ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಮಥುರಾ ಪ್ಯಾರಾಡೈಸ್ ನಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಇದರ 28ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಸುಗಮ ಸಂಗೀತ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿ.ಕಾಳಿಂಗರಾಯರ ಹಾಡುಗಳು ಇಂದಿಗೂ ಸಹ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಸಾಕಷ್ಟು ಜನ ಕಲಾವಿದರು ಇಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.ಸುಗಮ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಸುಗಮ ಸಂಗೀತ ಹಾಗೂ ಆಕಾಶವಾಣಿ ಕಲಾವಿದರಾದ ವಿದುಷಿ ಜಯಶ್ರೀ ಶ್ರೀಧರ್ ಹಾಗೂ ವಿದುಷಿ ಉಮಾ ದಿಲೀಪ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶೋಭಾ ಸತೀಶ್, ಸುಶೀಲ, ರಾಜಕುಮಾರ್, ದಾಕ್ಷಾಯಿಣಿ, ಲಕ್ಷ್ಮಿ ಮಹೇಶ್, ಕೆ.ಎಸ್.ಮಂಜುನಾಥ್, ಶ್ವೇತಾ ಪಾಟೀಲ್, ಮಥುರಾ ನಾಗರಾಜ್, ಲತಾ ಕೆದಿಲಾಯ, ಮಮತಾ ಇತರರು ಇದ್ದರು.