ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ ವ್ರತ ಆಚರಿಸುತ್ತಿರುವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಬಧವಾರ ಸಂಜೆ ಭೇಟಿಯಾಗಿ ಆಶೀರ್ವಾದ ಪಡೆದರು.
ಮುರುಡೇಶ್ವರದ ಚಂದ್ರಹಿತ್ಲು, ಕನ್ನಡಶಾಲೆ, ಗರಡಿಗದ್ದೆ ಕೂಟದ ನಾಮಧಾರಿ ಭಕ್ತರು ಬುಧವಾರದ ಚಾತುರ್ಮಾಸ ವ್ರತಾಚರಣೆ ಸೇವೆಯಲ್ಲಿ ಪಾಲ್ಗೊಂಡು ತಮ್ಮ ಒಂದು ದಿನದ ಸೇವೆಯನ್ನು ಸಲ್ಲಿಸಿದರು.
ಸಂಜೆ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ ಗೋಳಿಕುಂಬ್ರಿ, ಉತ್ತರಕೊಪ್ಪ ಇವರ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ ಸತ್ಯಹರಿಶ್ಚಂದ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜನೆ: ಶಾಸಕರ ಜತೆ ಚರ್ಚೆಮುಂಡಗೋಡ: ತಾಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುವ ಕುರಿತು ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವಸಂತ ಕೊಣಸಾಲಿ ಅವರ ನೇತೃತ್ವದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಸನ್ಮಾನಿಸಲಾಯಿತು. ಕಸಾಪ ಘಟಕದ ಮಾಜಿ ಅಧ್ಯಕ್ಷ ಡಾ. ಪಿ.ಪಿ. ಛಬ್ಬಿ, ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಜಶೇಖರ ನಾಯ್ಕ, ಸದಸ್ಯ ಗೋಪಾಲ ಪಾಟೀಲ, ಕಸಾಪ ಸದಸ್ಯ ಸುಭಾಸ ವಡರ ಇದ್ದರು.