ಶೈಕ್ಷಣಿಕ ಶ್ರೇಷ್ಠತೆಗೆ ಹೊಸ ಭಾಷ್ಯ ಬರೆದ ಮೂಡುಬಿದಿರೆ ಎಕ್ಸಲೆಂಟ್ ಕಾಲೇಜು

KannadaprabhaNewsNetwork |  
Published : Aug 13, 2026, 03:00 AM IST
ಎಕ್ಸಲೆಂಟ್‌ ಕಾಲೇಜು ಕಟ್ಟಡ | Kannada Prabha

ಸಾರಾಂಶ

ಏಮ್ಸ್‌, ಐಐಟಿ, ಎನ್‌ಐಟಿ ಸಂಸ್ಥೆಗಳಂತಹ ರಾಷ್ಟ್ರೀಯ ಮಟ್ಟದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಪ್ರಸಿದ್ಧ ಉಪನ್ಯಾಸಕ ಯುವರಾಜ್ ಜೈನ್ ಮತ್ತು ರಶ್ಮಿತಾ ಜೈನ್ ದಂಪತಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಸ್ಥಾಪಿಸಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಕೇವಲ ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಸಾಧಕರನ್ನಾಗಿ ಪರಿವರ್ತಿಸಿ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುತ್ತಿದೆ.

ಮೂಡುಬಿದಿರೆ: ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಸೂಕ್ತ ಪದವಿ ಪೂರ್ವ ಕಾಲೇಜ್‌ ಆಯ್ಕೆ ಅತ್ಯಂತ ನಿರ್ಣಾಯಕವಾಗಿದೆ.

ಏಮ್ಸ್‌, ಐಐಟಿ, ಎನ್‌ಐಟಿ ಸಂಸ್ಥೆಗಳಂತಹ ರಾಷ್ಟ್ರೀಯ ಮಟ್ಟದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಪ್ರಸಿದ್ಧ ಉಪನ್ಯಾಸಕ ಯುವರಾಜ್ ಜೈನ್ ಮತ್ತು ರಶ್ಮಿತಾ ಜೈನ್ ದಂಪತಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಸ್ಥಾಪಿಸಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಕೇವಲ ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಸಾಧಕರನ್ನಾಗಿ ಪರಿವರ್ತಿಸಿ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುತ್ತಿದೆ.ಸಾಧಾರಣ ಅಂಕಗಳಿಂದ ರಾಷ್ಟ್ರಮಟ್ಟದತ್ತ

ಎಕ್ಸಲೆಂಟ್ ಸಂಸ್ಥೆಯ ಬೋಧನಾ ಪದ್ಧತಿಯು 10ನೇ ತರಗತಿಯಲ್ಲಿ ಸಾಧಾರಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನೂ ಸಾಧಕರನ್ನಾಗಿ ರೂಪಿಸುತ್ತದೆ. ಹತ್ತನೇ ತರಗತಿಯಲ್ಲಿ ಶೇ. 75 ಮತ್ತು ಶೇ. 80 ಅಂಕ ಗಳಿಸಿದ್ದ ವಿದ್ಯಾರ್ಥಿಗಳು ಇಲ್ಲಿ ನೀಟ್‌ ಪರೀಕ್ಷೆಯಲ್ಲಿ 580 ಮತ್ತು 611 ಅಂಕಗಳನ್ನು ಪಡೆಯುವ ಮೂಲಕ ಮೆಡಿಕಲ್ ಸೀಟು ಗಿಟ್ಟಿಸಿಕೊಂಡಿರುವುದು ಇದಕ್ಕೆ ಸ್ಪಷ್ಟ ನಿದರ್ಶನ.ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ: 2026ರ ನೀಟ್ ಪರೀಕ್ಷೆಯಲ್ಲಿ ನಿಖಿಲ್ ಎಸ್. ಎಸ್. (650/720) ಸೇರಿದಂತೆ 7 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಹಾಗೂ 72 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 4 ವಿದ್ಯಾರ್ಥಿಗಳು ನೇರವಾಗಿ ಐಐಟಿ (ಐಐಟಿ) ಆ್ಯಂಡ್‌ 3 ವಿದ್ಯಾರ್ಥಿಗಳು ಎನ್ಐಟಿಕೆ ಸಂಸ್ಥೆಗಳಿಗೆ ಆಯ್ಕೆಯಾಗಿದ್ದಾರೆ.

