ಸತ್ಯವನ್ನೇ ಹೇಳುತ್ತೇನೆ 3 ಗಂಟೆಯ ನಾಟಕವಾಗಿದ್ದು, ಚರಿತ್ರೆಯಲ್ಲಿ ಬಚ್ಚಿಡಲಾದ ವಿಷಯವನ್ನು ಉತ್ಖನನ ಮಾಡಿ, ವೇದಿಕೆಯ ಮುಂದೆ ತಂದಿದ್ದೇವೆ.
ಕನ್ನಡಪ್ರಭ ವಾರ್ತೆ ಮೈಸೂರು
ರಂಗಭೂಮಿ ಟ್ರಸ್ಟ್ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ‘ಸತ್ಯವನ್ನೇ ಹೇಳುತ್ತೇವೆ’ ಎಂಬ ನಾಟಕವು ಪೊಲೀಸ್ ಭದ್ರತೆಯಲ್ಲಿ ಪ್ರದರ್ಶನವಾಯಿತು.ಈ ವೇಳೆ ನಾಟಕದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಸತ್ಯವನ್ನೇ ಹೇಳುತ್ತೇನೆ 3 ಗಂಟೆಯ ನಾಟಕವಾಗಿದ್ದು, ಚರಿತ್ರೆಯಲ್ಲಿ ಬಚ್ಚಿಡಲಾದ ವಿಷಯವನ್ನು ಉತ್ಖನನ ಮಾಡಿ, ವೇದಿಕೆಯ ಮುಂದೆ ತಂದಿದ್ದೇವೆ. 250 ಸೀಟ್ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಪ್ರದರ್ಶನಗಳ ಟಿಕೆಟ್ಮಾರಾಟವಾಗಿದೆ ಎಂದು ತಿಳಿಸಿದರು.ನಾಟಕದ ಪಾತ್ರ ವರ್ಗದಲ್ಲಿ ಎಸ್.ಶಿವಮೂರ್ತಿ, ವಿ.ಸಿ. ಚಿದಾರ್ಜುನ್, ಚೇತನ್ಕಾಟೇನಹಳ್ಳಿ, ಪವನ್ದೇಶಪಾಂಡೆ, ಸುನೀಲ್ಪಟಾಕಿ, ಎಸ್. ವೈಭವ್ ನಾಗ್, ಅನಿತಾ ಕಾರ್ಯಪ್ಪ, ಎಸ್.ಎಚ್. ಕಿರಣ್ ನಿರ್ವಹಿಸಿದ್ದು, ಸಂಗೀತ ಶಿವಕುಮಾರ್, ಬೆಳಕು ಮಂಜುನಾಥ್ಹಿರೇಮಠ್ಮಾಡಿದ್ದಾರೆ ಎಂದರು. ಬಿಗಿ ಭದ್ರತೆಈ ನಾಟಕಕ್ಕೆ ವಿರೋಧ ವ್ಯಕ್ತವಾಗಬಹುದೆಂದು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಒದಗಿಸಿದ್ದರು. ಜಯಲಕ್ಷ್ಮಿಪುರಂ ಠಾಣೆಯ ಇನ್ಸ್ ಪೆಕ್ಟರ್ಕುಮಾರ್ನೇತೃತ್ವದಲ್ಲಿ 30 ಜನ ಅಧಿಕಾರಿ, ಸಿಬ್ಬಂದಿ ಹಾಗೂ ಒಂದು ಸಿಎಆರ್ವಾಹನವನ್ನು ಕಲಾಮಂದಿರ ಆವರಣದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಎಸಿಪಿ ಅಶ್ವತ್ಥನಾರಾಯಣ ಭದ್ರತೆ ಪರಿಶೀಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.