ಮಂಗಳೂರು : ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ 75 ವರ್ಷಗಳ ಬಳಿಕ ಮುಂದಿನ ವರ್ಷ ನಡೆಯಲಿರುವ ಸಂಭ್ರಮದ ಕಳಿಯಾಟ ಮಹೋತ್ಸವದ ಪುಣ್ಯಕಾರ್ಯಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳುವ ಮೂಲಕ ಧನ್ಯರಾಗೋಣ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ 2027ರಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಕೂಟಕ್ಕಳ ಸಭಾಂಗಣದಲ್ಲಿ ನಡೆದ ಸಮಿತಿ ರಚನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್.ನಾಯಕ್, ಲಕುಮಿ ತಂಡದ ಮುಖ್ಯಸ್ಥ ಕಿಶೋರ್ ಡಿ.ಶೆಟ್ಟಿ, ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಮೊಕ್ತೇಸರ ವಿಶ್ವನಾಥ ಮಂಕಿಸ್ಟ್ಯಾಂಡ್, ಉಳ್ಳಾಲ ಶ್ರೀ ಚಿರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯಾ, ಮೊಕ್ತೇಸರ ಸುರೇಶ್ ಭಟ್ನಗರ, ನಿಕಟಪೂರ್ವ ಕಾರ್ಪೊರೇಟರ್ ಲೀಲಾವತಿ ಪ್ರಕಾಶ್, ಅಡ್ಕ ಶ್ರೀ ಭಗವತೀ ಕ್ಷೇತ್ರದ ಕಾರ್ಯದರ್ಶಿ ಜಯಂತ ವಿ. ಬಂದ್ಯೋಡ್, ಉಪ್ಪಳ ಭಗವತೀ ಕ್ಷೇತ್ರದ ಅಧ್ಯಕ್ಷ ಸುಕುಮಾರ್, ಪಟ್ಟತ್ತೂರು ಭಗವತೀ ಕ್ಷೇತ್ರದ ಅಧ್ಯಕ್ಷ ಜಯರಾಮ್, ಭಾರತೀಯ ತೀಯ ಸಮಾಜ ಮಂಗಳೂರು ವಲಯದ ಅಧ್ಯಕ್ಷ ರಾಕೇಶ್ ಬಿಕರ್ನಕಟ್ಟೆ, ಉದ್ಯಮಿ ಅಶೋಕ್ ಕುಮಾರ್, ಬಂಟ್ವಾಳ ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಡಿಯಾಲ್ ಬೈಲ್ ಅಧ್ಯಕ್ಷ ಸದಾನಂದ ಶೆಟ್ಟಿ, ಯುವಜನ ಸಮಿತಿ ಅಧ್ಯಕ್ಷ ಜಗದೀಶ್ ಕದ್ರಿ, ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರಮೋಹನ್, ಮೊಕ್ತೇಸರರಾದ ಮೋನಪ್ಪ ಮಜಿ, ರಾಜಗೋಪಾಲ್, ರವೀಂದ್ರ ಕೆ., ಉಷಾ ಪ್ರಭಾಕರ್, ಸರಳ ನಾಗೇಶ್, ಉದಯ ಕುಡುಪು, ಲೋಕೇಶ್ ಬೋಳಾರ್ ಇದ್ದರು.
ಮೊಕ್ತೇಸರ ಸುಜನ್ ದಾಸ್ ಕುಡುಪು ಸ್ವಾಗತಿಸಿದರು. ವೈ.ಬಿ. ಸುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಧೀರ್ ಬಿ. ಜಪ್ಪು ಸಮಿತಿ ರಚನೆಗೆ ಸಹಕರಿಸಿದರು.ವಿವಿಧ ಭಗವತೀ ಕ್ಷೇತ್ರಗಳ ಪದಾಧಿಕಾರಿಗಳು, ಗ್ರಾಮ ಸಂಘಗಳು, ಯುವಜನ ವೇದಿಕೆ ಹಾಗೂ ಮಹಿಳಾ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು. ಸುಕೇಶ್ ಮಂಜನಾಡಿ ನಿರೂಪಿಸಿದರು.