲಿ ಕ್ರಾಸ್ 5, ಪೊಲೀಸ್ ಠಾಣೆ ಹತ್ತಿರ 4, ಇಂದಿರಾ ನಗರ 8, ಬಸ್ ಸ್ಟಾಂಡ್ ಹತ್ತಿರ 5, ಬಸವೇಶ್ವರ ನಗರ 4, ಬಸ್ ಸ್ಟ್ಯಾಂಡ್ ಹಿಂದೆ 5, ಪುರಸಭೆ ಹತ್ತಿರ 4, ಸೋಮೇಶ್ವರ ಗುಡಿ ಹತ್ತಿರ 6, ಅಂಬೇಡ್ಕರ್ ನಗರ 7, ಮಂಜಲಾಪುರ ಹಳ್ಳದ ಹತ್ತಿರ 5, ಮಂಜಲಾಪುರ 11 ಸೇರಿದಂತೆ ವಿವಿಧ ಕಡೆ 90ಕ್ಕೂ ಹೆಚ್ಚು ಬೀದಿನಾಯಿಗಳ ಹಿಡಿಯುವ ಮೂಲಕ ಸಾರ್ವಜನಿಕರಿಗೆ ನೆಮ್ಮದಿ ಮೂಡಿಸಿದ್ದಾರೆ.

ಹಲವು ವರ್ಷಗಳಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ ಹಾಸನದಿಂದ ಬಂದಿರುವ ನಾಯಿಗಳ ಸೆರೆ ಹಿಡಿಯುವ ತಂಡವು ಕಾರ್ಯಾಚರಣೆ ನಡೆಸುವ ಮೂಲಕ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸುಮಾರು 90ಕ್ಕೂ ಹೆಚ್ಚು ಬೀದಿನಾಯಿಗಳನ್ನು ಹಿಡಿಯುವ ಕಾರ್ಯ ಮಾಡಿದ್ದೇವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿನಾಯಿಗಳ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿದ್ದು, ಈಗ ಹಿಡಿದಿರುವ ಬೀದಿನಾಯಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದ ಅವರು, ಬುಧವಾರವೂ ಪಟ್ಟಣದ ಇನ್ನಷ್ಟು ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಮುಂದುವರಿಸುವ ಕಾರ್ಯ ಮಾಡಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ತಿಳಿಸಿದ್ದಾರೆ.

ನಾಳೆ ಅಯ್ಯಾಚಾರ, ಲಿಂಗದೀಕ್ಷೆ ಕಾರ್ಯಕ್ರಮ

ನರಗುಂದ: ಪಟ್ಟಣದ ಪತ್ರಿವನ ಮಠದ ಪುಣ್ಯಾರಣ್ಯ ಪತ್ರಿವನ ಮಠದ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಆ. 20ರಂದು ಬೆಳಗ್ಗೆ 10 ಗಂಟೆಗೆ ಬಾದಾಮಿಯ ನವಗೃಹ ಹಿರೇಮಠದ ಶಿವಪೂಜಾ ಶ್ರೀಗಳ ಸಾನ್ನಿಧ್ಯದಲ್ಲಿ ಅಯ್ಯಾಚಾರ, ಲಿಂಗದೀಕ್ಷೆ ಹಾಗೂ ಶ್ರೀದೇವಿ ಪುರಾಣ ಪಾರಾಯಣ ದೀಕ್ಷೆ ಕಾರ್ಯಕ್ರಮ ಜರಗುಲಿದೆ.ಸಂಜೆ 7 ಗಂಟೆಗೆ ಧರ್ಮಸಭೆ ವಚನಾಮೃತ ಶ್ರಾವಣ ಶರಣರ ಚಿಂತನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಕಿಲ್ಲಾ ತೊರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಶ್ರೀಗಳು, ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ವಿರಕ್ತಮಠದ ಶಿವಕುಮಾರ ಶ್ರೀಗಳು, ಕೊಣ್ಣೂರು ವಿರಕ್ತಮಠದ ಚನ್ನವೀರ ಶ್ರೀಗಳು, ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಅವರು ವಹಿಸಿಕೊಳ್ಳಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು, ಮಕ್ಕಳಿಂದ ಹೊಳೆ ಗಂಗಾ ಪೂಜೆ
ಕೂಲಿಕಾರರಿಗೆ ಸ್ಕೀಂನ ಲಾಭ ಪಡೆಯಲಿ: ಪಾಟೀಲ್