- ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸಲಹೆ ----ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾನುವಾರ ಆಯೋಜಿಸಿದ್ದ ಮಹಾಯೋಗಿ ಶ್ರೀ ವೇಮನ ಜಯಂತಿ ಮತ್ತು ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ರೀತಿಯ ಕಾರ್ಯಕ್ರಮಗಳನ್ನು ಜನರು ಭಾಗವಹಿಸಿ, ಇದರಿಂದ ಸಿಗುವ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ವ್ಯಕಿಗಳಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ವಿಚಾರ ಹಾಗೂ ತಿಳಿವಳಿಕೆಗಳು ಹೆಚ್ಚಾಗುತ್ತವೆ ಎಂದರು.
ಪ್ರತಿಯೊಬ್ಬರ ಜೀವನದಲ್ಲಿಯೂ ಬದಲಾವಣೆಯ ಸಮಯ ಬರುತ್ತದೆ. ಆ ಸಮಯವನ್ನು ಅರಿತು ಉತ್ತಮರಾಗಬೇಕು. ಮನುಷ್ಯ ಶುದ್ಧಿ ಆಗಬೇಕೆಂದರೆ ಗಣ್ಯ ವ್ಯಕ್ತಿಗಳನ್ನು ಅನುಸರಿಸಿ ಸಮಾಜದಲ್ಲಿರುವ ಮಾಲಿನ್ಯವನ್ನು ತೊಲಗಿಸಬೇಕು. ಕೆಟ್ಟ ವಿಚಾರಗಳು ಮನಸ್ಸಿನಲ್ಲಿ ಬಂದಾಗ ಅವುಗಳನ್ನು ತೊರೆದು ಒಳ್ಳೆಯ ವಿಚಾರದತ್ತ ಗಮನ ಕೊಡಬೇಕು. ಕ್ರೋದ, ಮದ -ಮತ್ಸರಗಳನ್ನು ಬಿಟ್ಟು ಸಹಬಾಳ್ವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್, ನಗರ ಪಾಲಿಕೆಯ ಉಪ ಆಯುಕ್ತ ಸೋಮಶೇಖರ್, ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ. ವಸಂತಮ್ಮ, ಪ್ರೊ. ಜ್ಯೋತಿ ಶಂಕರ್, ಕನ್ನಡಪರ ಹೋರಾಟಗಾರ ತಾಯೂರು ವಿಠಲಮೂರ್ತಿ ಮೊದಲಾದವರು ಇದ್ದರು.