ಕಳೆದ 14 ವರ್ಷಗಳಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಮ್ಸ್‌, ಐಐಟಿ, ಎನ್‌ಐಟಿ, ಜೆಐಪಿಎಂಇಆರ್‌, ಐಐಎಸ್‌ಸಿ ನಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ. ರ‍್ಯಾಂಕ್ ಗಳ ಸುರಿಮಳೆ: ಇತ್ತೀಚಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಕ್ಸಲೆಂಟ್‌ನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಮೊದಲ ಹತ್ತರಲ್ಲಿ 37 ರ‍್ಯಾಂಕ್ ಗಳನ್ನು (ವಿಜ್ಞಾನದಲ್ಲಿ 27, ವಾಣಿಜ್ಯದಲ್ಲಿ 10) ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ 1,112 ವಿದ್ಯಾರ್ಥಿಗಳಲ್ಲಿ 818 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್‌) ತೇರ್ಗಡೆಯಾಗಿ, ಸಂಸ್ಥೆಗೆ ಶೇ.100 ಫಲಿತಾಂಶ ತಂದುಕೊಟ್ಟಿದ್ದಾರೆ. 10ನೇ ತರಗತಿಯಲ್ಲಿ ಕೇವಲ 211 ವಿದ್ಯಾರ್ಥಿಗಳು ಮಾತ್ರ ಉನ್ನತ ಶ್ರೇಣಿ ಪಡೆದಿದ್ದರೆ, ಪಿಯುಸಿಯಲ್ಲಿ ಆ ಸಂಖ್ಯೆ 818ಕ್ಕೇರಿರುವುದು ಈ ಸಂಸ್ಥೆಯ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿ.ಸಂಯೋಜಿತ ಬೋಧನೆ, ಗುರುಕುಲ ಮಾದರಿ: ದೈನಂದಿನ ಪಿಯುಸಿ ವೇಳಾಪಟ್ಟಿಯೊಂದಿಗೆ ನೀಟ್‌, ಜೆಇಇ, ಕೆಸೆಟ್‌ ಹಾಗೂ ಎಡಿಎ /ಸಿಎ ಕೋಚಿಂಗ್‌ಗಳನ್ನು ಸಂಸ್ಥೆಯಲ್ಲೇ ಸಂಯೋಜಿಸಿ ನೀಡಲಾಗುತ್ತದೆ. ಜೊತೆಗೆ, ಬೆಳಗಿನ ಯೋಗ, ಧ್ಯಾನ, ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾ ಪಠಣ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಮಾನಸಿಕ ಸ್ಥಿರತೆ ಹೆಚ್ಚಿಸುತ್ತವೆ. ನಿವೃತ್ತ ಸೇನಾ ಸಿಬ್ಬಂದಿಯ ಉಸ್ತುವಾರಿಯಲ್ಲಿ ಕಟ್ಟುನಿಟ್ಟಿನ ಶಿಸ್ತು ಪರಿಪಾಲನೆಯಾಗುತ್ತದೆ.ವಿಶ್ವದರ್ಜೆಯ ಮೂಲಸೌಕರ್ಯ: 2,000ಕ್ಕೂ ಹೆಚ್ಚು ವಸತಿ ವಿದ್ಯಾರ್ಥಿಗಳಿಗೆ ಸುಸಜ್ಜಿತ ವಸತಿ ನಿಲಯಗಳು, ಸ್ಮಾರ್ಟ್ ತರಗತಿಗಳು, 24/7 ವೈದ್ಯಕೀಯ ನೆರವು ಹಾಗೂ ಸಾತ್ವಿಕ ಆಹಾರ ಒದಗಿಸುವ ಸಂತೃಪ್ತಿ ಶುದ್ಧ ಸಸ್ಯಹಾರಿ ಭೋಜನಶಾಲೆ ಇಲ್ಲಿದೆ. ಜೊತೆಗೆ, ಇದು ಶೂನ್ಯ ತ್ಯಾಜ್ಯ ಕ್ಯಾಂಪಸ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಶೈಕ್ಷಣಿಕ ಸಾಧನೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಉತ್ತಮ ಸಂಸ್ಕಾರ ಬಯಸುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಆಯ್ಕೆಯಾಗಿದೆ.ಪ್ರವೇಶಾತಿ ಪ್ರಾರಂಭವಾಗಿದೆ: ಎಕ್ಸಲೆಂಟ್ ಪಿಯು ಕಾಲೇಜು, ಮೂಡುಬಿದಿರೆ, ವಿಳಾಸ: ಕಲ್ಲಬೆಟ್ಟು, ಮೂಡುಬಿದಿರೆ, ದಕ್ಷಿಣ ಕನ್ನಡ, ಕರ್ನಾಟಕ - 574197, ಸಂಪರ್ಕ / ಸಹಾಯವಾಣಿ: 76194 30144 / 99000 99652

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳಲ್ಲಿ ಶಿಸ್ತು
ಶಿಕ್ಷಣವು ದೇಶದ ಪ್ರಗತಿಗೆ ಮೂಲಾಧಾರ