ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಸುಜ್ಞಾನ ನಿಧಿ ಸಹಕಾರಿ: ಭರತ್

KannadaprabhaNewsNetwork |  
Published : Sep 02, 2025, 01:00 AM IST
1ಕಕೆಡಯು2. | Kannada Prabha

ಸಾರಾಂಶ

ಕಡೂರು, ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸುಜ್ಞಾನ ನಿಧಿ ಹೆಚ್ಚು ಸಹಕಾರಿಯಾಗುತ್ತಿವೆ ಎಂದು 12 ಹರಿವಾಣದ ಗುಡಕಟ್ಟಿನ ಸಮಿತಿ ಅಧ್ಯಕ್ಷ ಭರತ್ ಕೆಂಪರಾಜ್ ಹೇಳಿದರು.

-ಗ್ರಾಮಾಭಿವೃದ್ಧಿ ಯೋಜನೆಯಿಂದ ವಿದ್ಯಾರ್ಥಿ ಗಳಿಗೆ ಸುಜ್ಞಾನ ನಿಧಿ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸುಜ್ಞಾನ ನಿಧಿ ಹೆಚ್ಚು ಸಹಕಾರಿಯಾಗುತ್ತಿವೆ ಎಂದು 12 ಹರಿವಾಣದ ಗುಡಕಟ್ಟಿನ ಸಮಿತಿ ಅಧ್ಯಕ್ಷ ಭರತ್ ಕೆಂಪರಾಜ್ ಹೇಳಿದರು.

ತಾಲೂಕಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿ ಸಮುದಾಯಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಗಳಿಗೆ ಸುಜ್ಞಾನ ನಿಧಿ ವೇತನದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕೇತ್ರದ ವಿರೇಂದ್ರ ಹೆಗ್ಗಡೆ ಮಕ್ಕಳ ಉನ್ನತ ಶಿಕ್ಷಣದ ಭವಿಷ್ಯಕ್ಕೆ ಹೆಚ್ಚು ಉಪಯುಕ್ತಗೊಳ್ಳಬೇಕೆಂಬ ನಿಟ್ಟಿನಲ್ಲಿ ರಾಜ್ಯಾದ್ಯಂತ ಸುಜ್ಞಾನ ನಿಧಿ ಯೋಜನೆಯಡಿ ಶಿಷ್ಯ ವೇತನ ನೀಡುತ್ತಿರುವುದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ. ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಓದು ನಿಲ್ಲಿಸಬಾರದೆಂಬ ಮುಖ್ಯ ಉದ್ದೇಶದಿಂದ ಪ್ರತಿ ತಿಂಗಳು ಶಿಷ್ಯ ವೇತನ ನೀಡುವ ಮೂಲಕ ತಾಲೂಕಿನ 178 ವಿದ್ಯಾರ್ಥಿಗಳು ಅರ್ಹ ರಾಗಿರುವುದು ಹೆಮ್ಮೆಯ ಸಂಗತಿ ಎಂದರು.ಸರಕಾರವನ್ನು ಹೊರತು ಪಡಿಸಿ ಪರ್ಯಾಯ ಸಂಸ್ಥೆ ಮೂಲಕ ಸಮಾಜದ ಕಟ್ಟಕಡೆ ವ್ಯಕ್ತಿಗೂ ಯೋಜನೆ ಸದುಪಯೋಗಕ್ಕಾಗಿ ಅನೇಕ ಕ್ಷೇತ್ರಗಳಲ್ಲಿ ಸಾಮಾಜಿಕ ಕಳಕಳಿ ಕಾರ್ಯಕ್ರಮ ಅನುಷ್ಟಾನಗೊಳಿಸಿ ಯಶಸ್ವಿ ಯಾಗಿದ್ದಾರೆ. ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಧಾರ್ಮಿಕ ನಂಬಿಕೆ ತಳಹದಿಯಲ್ಲಿ ಬದುಕುತ್ತಿರುವ ನಾವುಗಳು ದೈವ ಕೃಪೆ ಆರ್ಶಿವಾದದಿಂದ ಶ್ರೀ ಕ್ಷೇತ್ರದ ಮೇಲೆ ನಡೆದಿರುವ ಷಡ್ಯಂತ್ರ ದೂರವಾಗಿ ಸತ್ಯದ ದರ್ಶನ ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಯೋಜನೆಯಡಿ ಸದುಪಯೋಗ ಪಡೆಯುತ್ತಿರುವ ಸಂಘದ ಸದಸ್ಯರು ಕೃತಜ್ಞರಾಗಬೇಕಿದೆ ಎಂದರು.ತಾಲೂಕು ಯೋಜನಾಧಿಕಾರಿ ಕೆ. ಬೇಬಿ ಮಾತನಾಡಿ, ಯೋಜನೆಯಿಂದ ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ವರ್ಷದಲ್ಲಿ 87641 ವಿದ್ಯಾರ್ಥಿಗಳಿಗೆ ₹43.12 ಲಕ್ಷ ರು. ಸುಜ್ಞಾನ ನಿಧಿ ನೀಡಲಾಗಿದೆ. 2007 ರಿಂದ ಇದುವರೆಗೆ ₹24 ಕೋಟಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ 396 ವಿದ್ಯಾರ್ಥಿಗಳು ಶಿಷ್ಯ ವೇತನದ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಈ ಸಾಲಿನಲ್ಲಿ 178 ವಿದ್ಯಾರ್ಥಿಗಳು ಹೊಸದಾಗಿ ಸೇರ್ಪಡೆ ಗೊಂಡಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಮಾತನಾಡಿ, ಮಕ್ಕಳು ಓದುವ ಬದುಕಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಾಗ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿ ಜೀವನವನ್ನು ಹೆಚ್ಚು ಸದುಪ ಯೋಗ ಪಡಿಸಿಕೊಳ್ಳಬೇಕಿದೆ. ಮನೆಯ ಪೋಷಕರು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ತಮ್ಮ ಮಕ್ಕಳ ಭವಿಷ್ಯ ರೂಪಿಸುತ್ತಾರೆ. ಅವರ ಪರಿಶ್ರಮಕ್ಕೆ ನ್ಯಾಯ ಒದಗಿಸುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದರು. ಮಲ್ಲೇಶ್ವರ ಗ್ರಾಪಂ ಮಾಜಿ ಅಧ್ಯಕ್ಷೆ ಯಶೋಧಾ ಧರ್ಮರಾಜ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎಚ್.ಆರ್. ದೇವರಾಜ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಭಾಗ್ಯ, ಸಂಘದ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಇದ್ದರು.1ಕೆಕೆಡಿಯು2. ಕಡೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವೇತನದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು 12 ಹರಿವಾಣದ ಗುಡಕಟ್ಟಿನ ಸಮಿತಿ ಅಧ್ಯಕ್ಷ ಭರತ್ ಕೆಂಪರಾಜ್ ಉದ್ಘಾಟಿಸಿದರು. ಯೋಜನಾಧಿಕಾರಿ ಬೇಬಿ, ಯಶೋಧ ಧರ್ಮರಾಜ್, ಎಚ್.ಆರ್. ದೇವರಾಜ್, ಭಾಗ್ಯ ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